Advertisement

ಚುನಾವಣೆ ನೀತಿ ಸಂಹಿತೆಯ ನೆಪದಲ್ಲಿ ದೌರ್ಜನ್ಯ : ಐವನ್‌

11:56 AM Apr 17, 2018 | Team Udayavani |

ಮಂಗಳೂರು: ಚುನಾವಣಾ ನೀತಿ ಸಂಹಿತೆಯ ನೆಪದಲ್ಲಿ ಅಧಿಕಾರಿಗಳು ನಿಯಮ ಮೀರಿ ವರ್ತಿಸುತ್ತಿದ್ದು ಖಾಸಗಿ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಂದರೆ ನೀಡುತ್ತಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. ಈ ವಿಚಾರವನ್ನು ಡಿಸಿ ಗಮನಕ್ಕೂ ತರಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಹೇಳಿದರು.

Advertisement

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ತಾನು ರಾಜಕೀಯದಲ್ಲಿ ಸಕ್ರಿಯವಾಗಿದ್ದು, ಅಧಿಕಾರಿಗಳ ಇಂತಹ ವರ್ತನೆ ಕಂಡಿಲ್ಲ. ಅಧಿಕಾರಿಗಳು ಪರಿಸ್ಥಿತಿಯ ಲಾಭ ಪಡೆಯುತ್ತಿದ್ದು, ತುರ್ತು ಪರಿಸ್ಥಿತಿಯನುಭವವಾಗುತ್ತಿದೆ. ಅನಗತ್ಯವಾಗಿ ವಿಪರೀತ ತಪಾಸಣೆಯ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದರು.

ಮೂಡಬಿದಿರೆಯಲ್ಲಿ ಸಂಘಟನೆಯೊಂದು ವೈದ್ಯರಿಂದ ತಪಾಸಣೆಗೊಳಪಟ್ಟ ಫಲಾನುಭವಿಗಳಿಗೆ ಕನ್ನಡಕ ವಿತರಿಸಲು ಮುಂದಾದಾಗ ಅದಕ್ಕೂ ತೊಂದರೆ ನೀಡಿದ್ದಾರೆ. ಮದುವೆ ಸಮಾರಂಭ, ಚಿನ್ನ ಖರೀದಿ, ಮನೆಯ ಖರ್ಚಿಗಾಗಿ ಹಣ ಸಾಗಿಸುತ್ತಿದ್ದರೂ ಕಿರಿಕಿರಿ ನೀಡುತ್ತಿದ್ದಾರೆ. ಖಾಸಗಿ ಸಮಾರಂಭದಲ್ಲಿ ಮದ್ಯ ವಿತರಿಸಲು ಪರವಾನಿಗೆ ಬೇಕು ಎನ್ನುತ್ತಾರೆ. ಆದರೆ ನೀಡಲು ಸತಾಯಿಸುವ ಸ್ಥಿತಿ ಇದೆ. ಹೀಗಾಗಿ ಆಯೋಗಕ್ಕೆ ದೂರು ನೀಡಲು ತೀರ್ಮಾನಿಸಿದ್ದೇವೆ ಎಂದರು.

ಅಸಮಾಧಾನ ಶೀಘ್ರ ಶಮನ
ಕಾಂಗ್ರೆಸ್‌ ಪಕ್ಷವು ಒಮ್ಮತದ ತೀರ್ಮಾನದೊಂದಿಗೆ 218 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎಲ್ಲ ನಾಯಕರು ಜತೆ ಸೇರಿ ಚುನಾವಣೆಯನ್ನು ಎದುರಿಸಲಿ ದ್ದೇವೆ. ಈ ಬಾರಿಯ ಚುನಾವಣೆ ಸತ್ಯ-ಅಸತ್ಯ, ಸರ್ವಾಧಿ ಕಾರ -ಪ್ರಜಾಪ್ರಭುತ್ವ, ಕೆಟ್ಟ ಶ್ರೀಮಂತಿಕೆ- ಬಡತನದ ಮಧ್ಯೆ ನಡೆಯಲಿದೆ. ಆಕಾಂಕ್ಷಿಗಳಲ್ಲಿ ಕೆಲವೆಡೆ ಅಸಮಾಧಾನ ವಿದ್ದರೂ ಶೀಘ್ರವೇ ಶಮನವಾಗಲಿದೆ. 130ರಿಂದ 140 ಸ್ಥಾನಗಳನ್ನು ಗೆಲ್ಲುವ ಭರವಸೆ ಇದೆ ಎಂದರು.

ಪ್ರತೀ ಬ್ಲಾಕ್‌ನಲ್ಲಿ ಪ್ರತಿಭಟನೆ
ಕಥುವಾ ಅತ್ಯಾಚಾರ ಪ್ರಕರಣ ಖಂಡಿಸಿ ಎ. 17ರಂದು ದೇಶಾದ್ಯಂತ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಯಲಿದ್ದು, ಅಂದು ಬೆಳಗ್ಗೆ 10ಕ್ಕೆ ಜಿಲ್ಲೆಯ ಎಲ್ಲ ಬ್ಲಾಕ್‌ ಕಾಂಗ್ರೆಸ್‌ ಮಟ್ಟ ದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದರು. 

Advertisement

ಪ್ರತಿಭಾ ಕುಳಾç, ಜೆಸಿಂತಾ ಆಲ್ಫೆ†ಡ್‌, ಲತಾ ಸಾಲಿಯಾನ್‌, ನಝೀರ್‌ ಬಜಾಲ್‌, ಶಕುಂತಳಾ ಕಾಮತ್‌, ಪುನೀತ್‌ ಶೆಟ್ಟಿ, ನಾಗೇಂದ್ರಕುಮಾರ್‌, ಭಾಸ್ಕರ ರಾವ್‌, ಎಂ.ಪಿ. ಮನುರಾಜ್‌, ಮುದಸ್ಸಿರ್‌ ಕುದ್ರೋಳಿ ಉಪಸ್ಥಿತರಿದ್ದರು. 

ಮೂಡಬಿದಿರೆ ಕ್ಷೇತ್ರದಲ್ಲಿ ತಾನು ಅರ್ಜಿ ಸಲ್ಲಿಸಿದ್ದು ನಿಜ. ಆದರೆ ಹಾಲಿ ಶಾಸಕರಿಗೆ ಅವಕಾಶ ನೀಡಲಾಗಿದ್ದು, ತಾನು ಅವರ ಗೆಲುವಿಗಾಗಿ ಪ್ರಯತ್ನಿಸಲಿದ್ದೇನೆ. ಈಗಾಗಲೇ ತಾನು ಅಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದು, ಅದು ಕೆ. ಅಭಯಚಂದ್ರ ಜೈನ್‌ ಗೆಲುವಿಗೆ ಪೂರಕವಾಗಲಿದೆ. ಮೂಡಬಿದಿರೆ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಚಾರಕ್ಕೆ ಕರೆದರೆ ಹೋಗಲು ಸಿದ್ಧ. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಪ್ರಚಾರ ಕಾರ್ಯ ನಡೆಸಲಿದ್ದೇನೆ.
 -ಐವನ್‌ ಡಿ’ಸೋಜಾ, ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next