Advertisement

ನಡೆದಾಡಲಾಗದ ಸ್ಥಿತಿಯಲ್ಲಿ ವಿನೋದ್‌ ಕಾಂಬ್ಳಿ?: ವಿಡಿಯೋ ವೈರಲ್‌

10:28 PM Aug 06, 2024 | Team Udayavani |

ನವದೆಹಲಿ: ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಸಮಕಾಲೀನ, ಮಾಜಿ ಕ್ರಿಕೆಟರ್‌ ವಿನೇದ್‌ ಕಾಂಬ್ಳಿ ಈಗ ನಡೆದಾಡಲೂ ಆಗದ ಪರಿಸ್ಥಿತಿ ಅನುಭವಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗಿದೆ. ಕಾಂಬ್ಳಿ ಅವರನ್ನು ಈ ಸ್ಥಿತಿಯಲ್ಲಿ ನೋಡಲು ಬಹಳ ಬೇಸರವಾಗುತ್ತಿದೆ ಎಂದು ಅನೇಕರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Advertisement

ವಿಡಿಯೋದಲ್ಲಿ ಕಾಂಬ್ಳಿ, ಬೇರೆಯವರ ಸಹಾಯದಿಂದ ಪರದಾಡುತ್ತಾ ನಡೆದಾಡುತ್ತಿರುವ ಚಿತ್ರಣವಿದೆ. ಆದರೆ ಈ ವೈರಲ್‌ ವಿಡಿಯೋದ ಅಸಲಿಯತ್ತು ಇನ್ನೂ ಖಚಿತವಾಗಿಲ್ಲ. ಆದರೆ ಈ ವಿಡಿಯೋದಲ್ಲಿರುವುದು ಮಾಜಿ ಕ್ರಿಕೆಟರ್‌ ಕಾಂಬ್ಳಿಯವರೇ ಎಂದು ಅನೇಕ ನೆಟ್ಟಿಗರು ಪೋಸ್ಟ್‌ ಹಂಚಿಕೊಂಡಿದ್ದಾರೆ. ಕಾಂಬ್ಳಿಗೆ ನೆರವಿನ ಹಸ್ತ ಚಾಚಲು ಸಚಿನ್‌ ಒತ್ತಾಯಿಸಿದ್ದಾರೆ ಎಂದು ಕೆಲವೆಡೆ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next