ಕಲಬುರಗಿ: ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಧಾರದ ಮೇಲೆ ಬಿಜೆಪಿ ನಾಯಕರ ವಿರುದ್ದ FIR ದಾಖಲಾಗಿದೆ.
ಕಲಬುರಗಿಯ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅನ್ನದಾಸೋಹ ಕಾರ್ಯಾಕ್ರಮದಲ್ಲಿ ಬಿಜೆಪಿ. ರಾಜಕೀಯ ವ್ಯಕ್ತಿಗಳ ಬ್ಯಾನರ್ ಹಾಕಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಕಲಬುರಗಿಯ ಐತಿಹಾಸಿಕ ಶ್ರೀಶರಣಬಸವೇಶ್ವರ ಜಾತ್ರೆಯ ಅಂಗವಾಗಿ ಆಯೋಜಿಸಲಾದ ಅನ್ನದಾಸೋಹದಲ್ಲಿ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಬ್ರಹ್ಮಪೂರದ ಕಲ್ಯಾಣಿ ಪೆಟ್ರೋಲ್ ಪಂಪ್ ಹತ್ತಿರ ಶ್ರೀ. ಬಿ.ಜಿ ಪಾಟೀಲ್ ಫೌಂಡೇಷನ್ ರವರ ಅನ್ನದಾಸೋಹದ ಬ್ಯಾನರ್ ನಲ್ಲಿ ರಾಜಕೀಯ ವ್ಯಕ್ತಿಗಳ ಫೋಟೋ ಹಾಕಲಾಗಿದೆ.
ಬ್ಯಾನರ್ ನಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್ ಬಿಜೆಪಿ ಕಲಬುರಗಿ ಮಹಾನಗರ ಘಟಕದ ಅಧ್ಯಕ್ಷ ಚಂದು ಪಾಟೀಲ್ ಹಾಗೂ ಇನ್ನಿತರರ ಭಾವ ಚಿತ್ರಗಳನ್ನು ಬ್ಯಾನರ್ ನಲ್ಲಿ ಹಾಕಿಕೊಂಡು, ಶಾಮಿಯನ್ ಹಾಕಿಸಿ ಅನ್ನದಾಸೋಹ ಏರ್ಪಡಿಸಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದರಿಂದ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ನಾಯಕರ ಮೇಲೆ FIR ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Congress; ಬಡವರ ಬದುಕು ಹಸನು ಮಾಡಿರುವ ಗ್ಯಾರಂಟಿ ಕುರಿತು ತಪ್ಪು ಸಂದೇಶ; ಗೀತಾ ಆಕ್ರೋಶ