ಶಿವಮೊಗ್ಗ: ಲಾಕ್ ಡೌನ್ ನಿಯಮ ಮೀರಿ ವಾಕಿಂಗ್ ಮಾಡುತ್ತಿದ್ದ50 ಕ್ಕೂ ಹೆಚ್ಚಿನ ಜನರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದೆ. ಈ ಕಠಿಣ ನಿಯಮದ ಹೊರತಾಗಿಯೂ ನಗರದ ನೆಹರೂ ಮೈದಾನದ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಜನರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದ ಎಲ್ಲರಿಗೂ ಡಿವೈಎಸ್ಪಿ ಪ್ರಶಾಂತ್ ವ್ಯಾಯಾಮ ಮಾಡಿಸಿದ್ದಾರೆ.
ಇದನ್ನೂ ಓದಿ; ತಬ್ಬಲಿಯಾದವು 9 ಸಾವಿರ ಮಕ್ಕಳು: ಕೋವಿಡ್ ನಿಂದ ಕರ್ನಾಟಕದ 36 ಸೇರಿ 9,346 ಮಕ್ಕಳು ಅನಾಥ
ಕೋಟೆ ಸಿಪಿಐ ಚಂದ್ರಶೇಖರ್, ವಿನೋಬನಗರ ಸಿಪಿಐ ರವಿ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ನಿಯಮ ಮೀರಿದವರನ್ನು ಆಯಾ ಠಾಣೆ ಮುಂದೆ ಪೊಲೀಸರು ವ್ಯಾಯಾಮ ಮಾಡಿಸಿ, ಬುದ್ದಿವಾದ ಹೇಳಿ ಕಳುಹಿಸಿದ್ದಾರೆ. ಈ ವೇಳೆ ಮತ್ತೇ ನಿಯಮ ಉಲ್ಲಂಘಿಸಿ ವಾಕಿಂಗ್ ಬಂದರೆ ಕೋವಿಡ್ ಟೆಸ್ಟ್ ಮಾಡಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.