Advertisement

ನೀತಿ ಸಂಹಿತೆ ಉಲ್ಲಂಘನೆ: ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಎಫ್ ಐಆರ್

08:06 PM Mar 30, 2023 | Team Udayavani |

ಬೆಳಗಾವಿ: ನಿಪ್ಪಾಣಿ‌ ಪಟ್ಟಣದ ಮುನ್ಸಿಪಲ್ ಆವರಣದಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಅತಿಶಿನ-ಕುಂಕುಮ‌ ಕಾರ್ಯಕ್ರಮ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ‌ ಮೇಲೆ ಸಚಿವೆ ಶಶಿಕಲಾ‌ ಜೊಲ್ಲೆ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ನಿಪ್ಪಾಣಿ ಪಟ್ಟಣದ ಮುನ್ಸಿಪಲ್ ಆವರಣದಲ್ಲಿ ಮಹಿಳೆಯರಿಗಾಗಿ ಅರಿಶಿನ- ಕುಂಕುಮ ಕಾರ್ಯಕ್ರಮ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಶಶಿಕಲಾ‌ಜೊಲ್ಲೆ ಹಾಗೂ ರಣರಾಗಿನಿ‌ ಮಹಿಳಾ ಮಂಡಳ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅತಿಶಿನ‌ ಕುಂಕುಮ ಕಾರ್ಯಕ್ರಮದಲ್ಲಿ ಶಶಿಕಲಾ ಜೊಲ್ಲೆ ಸಭಿಕರೊಂದಿಗೆ ಕುಳಿತುಕೊಂಡಿದ್ದರು. ಈ ವೇಳೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆ ಇರುವ ಹಾಡಿನ ವಿಡಿಯೋ ಬಿತ್ತರಿಸಲಾಗಿತ್ತು. ಬಿಜೆಪಿ ಚಿಹ್ನೆಯನ್ನೂ ಪ್ರದರ್ಶಿಸಲಾಗಿತ್ತು. ನಂತರ ಎಲ್ಲರಿಗೂ ಸಾಮೂಹಿಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.

ಚುನವಣಾ ಅಧಿಕಾರಿಗಳು ನೀಡಿದ ಅನುಮತಿ ಉಲ್ಲಂಘಿಸಿದ್ದರಿಂದ ನಿಪ್ಪಾಣಿ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ನಿಪ್ಪಾಣಿ ನಗರಸಭೆ ಪೌರಾಯುಕ್ತ ಜಗದೀಶ ಹುಲಗಜ್ಜೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next