Advertisement

ಹಿಂಸಾಚಾರವೊಂದೇ ಸಮಸ್ಯೆಗೆ ಪರಿಹಾರವಲ್ಲ: ರಜನಿಕಾಂತ್ ಟ್ವೀಟ್ ಗೆ ಬೆಂಬಲ, ಟೀಕೆಗಳ ಸುರಿಮಳೆ

09:59 AM Dec 21, 2019 | Team Udayavani |

ತಮಿಳುನಾಡು : ಸೂಪರ್ ಸ್ಟಾರ್ ರಜಿನಿಕಾಂತ್ ಕೊನೆಗೂ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಮೌನ ಮುರಿದಿದ್ದು ಹಿಂಸಾಚಾರವೊಂದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಟ್ವೀಟ್ ಮಾಡಿದ್ದಾರೆ . ರಜನೀಕಾಂತ್ ಅವರ ಈ ಟ್ವೀಟ್,  ಟ್ವೀಟ್ಟರ್ ನಲ್ಲಿ ನಂಬರ್ 1 ಸ್ಥಾನ ಗಳಿಸಿದ್ದು ಪರ ವಿರೋಧ ಚರ್ಚೆಗೆ ಕಾರಣವಾಗಿದೆ.

Advertisement

ಭಾರತೀಯ ನಾಗರಿಕರು ರಾಷ್ಟ್ರದ ಭದ್ರತೆ ಮತ್ತು ಕಲ್ಯಾಣದ ಕುರಿತು  ಒಗ್ಗಟ್ಟಿನಿಂದಿರಬೇಕು ಮತ್ತು ಜಾಗೃತರಾಗಿರಬೇಕು. ಆದರೇ ದೇಶಾದ್ಯಂತ ಹಿಂಸಾಚಾರವಾಗುತ್ತಿರುವುದು ಕಂಡು ನಾನು ತುಂಬಾ ದುಃಖಿತನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದರು.

ಆದರೇ ಕೆಲ ಸಮಯದ ನಂತರ ನೆಟ್ಟಿಗರು ಪರ ವಿರೋಧದ ಚರ್ಚೆಯನ್ನು ಆರಂಭಿಸಿದ್ದು #IStandWithRajinikanth ಮತ್ತು #ShameOnYouSanghiRajini ಎಂಬ ಹ್ಯಾಷ್ ಟ್ಯಾಗ್ ಗಳು ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿವೆ.

ಕೆಟ್ಟ ಆಲೋಚನೆಗಳು ಮೊದಲು ನಮ್ಮನ್ನು ಆಕರ್ಷಿಸುತ್ತದೆ, ಆದರೆ ಸಮಸ್ಯೆಯನ್ನು ಪರಿಹರಿಸುವ ಬದಲು ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತವೆ. ಅಹಿಂಸೆ ಮತ್ತು ಉತ್ತಮ ಆಲೋಚನೆಗಳು ಆರಮಭದಲ್ಲಿ ನಮ್ಮ ಕಾರ್ಯಸಾಧುವಲ್ಲ ಎನಿಸಬಹದು. ಆದರೆ ಶಾಶ್ವತವಾದ ಪರಿಹಾರಗಳನ್ನು ಒದಗಿಸುತ್ತದೆ, ನಾವೆಲ್ಲರೂ ವಿದ್ಯಾವಂತರು. ಶಾಂತಿಯುತವಾಗಿ ಪ್ರತಿಭಟಿಸೋಣ ಎಂದು ಅಭಿಮಾನಿಗಳು ಕರೆ ನೀಡಿದ್ದಾರೆ.

ರಜನಿಕಾಂತ್ ಸಹ ಪೌರತ್ವ ಮಸೂದೆಯನ್ನು ಒಪ್ಪುವುದಿಲ್ಲ. ಹಾಗೆಂದು ಅವರು ಹಿಂಸಾಚಾರವನ್ನು ಸಮರ್ಥಿಸಲು ಹೋಗುವುದಿಲ್ಲ. ಒಬ್ಬ ನಿಜವಾದ ಭಾರತೀಯ ಯೋಚಿಸುವ ರೀತಿಯಲ್ಲಿ ರಜನಿ ಯೋಚಿಸುತ್ತಿದ್ದಾರೆ ಎಂದು ಕೆಲವು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

Advertisement

ರಜನಿಕಾಂತ್ ಎಂದಿಗೂ ಜನಪರ ನಿಲುವು ತಳೆದವರಲ್ಲ. ಅಧಿಕಾರದಲ್ಲಿರುವವರನ್ನು ಓಲೈಸುವುದೇ ಅವರಿಗೆ ಸದಾ ಮುಖ್ಯ. ಮೇಲಿದ್ದವರು ಯಾವ ಹೇಳಿಕೆ ನೀಡಿ ಎನ್ನುತ್ತಾರೋ, ಅಂಥದ್ದೇ ಹೇಳಿಕೆಯನ್ನು ರಜನಿ ಕೊಡುತ್ತಾರೆ ಎಂದು ಕೆಲವರು ಹರಿಹಾಯ್ದಿದ್ದಾರೆ.

ಭಗತ್ ಸಿಂಗ್ ಒಂದು ವೇಳೆ ಈಗ ಬದುಕಿದ್ದಿದ್ದರೆ ಅವರಿಗೆ ರಜನಿಕಾಂತ್ ನೀಡುತ್ತಿದ್ದ ಸಲಹೆ ಏನಾಗಿರುತ್ತಿತ್ತು. ಎಂದು ಪ್ರಶ್ನಿಸಿರುವ ಮತ್ತೊಬ್ಬರು ಭಾರತಕ್ಕೆ ಕೆಲ ಉತ್ತಮ ನಾಯಕರು ಬೇಕಿದ್ದಾರೆ ಎಂದು ಕೆಲವರು ರಜನಿಕಾಂತ್ ಅವರಿಗೆ ಆರ್ ಎಸ್ ಎಸ್ ಸಮವಸ್ತ್ರ ತೊಡಿಸಿರುವ ಚಿತ್ರದೊಂದಿಗೆ ಲೇವಡಿ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next