Advertisement

ವಿನೋದ್‌ ಶೆಟ್ಟಿಗಾರ್‌ ಕೊಲೆ: ನಾಲ್ವರು ತಪ್ಪಿತಸ್ಥರು

11:13 PM Mar 27, 2019 | Sriram |

ಉಡುಪಿ: ಹಿರಿಯಡಕ ಕಾರಾಗೃಹದಲ್ಲಿ 2011ರಲ್ಲಿ ನಡೆದಿದ್ದ ವಿನೋದ್‌ ಶೆಟ್ಟಿಗಾರ್‌ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಘೋಷಿಸಿದೆ.

Advertisement

ಬೈಕಾಡಿಯ ಮುತ್ತಪ್ಪ ಯಾನೆ ಸುರೇಶ್‌ ಬಳೆಗಾರ (36), ಆತನ ಸಹೋದರ ನಾಗರಾಜ ಬಳೆಗಾರ (33), ಮೈಸೂರಿನ ಶೇಖ್‌ ರಿಯಾಝ್ ಅಹಮ್ಮದ್‌(33) ಮತ್ತು ಕೊಪ್ಪಳ ಗಂಗಾವತಿಯ ಶರಣಪ್ಪ ಅಮರಾಪುರ್‌(33)ಅವ ರನ್ನು ದೋಷಿಗಳೆಂದು ಘೋಷಿಸಲಾಗಿದ್ದು,ಇವರೆಲ್ಲರೂ ಸದ್ಯ ಜೈಲಿನಲ್ಲಿದ್ದಾರೆ.ಇನ್ನೋರ್ವ ಆರೋಪಿ ಉಡುಪಿ ಕುಕ್ಕಿಕಟ್ಟೆಯ ರಾಘವೇಂದ್ರ ಜಾಮೀನಿ ನಲ್ಲಿ ಬಿಡುಗಡೆಗೊಂಡಿದ್ದ.

ಪಿಟ್ಟಿ ನಾಗೇಶ್‌ ಸಂಚು
ರೌಡಿಶೀಟರ್‌ ಪಿಟ್ಟಿ ನಾಗೇಶ್‌ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ.ಕೊಲೆ ಸಂಚು ರೂಪಿಸಿದ್ದ ಆರೋಪ ಹೊತ್ತಿದ್ದ ಆತ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಸಂದರ್ಭ ದಲ್ಲಿ ಉದ್ಯಾವರದ ಬಳಿ ಕೊಲೆಗೀಡಾಗಿದ್ದ.

ಚೂರಿಯಿಂದ ಕೊಲೆ
ನಾಲ್ವರು ಆರೋಪಿಗಳು ಜೈಲಿನಲ್ಲಿ ಇತರ ಕೈದಿಗಳ ಮೇಲೆ ದಬ್ಟಾಳಿಕೆ ನಡೆಸುತ್ತಿದ್ದರು. ಇದನ್ನು ವಿನೋದ್‌ ಶೆಟ್ಟಿಗಾರ್‌ ತಡೆದಿದ್ದ. ಈ ಕಾರಣಕ್ಕೆ ಜೈಲಿನಲ್ಲಿ ಗಲಾಟೆಯಾಗುತ್ತಿತ್ತು. 2011ರ ಜ.14ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕಾರಾಗೃಹದ 1ನೇ ಬ್ಯಾರಕ್‌ನ ಹೊರಗಡೆ ಕುಳಿತಿದ್ದ ವಿನೋದ್‌ ಶೆಟ್ಟಿಗಾರ್‌ನ ಮೇಲೆ ಚೂರಿಯಿಂದ ಯದ್ವಾತದ್ವಾ ಇರಿದಿದ್ದರು.ತಡೆಯಲು ಬಂದಿದ್ದ ಜೈಲಿನ ಸಿಬಂದಿಗೂ ಇರಿ ಯಲಾಗಿತ್ತು.ವಿನೋದ್‌ ಸ್ಥಳದಲ್ಲೇ ಪ್ರಾಣಬಿಟ್ಟಿದ್ದ.ಅಂದಿನ ಬ್ರಹ್ಮಾವರ ಇನ್ಸ್‌ಪೆಕ್ಟರ್‌ ಕೃಷ್ಣಮೂರ್ತಿ ಅವರು ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ಎಂ. ಜೋಷಿ ಅವರು ಆರೋಪಿಗಳು ದೋಷಿಗಳೆಂದು ಘೋಷಿ ಸಿದ್ದಾರೆ.ಶಿಕ್ಷೆಯ ಪ್ರಮಾಣವನ್ನು ಮಾ.28ರಂದು ಪ್ರಕಟಿಸಲಿದ್ದಾರೆ. ಸರಕಾರಿ ಅಭಿಯೋ ಜಕಿ ಶಾಂತಿ ಬಾಯಿ ಅವರು ಸರಕಾರದ ಪರ ವಾದ ಮಂಡಿಸಿದ್ದಾರೆ.

Advertisement

ಶೌಚಾಲಯದಲ್ಲಿ
ಸಿಕ್ಕಿತ್ತು 3 ಚೂರಿ
ಕೊಲೆ ನಡೆದ ಹಿಂದಿನ ದಿನ ಒಬ್ಬ ಆರೋಪಿಯನ್ನು ಕಾರ್ಕಳದ ನ್ಯಾಯಾ ಲಯಕ್ಕೆ ಹಾಜರುಪಡಿಸ ಲಾಗಿತ್ತು.ಈ ಸಂದರ್ಭ ಶೌಚಾಲಯದಲ್ಲಿ ಪೂರ್ವ ನಿಯೋಜಿತದಂತೆ 3 ಚೂರಿಗಳನ್ನು ತಂದಿಡಲಾಗಿತ್ತು.ಆತ ಕಾರಾಗೃಹಕ್ಕೆ ವಾಪಸಾಗುವಾಗ ಚೂರಿಗಳನ್ನು ಕೊಂಡೊಯ್ದಿದ್ದ.ಇದು ಕಾರಾಗೃಹ ಸಿಬಂದಿಯ ಗಮನಕ್ಕೆ ಬಂದಿರಲಿಲ್ಲ.ಅಂದು ರಾತ್ರಿಯೇ ಆರೋಪಿಗಳು ಕೊಲೆಗೆ ಯೋಜನೆ ರೂಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next