Advertisement

50 ವರ್ಷ ಪೂರೈಸಿದ್ದರಷ್ಟೇ ವಿಂಟೇಜ್‌ ವಾಹನ! ಸರ್ಕಾರದ ಹೊಸ ನಿಯಮ

02:27 PM Nov 29, 2020 | keerthan |

ಹೊಸದಿಲ್ಲಿ: ನೋಂದಾಯಿಸಲ್ಪಟ್ಟ ದಿನಾಂಕದಿಂದ 50 ವರ್ಷ ಪೂರೈಸಿದ ಕಾರು, ಬೈಕುಗಳನ್ನು ವಿಂಟೇಜ್‌ ವಾಹನಗಳೆಂದು ಪರಿಗಣಿಸಲು ಸರಕಾರ ಮುಂದಾಗಿದೆ.

Advertisement

1989ರ ಕೇಂದ್ರ ಮೋಟಾರ್‌ ವಾಹನಗಳ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ರೂಪಿಸಲು ಮುಂದಾಗಿರುವ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ವಿಂಟೇಜ್‌ ಕಾರುಗಳ ಹಕ್ಕು, ಖರೀದಿ ಸಂಬಂಧ ಕರಡು ನಿಯಮಾವಳಿ ಸಿದ್ಧಪಡಿಸಿದೆ.

ಬಳಕೆದಾರರ ಸಲಹೆ, ಸೂಚನೆ ಆಲಿಸಿ ಅಂತಿಮವಾಗಿ ನಿಯಮಾವಳಿ ಪ್ರಕಟಿಸಲಿದೆ. ವಿಂಟೇಜ್‌ ವಾಹನಗಳ ಮೊದಲ ನೋಂದಣಿಗೆ 50 ವರ್ಷ ಭರ್ತಿಯಾಗಿರಬೇಕು.

ಇದನ್ನೂ ಓದಿ:ಬಾಹ್ಯಾಕಾಶದಲ್ಲಿ ಭಾರತ- ರಷ್ಯಾ ಉಪಗ್ರಹ ಮುಖಾಮುಖಿ: ಕೂದಲೆಳೆಯ ಅಂತರದಲ್ಲಿ ತಪ್ಪಿದ ಘರ್ಷಣೆ !

ಷರತ್ತುಗಳು ಅನ್ವಯ!

Advertisement

*ವಿಂಟೇಜ್‌ ವಾಹನಗಳ ಮಾರಾಟ, ಖರೀದಿ ಸರಕಾರದ ನಿಯಮಾವಳಿ ಪ್ರಕಾರವೇ ಆಗಬೇಕು.

*ಪ್ರದರ್ಶನ, ತಾಂತ್ರಿಕ ಸಂಶೋಧನೆ ಅಥವಾ ವಿಂಟೇಜ್‌ ರ್ಯಾಲಿ ಸಂದರ್ಭದಲ್ಲಿ ಮಾತ್ರವೇ ಇವುಗಳನ್ನು ರಸ್ತೆಗಳಲ್ಲಿ ಓಡಿಸಬಹುದು.

*ಇಂಧನ ತುಂಬುವಿಕೆ, ರಿಪೇರಿಗಳಿದ್ದಲ್ಲಿ ಮಾತ್ರ ಜನಸಂಚಾರವಿರುವ ರಸ್ತೆಗಳಲ್ಲಿ ಒಯ್ಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next