ಸಾರ್ವಜನಿಕವಾಗಿ ಮತದಾರರಿಗೆ ಹಣ ಹಂಚುತ್ತಿದ್ದಾಗ ತಹಶೀಲ್ದಾರ್‌ಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, 85 ಸಾವಿರ
ರೂ. ವಶಪಡಿಸಿಕೊಂಡಿರುವ ಚುನಾವಣಾ ಅಧಿಕಾರಿಗಳು ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
Advertisement
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ನಗರದ ತಾಲೂಕು ಕಚೇರಿ ಆವರಣದಲ್ಲಿ ಇರಿಸಲಾಗಿರುವ ಮತಗಟ್ಟೆ ಬಗ್ಗೆ ಮಾಹಿತಿ ಹಾಗೂ ಮತದಾನದ ಚೀಟಿ ವಿತರಣೆ ಮಾಡಲು ತಾಲೂಕು ಕಚೇರಿ ಮುಂಭಾಗದಲ್ಲಿ ಮೂರು ಪಕ್ಷದ ಅಭ್ಯರ್ಥಿ ಪರ ಬೆಂಬಲಿಗರು ಕುಳಿತಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಬೆಂಬಲಿಗ ತಾಲೂಕಿನ ಹತ್ತಿಹಳ್ಳಿ ಪ್ರೌಢಶಾಲಾ ಶಿಕ್ಷಕ ವೆಂಕಟೇಶ್ ಚುನಾವಣೆ ಆಯೋಗದ ನಿಯಮ ಉಲ್ಲಂಘಿಸಿ ಸಾರ್ವಜನಿಕವಾಗಿ ಮತದಾರರಿಗೆ ಹಣದಾಸೆ ತೋರಿಸಿ ಹಣ ಹಂಚುತ್ತಿದ್ದ ವೇಳೆ ಆರ್‌ಒ ತಹಶೀಲ್ದಾರ್ ವರ್ಷ ಒಡೆಯರ್ ಅವರಿಗೆ ಸಿಕ್ಕಿಬಿದ್ದಿದ್ದಾನೆ.
Related Articles
ಶಿಕ್ಷಕರ ಕ್ಷೇತ್ರದ ಚುನಾವಣೆಗೆ ತಾಲೂಕಿನ ಹಾರೋಹಳ್ಳಿಯಲ್ಲಿ 105 ಮತದಾರರಲ್ಲಿ 88, ಕೋಡಿಹಳ್ಳಿಯ 63 ಮತದಾರರಲ್ಲಿ 55, ಹಾಗೂ ನಗರವ್ಯಾಪ್ತಿಯ 497 ಮತದಾರರಲ್ಲಿ 439 ಮತಗಳು ಚಲಾವಣೆಯಾಗಿವೆ. ಹಣ ಹಂಚಿಕೆ ಪ್ರಕರಣ ಹೊರತುಪಡಿಸಿ ತಾಲೂಕಿನ ಮೂರು ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು.
Advertisement