Advertisement

ಮಾರ್ಗಸೂಚಿ ಉಲ್ಲಂಘನೆ: ಒಂದೇ ದಿನ 4.3 ಲಕ್ಷ ದಂಡ

11:57 AM Oct 04, 2020 | Suhan S |

ಬೆಂಗಳೂರು: ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದವರ ಮೇಲೆ ತಲಾ ಸಾವಿರ ರೂ. ದಂಡ ವಿಧಿಸುತ್ತಿರುವುದಕ್ಕೆ ಸಾರ್ವಜನಿಕರ ರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Advertisement

ಈ ಮಧ್ಯೆ ಮಾರ್ಷಲ್‌ಗ‌ಳು ಕೋವಿಡ್ ನಿಯಮ ಉಲ್ಲಂಘನೆ ಮಾಡಿದ 453 ಜನರಿಂದ ಬರೋಬ್ಬರಿ 4.3 ಲಕ್ಷ ರೂ. ಶನಿವಾರ ಒಂದೇ ದಿನ ದಂಡ ವಸೂಲಿ ಮಾಡಿದ್ದಾರೆ. ಮಾಸ್ಕ್ ಧರಿಸದೆ ಓಡಾಡಿದ 412 ಜನರಿಂದ ತಲಾ ಒಂದು ಸಾವಿರ ರೂ.ನಂತೆ 4,3,767 ರೂ. ದಂಡ ವಸೂಲಿ ಮಾಡಲಾಗಿದೆ. ಸಾಮಾಜಿಕ ಅಂತರ ಮರೆತ 41 ಜನರಿಂದ 35,200 ರೂ. ಸೇರಿ ಒಟ್ಟು 3,68,567 ರೂ. ದಂಡ ಸಂಗ್ರಹ ಮಾಡಲಾಗಿದೆ.

ನಿಯಮ ಉಲ್ಲಂಘನೆ ಮಾಡುತ್ತಿರುವವರ ಮೇಲೆ ತಲಾ ಒಂದು ಸಾವಿರ ರೂ. ದಂಡ ವಿಧಿಸುವುದಕ್ಕೆ ಹೋದ ಮಾರ್ಷಲ್‌ಗ‌ಳು ಶನಿವಾರ ಆಕ್ರೋಶಕ್ಕೆ ಗುರಿಯಾದರು. ಬಹುತೇಕ ಕಡೆಗಳಲ್ಲಿ ದಂಡ ಪಾವತಿ ಮಾಡುವುದಕ್ಕೆ ಜನರು ಆಕ್ಷೇಪ ವ್ಯಕ್ತಪಡಿಸಿದರು.

ಆರು ದಿನದಲ್ಲಿ 2 ಕೋಟಿಗೂ ಅಧಿಕ ದಂಡ ಸಂಗ್ರಹ :

 ಬೆಂಗಳೂರು: ಕೋವಿಡ್  ಹಿನ್ನೆಲೆಯಲ್ಲಿ ಮಾರ್ಚ್‌ನಿಂದ ತಾತ್ಕಾಲಿಕವಾಗಿಸಂಚಾರ ನಿಯಮ ಉಲ್ಲಂಘನೆ ವಿರುದ್ಧ  ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಸಂಚಾರ ಪೊಲೀಸರು ಇದೀಗ ವಾಹನ ಗಳ ತಪಾಸಣೆ ಹಾಗೂ ಸ್ಥಳದಲ್ಲೇ ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.

Advertisement

ಈ ಸಂಬಂಧ ಸೆ.20ರಿಂದ ಸೆ.26 ರವರೆಗೆ ನಗರದ ಎಲ್ಲ ಸಂಚಾರ ಠಾಣೆವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಕೇವಲ ಆರೇ ದಿನದಲ್ಲಿ ಬರೋಬ್ಬರಿ 2,35,33,100 ರೂ. ದಂಡ ಸಂಗ್ರಹಿಸಿದ್ದಾರೆ. ಹೆಲ್ಮೆಟ್‌ ಧರಿಸದವರ ವಿರುದ್ಧ18,319 ಪ್ರಕರಣ ದಾಖಲಿಸಿ, 68,39,600 ರೂ., ಹಿಂಬದಿ ಹೆಲ್ಮೆಟ್‌  ಧರಿಸದವರ ವಿರುದ್ಧ11,606 ಪ್ರಕರಣ ದಾಖಲಿಸಿ 43,58,800 ರೂ. ದಂಡ ಸಂಗ್ರಹಿಸಿದ್ದಾರೆ. ಸಿಗ್ನಲ್‌ ಜಂಪಿಂಗ್‌ವಿರುದ್ಧ 5,967 ಪ್ರಕರಣ ದಾಖಲಿಸಿ 21,39,900 ರೂ. ಮೊಬೈಲ್‌ ಬಳಕೆ1,620 ಪ್ರಕರಣ ದಾಖಲಿಸಿ 11,10,200 ರೂ.ಸೀಟ್‌ ಬೆಲ್ಟ್ಧರಿಸದವರ ವಿರುದ್ಧ 2,228 ಪ್ರಕರಣ ದಾಖಲಿಸಿ 10,33,800 ರೂ., ನೋ ಎಂಟ್ರಿ 2,684 ಪ್ರಕರಣ ದಾಖಲಿಸಿ 10,18,600 ರೂ., ಸ್ಟಾಪ್‌ ಲೈನ್‌ ಉಲ್ಲಂಘನೆ1,171 ಪ್ರಕರಣದಾಖಲಿಸಿ 11,24,000 ರೂ. ಹಾಗೂ ವಾಹನ ಪರವಾನಿಗೆ ಕೊಂಡೊಯ್ಯದವರವಿರುದ್ಧ(ದ್ವಿಚಕ್ರವಾಹನ)394ಪ್ರಕರಣದಾಖಲಿಸಿ 2,11,000 ರೂ. ದಂಡ ಸಂಗ್ರಹಿಸಲಾಗಿದೆ.

ಇತರೆ 78 ವಿವಿಧ ಸಂಚಾರನಿಯಮ ಉಲ್ಲಂಘನೆಗಳ ವಿರುದ್ಧ ಪ್ರಕರಣದಾಖಲಿಸಿ 2,35,33,100 ರೂ. ದಂಡ  ಸಂಗ್ರಹಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next