Advertisement
ಅವರು ಫ್ರ್ಯಾಂಕ್‌ಫರ್ಟ್‌ನಿಂದ ವಿಮಾನವೇರಿ ಮಂಗಳವಾರ ರಾತ್ರಿ ಟೋಕಿಯೊ ತಲುಪಬೇಕಿತ್ತು. ಹಂಗೇರಿಯಲ್ಲಿ ತರಬೇತಿ ಪಡೆಯುತ್ತಿದ್ದ ವಿನೇಶ್, ಇಯು ವೀಸಾದಡಿ (ಯುರೋಪಿಯನ್ ಯೂನಿಯನ್) ಒಂದು ದಿನ ಹೆಚ್ಚು ಉಳಿದದ್ದೇ ಈ ಎಡವಟ್ಟಿಗೆ ಕಾರಣ. ಅವರ ವೀಸಾ ಅವಧಿ 90 ದಿನವಾಗಿತ್ತು. ಆದರೆ ಅವರು ಬುಡಾಪೆಸ್ಟ್‌ನಿಂದ ಫ್ರ್ಯಾಂಕ್‌ಫರ್ಟ್‌ಗೆ ಬಂದ ಬಳಿಕ ಲೆಕ್ಕ ಹಾಕಿದಾಗ ಇದರ ಅವಧಿ ಒಂದು ದಿನ ಮೀರಿತ್ತು. ಈ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ವಿನೇಶ್ ಮತ್ತವರ ತರಬೇತುದಾರ ವೋಲರ್ ಅಕೋಸ್ ಬುಧವಾರ ಟೋಕ್ಯೊ ತಲುಪಲಿದ್ದಾರೆ ಎಂದು ಐಒಎ ಮೂಲಗಳು ತಿಳಿಸಿವೆ. Advertisement
ವಿನೇಶ್‌ಗೆ ಟೋಕ್ಯೊ ವಿಮಾನ ಮಿಸ್!
09:56 PM Jul 27, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.