Advertisement

ರಸಗೊಬ್ಬರ ನಿಯಂತ್ರಣ ಕಾಯ್ದೆ ಉಲ್ಲಂಘನೆ: ವಿತರಕರು,ಚಿಲ್ಲರೆ ಮಾರಾಟಗಾರರ ಪರವಾನಗಿ ಅಮಾನತ್ತು

08:51 PM Aug 15, 2020 | mahesh |

ಧಾರವಾಡ: ಜಮೀನಿನ ಪ್ರಮಾಣಕ್ಕಿಂತಲೂ ಅಧಿಕ ರಸಗೊಬ್ಬರ ಮಾರಾಟ ಮಾಡಿರುವ ಜಿಲ್ಲೆಯ ಹತ್ತು ರಸಗೊಬ್ಬರ ವಿತರಕರು ಹಾಗೂ ಚಿಲ್ಲರೆ ಮಾರಾಟಗಾರರ ಪರವಾನಿಗೆಗಳನ್ನು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ರದ್ದುಗೊಳಿಸಿದ್ದಾರೆ.

Advertisement

ಜಿಲ್ಲೆಯಾದ್ಯಂತ ಉತ್ತಮ ಬಿತ್ತನೆಯಾಗಿದ್ದು , ಹೆಚ್ಚಿನ ಮಳೆ ಸಹ ಆಗುತ್ತಿರುವುದರಿಂದ ರೈತರಿಂದ ಯೂರಿಯಾ ರಸಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಸಂದರ್ಭದಲ್ಲಿ ರಸಗೊಬ್ಬರ ಮಾರಾಟ ಪರವಾನಗಿ ಹೊಂದಿದ ಕೆಲವು ವಿತರಕರು ರಸಗೊಬ್ಬರ ನಿಯಂತ್ರಣ ಕಾಯ್ದೆ 1985 ರ ಉಲ್ಲಂಘನೆ ಮಾಡಿ ಕೆಲವು ರೈತರ ಹೆಸರಿಲ್ಲಿ ಅವರು ಹೊಂದಿದ ಜಮೀನಿನ ಪ್ರಮಾಣಕ್ಕಿಂತಲೂ ಅಧಿಕ ರಸಗೊಬ್ಬರ ಮಾರಾಟ ಮಾಡಿರುವ ಅಂಶ ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಹತ್ತು ರಸಗೊಬ್ಬರ ವಿತರಕರು ಹಾಗೂ ಚಿಲ್ಲರೆ ಮಾರಾಟಗಾರರ ಪರವಾನಿಗೆಗಳನ್ನು ತಕ್ಷಣದಿಂದಲೇ ಅಮಾನತ್ತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.

ಕಾಳಸಂತೆಯಲ್ಲಿ ಯೂರಿಯಾ ಮಾರಾಟವಾಗುವುದನ್ನು ತಡೆಯಲು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯು ರಸಗೊಬ್ಬರ ವಿತರಕರು ,ಚಿಲ್ಲರೆ ಮಾರಾಟಗಾರರ ಮೇಲೆ ಕಣ್ಣಾವಲಿರಿಸಿದೆ. ಕೃಷಿ ಇಲಾಖೆಯ ಪರಿವೀಕ್ಷಕರ ತಂಡಗಳು ಹಾಗೂ ತಹಶಿಲ್ದಾರ್‌ಗಳು ಜಂಟಿಯಾಗಿ ಪರಿವೀಕ್ಷಣೆ ನಡೆಸಿ ಅತೀಹೆಚ್ಚು ಯೂರಿಯಾ ರಸಗೊಬ್ಬರ ಖರೀದಿಮಾಡಿದ ರೈತರನ್ನು ಗುರುತಿಸಿದೆ.ರೈತರು ಹೊಂದಿರುವ ಭೂಮಿಗಿಂತ ಹೆಚ್ಚು ಯೂರಿಯಾವನ್ನು ವಿತರಕರು ಮಾರಾಟ ಮಾಡಿದ್ದು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಈ ಹತ್ತು ಚಿಲ್ಲರೆ ಮಾರಾಟಗಾರರ ರಸಗೊಬ್ಬರ ಪರವಾನಿಗೆಯನ್ನು ಅಮಾನತುಗೊಳಿಸಲಾಗಿದೆ.

1)ವೀರಭದ್ರೇಶ್ವರ ಅಗೋ ಟ್ರೇಡರ್ಸ್, ಗರಗ ತಾ : ಧಾರವಾಡ .
2)ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ , ಡೋರಿ , ತಾ : ಅಳ್ಳಾವರ .
3)ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ , ತಾವರಗೇರಿ , ತಾ : ಕಲಘಟಗಿ ,
4)ಕೆ.ಬಿ.ಎನ್ . ಅಗ್ರೋ ಸೆಂಟರ್ ಮತ್ತು ಟ್ರೇಡರ , ಕಲಘಟಗಿ ತಾ : ಕಲಘಟಗಿ ,
5 ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ , ಅಣ್ಣಿಗೇರಿ , ತಾ : ಅಣ್ಣಿಗೇರಿ .
6 ) ಜುವಾರಿ ಅಗ್ರೋ ಕೆಮಿಕಲ್ಸ್ ಲಿ , ( ಜುವಾರಿ ಜಂಕ್ಷನ್ ) , ನವಲಗುಂದ ,ತಾ : ನವಲಗುಂದ .
7 ) ಎಕ್ಸಡ್ ಕ್ರಾಪ್ ಸೈನ್ಸ್ ಪ್ರೈ.ಲೀ , ಗಾಮನಗಟ್ಟಿ , ತಾ : ಹುಬ್ಬಳ್ಳಿ
8 ) ಮೆ . ಬಸವೇಶ್ವರ ಸೌಹಾರ್ದ ಸಹಕಾರಿ ನಿಯಮಿತ , ಹುಬ್ಬಳ್ಳಿ ತಾ : ಹುಬ್ಬಳ್ಳಿ ,
9 ) ಸಂಯುಕ್ತ ಅಗ್ರಿಟೆಕ್ , ಗಾಮನಗಟ್ಟಿ ತಾ : ಹುಬ್ಬಳ್ಳಿ ,
10 ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ , ಬು.ತರ್ಲಘಟ್ಟ , ತಾ : ಕುಂದಗೋಳ .

Advertisement

Udayavani is now on Telegram. Click here to join our channel and stay updated with the latest news.

Next