Advertisement
ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಏಕಮಾತ್ರ ವನಿತಾ ಕುಸ್ತಿಪಟು ಆಗಿರುವ ವಿನೇಶ್ ಪೋಗಟ್ ಹೆಸರನ್ನು ಕಳೆದ ವರ್ಷವೂ ಖೇಲ್‌ರತ್ನಕ್ಕೆ ಸೂಚಿಸಲಾಗಿತ್ತು. ಆದರೆ ಇದು ಒಲಿದಿರಲಿಲ್ಲ. ಸತತ 3 ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತ ಬಂದಿರುವ ವಿನೇಶ್ ಜಕಾರ್ತಾ ಏಶ್ಯಾಡ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಈ ವರ್ಷದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಒಲಿದಿತ್ತು.ಸಾಕ್ಷಿ ಮಲಿಕ್ 2016ರಲ್ಲಿ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಮತ್ತು ಶೂಟರ್ ಜಿತು ರೈ ಅವರೊಂದಿಗೆ ಜಂಟಿಯಾಗಿ ಖೇಲ್‌ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು.