Advertisement

Vinesh Phogat ತೂಕ ಸ್ಥಿರವಾಗಿತ್ತು, ಆದರೆ ರಾತ್ರೋರಾತ್ರಿ..: WFI ಅಧ್ಯಕ್ಷ ಸಂಜಯ್ ಸಿಂಗ್

03:39 PM Aug 07, 2024 | Team Udayavani |

ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಿಂದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ನಂತರ, ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಸಂಜಯ್ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಇದು ದುರದೃಷ್ಟಕರ ಎಂದು ಹೇಳಿದ್ದಾರೆ.

Advertisement

“ನಮ್ಮ ದೇಶಕ್ಕೆ ಅತ್ಯಂತ ದುರದೃಷ್ಟಕರ ಸಂಗತಿಯೆಂದರೆ, ಇಷ್ಟು ಚೆನ್ನಾಗಿ ಕುಸ್ತಿಯಲ್ಲಿ ಆಡಿ ಫೈನಲ್‌ಗೆ ಅರ್ಹತೆ ಪಡೆದ ನಂತರವೂ, 100 ಗ್ರಾಂ ಅಧಿಕ ತೂಕದ ಕಾರಣದಿಂದ ಅನರ್ಹಗೊಳಿಸಲಾಯಿತು.ಇದಲ್ಲದೆ, ಭಾರತ ಸರಕಾರ ವಿನೇಶ್ ಫೋಗಟ್‌ಗೆ ಅವರ ಕೋಚ್, ಪೌಷ್ಟಿಕತಜ್ಞ ಮತ್ತು ಫಿಸಿಯೋವನ್ನು ಒದಗಿಸಿದೆ. ಅವರೆಲ್ಲರೂ ಅವರೊಂದಿಗೆ ಕ್ರೀಡಾಗ್ರಾಮದಲ್ಲಿದ್ದಾರೆ” ಎಂದು ಹೇಳಿದರು.

ಹೇಗೆ ಪ್ರತಿಭಟನೆ ನಡೆಸಬೇಕು ಎಂಬುದನ್ನು ನಿರ್ಧರಿಸುತ್ತೇವೆ
“ವಿನೇಶ್ ತೂಕವು 2 ದಿನಗಳವರೆಗೆ ಸ್ಥಿರವಾಗಿತ್ತು ಆದರೆ ಅದು ರಾತ್ರೋರಾತ್ರಿ ಹೆಚ್ಚಾಯಿತು, ಇದಕ್ಕೆ ಕಾರಣವನ್ನು ಅವರ ಪೌಷ್ಟಿಕತಜ್ಞ ಮತ್ತು ಅವರ ಕೋಚ್  ಮಾತ್ರ ನೀಡಬಹುದು. ನಾವು ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು. WFI ಕಾನೂನು ಕ್ರಮವನ್ನು ನೋಡಿಕೊಳ್ಳುತ್ತಿದೆ. ಪಿಟಿ ಉಷಾ ಅವರು ಕ್ರೀಡಾ ಗ್ರಾಮ ತಲುಪಿದ್ದಾರೆ. ನಾವು ಚರ್ಚಿಸಿ IOC ಮತ್ತು UWW ವಿರುದ್ಧ ಹೇಗೆ ಪ್ರತಿಭಟನೆ ಮಾಡಬೇಕೆಂದು ನಿರ್ಧರಿಸುತ್ತೇವೆ” ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next