Advertisement
ಗಲಭೆಗಳಿಗೆ ಪ್ರೇರಣೆ ನೀಡಿದ್ದು ಮಾತ್ರವಲ್ಲ, ಗಲಭೆಯನ್ನು ಎಲ್ಲಿ ನಡೆಸಬೇಕು, ಹೇಗೆ ಜನರನ್ನು ಸಂಘಟಿಸಬೇಕು ಎಂಬಿ ತ್ಯಾದಿ ಮಾಹಿತಿಗಳೆಲ್ಲವೂ ಗಲಭೆಕೋರರಿಗೆ ರವಾನೆಯಾಗಿವೆ. ಆಡಿಯೋ ಕ್ಲಿಪ್‌ಗ್ಳಲ್ಲಿ ಇದ್ದ ನಿರ್ದೇಶನದಂತೆಯೇ ಗಲಭೆಗಳು ನಡೆ ದಿವೆ. ಹಾಗಾಗಿ ಸಿಕಂದರಾಬಾದ್‌ನಲ್ಲಿ ನಡೆದ ಗಲಭೆಯ ಹಿಂದೆ ದೊಡ್ಡದೊಂದು ಷಡ್ಯಂ ತರವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಸಿಂಗ್ ಸಭೆ: ಹಲವಾರು ರಾಜ್ಯಗಳಲ್ಲಿ ಅಗ್ನಿಪಥ್ ಗಲಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರದಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ನಿವಾಸದಲ್ಲಿ ಭಾರತದ ಮೂರೂ ಪಡೆಗಳ ಮುಖ್ಯಸ್ಥರ ಜತೆಗೆ ಮಹತ್ವದ ಸಭೆ ನಡೆಸಿದರು.
ಸೇನಾ ಸೇವೆ ಕಡ್ಡಾಯವಿರುವ ದೇಶಗಳುರಷ್ಯಾ: 18-27 ವರ್ಷದ ಯುವಕರಿಗೆ 12 ತಿಂಗಳು ಸೇನೆಯಲ್ಲಿ ಕೆಲಸ ಕಡ್ಡಾಯ. ತಪ್ಪಿದಲ್ಲಿ ದಂಡ, ಜೈಲು.
ಉ. ಕೊರಿಯಾ: 17-18 ವರ್ಷಕ್ಕೆ ಶಾಲಾ ಶಿಕ್ಷಣ ಮುಗಿದಾಕ್ಷಣ ಸೇನೆ ಸೇರಬೇಕು. ಯುವಕರಿಗೆ 10 ವರ್ಷ, ಯುವತಿಯರಿಗೆ 7 ವರ್ಷ ಸೇವೆ.
ದಕ್ಷಿಣ ಕೊರಿಯಾ: ಯುವಕರಿಗೆ ಸೇನೆಯಲ್ಲಿ 21 ತಿಂಗಳು/ ನೌಕಾಪಡೆ ಯಲ್ಲಿ 23 ತಿಂಗಳು/ವಾಯುಪಡೆಯಲ್ಲಿ 24 ತಿಂಗಳ ಸೇವೆ ಕಡ್ಡಾಯ.
ಇಸ್ರೇಲ್: 18 ವರ್ಷ ತುಂಬಿರುವವರಿಗೆ ಸೇವೆ ಕಡ್ಡಾಯ. ಯುವಕರಿಗೆ 2 ವರ್ಷ 8 ತಿಂಗಳು ಹಾಗೂ ಯುವತಿಯರಿಗೆ 2 ವರ್ಷ ಕಡ್ಡಾಯ ಸೇವೆ.
ಬ್ರೆಜಿಲ್: 18 ವರ್ಷದ ಮೇಲ್ಪಟ್ಟ ಯುವಕರಿಗೆ 12 ತಿಂಗಳು ಸೇನೆಯಲ್ಲಿ ಕೆಲಸ ಕಡ್ಡಾಯ. ತಪ್ಪಿದವರು ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.
ಇರಾನ್:18 ವರ್ಷ ಮೇಲ್ಪಟ್ಟ ಯುವಕರಿಗೆ 18-24 ತಿಂಗಳು ಸೇವೆ ಕಡ್ಡಾಯ. ತಪ್ಪಿದಲ್ಲಿ ಸರಕಾರಿ ಕೆಲಸ, ಸರಕಾರಿ ಸೌಲಭ್ಯ ಕೈ ಸೇರುವುದಿಲ್ಲ.
ಟರ್ಕಿ: 20-41 ವರ್ಷದ ಪುರುಷರಿಗೆ ಸೇವೆ ಕಡ್ಡಾಯ.
ಕ್ಯೂಬಾ: 17-28 ವರ್ಷದ ಯುವಕರಿಗೆ 2 ವರ್ಷ ಸೇನೆಯ ಸೇವೆ ಕಡ್ಡಾಯ. ತಪ್ಪಿದಲ್ಲಿ ದಂಡ, ಜೈಲುಶಿಕ್ಷೆ.
ಸ್ವಿಟ್ಸರ್ಲೆಂಡ್: 20 ವರ್ಷ ಮೇಲ್ಪಟ್ಟ ಯುವಕರಿಗೆ 21 ವಾರಗಳ ಕಾಲ ಸೇನೆಯಲ್ಲಿ ಕೆಲಸ ಮಾಡುವುದು ಕಡ್ಡಾಯ.
ಎರಿಟ್ರಿಯಾ: ಸೆಕೆಂಡರಿ ಶಾಲಾ ಶಿಕ್ಷಣದಲ್ಲಿಯೇ ವಿದ್ಯಾರ್ಥಿಗಳಿಗೆ ಸೇನಾ ತರಬೇತಿ ಕಡ್ಡಾಯ. 18 ತಿಂಗಳ ಸೇವೆ ಕಡ್ಡಾಯವೆಂಬ ನಿಯಮವಿದ್ದರೂ ಅನಿರ್ದಿಷ್ಟಾವಧಿ ಸೇವೆ ಮಾಡಿಸಿಕೊಳ್ಳುತ್ತಿರುವ ಸೇನೆ.
ಸ್ವೀಡನ್: 2010ರಲ್ಲಿ ರದ್ದು ಮಾಡಲಾಗಿದ್ದ ಕಡ್ಡಾಯ ನಿಯಮವನ್ನು ಮರು ಜಾರಿಗೆ ಚಿಂತನೆ. ಯುವಕ ಮತ್ತು ಯುವತಿಯರಿಗೆ 9ರಿಂದ 12 ತಿಂಗಳು ಸೇವೆ ಕಡ್ಡಾಯ ಸಾಧ್ಯತೆ.