Advertisement

ಯುಪಿಯಲ್ಲಿ ಗುಂಡೇಟಿಗೆ ಬಿಎಸ್ಪಿ ಮುಖಂಡ ಬಲಿ, ಬಸ್ ಗೆ ಬೆಂಕಿ

02:17 PM Oct 03, 2017 | Team Udayavani |

ಅಲಹಾಬಾದ್: ಬಹುಜನ್ ಸಮಾಜ್ ಪಕ್ಷ(ಬಿಎಸ್ ಪಿ)ದ ಮುಖಂಡರೊಬ್ಬರನ್ನು ಮಂಗಳವಾರ ಬೆಳಗ್ಗೆ ಗುಂಡಿಟ್ಟು ಹತ್ಯೆಗೈದ ಘಟನೆ ಉತ್ತರಪ್ರದೇಶದ ಅಲಹಾಬಾದ್ ನಲ್ಲಿ ನಡೆದಿದ್ದು, ರೊಚ್ಚಿಗೆದ್ದ ಬಿಎಸ್ ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ, ಮತ್ತೊಂದೆಡೆ ಎರಡು ಬಸ್ ಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಇಳಿದಿದ್ದು, ಉದ್ವಿಗ್ನಗೊಂಡ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಲಹಾಬಾದ್ ಯೂನಿರ್ವಸಿಟಿ ಹಾಸ್ಟೆಲ್ ಹೊರಭಾಗದಲ್ಲಿ ರಾಜೇಶ್ ಯಾದವ್(46ವರ್ಷ) ಅವರನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ. ಯಾದವ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next