Advertisement
ಶನಿವಾರದ ಮುಖಾಮುಖೀಯಲ್ಲಿ ವಿನೇಶ್ ಪೋಗಟ್ 4-2 ಅಂಕಗಳಿಂದ ಚೀನದ ಕ್ವಿನ್ಯು ಪಾಂಗ್ ಅವರನ್ನು ಉರುಳಿಸಿದರು. ಇದಕ್ಕೂ ಮುನ್ನ ಕ್ರಿಸ್ಟಿನಾ ಬಿರೆಝ (10-0) ಮತ್ತು ಲಾನೌನ್ ಲೊ (15-5) ಅವರನ್ನು ಮಣಿಸಿದ್ದರು. ಫೈನಲ್‌ನಲ್ಲಿ ವಿನೇಶ್ ಎದುರಾಳಿ ಈಕ್ವಡಾರ್‌ನ ಲುಯಿಸಾ ಎಲಿಜಬೆತ್ ವಾಲ್ವೆರ್ಡ್ ಮಿಲೆಂಡ್ರೆಸ್.
18ರ ಹರೆಯದ ಅಂಶು ಮಲಿಕ್ ಫೈನಲ್‌ನಲ್ಲಿ ನೈಜೀರಿಯಾದ ಒಡುನಾಯೊ ಅಡೆಕುರೊಯೆ ವಿರುದ್ಧ ಪರಾಭವಗೊಂಡರು. ಸೆಮಿಫೈನಲ್ ಹಾದಿಯಲ್ಲಿ ಅವರು ಅಮೆರಿಕದ ರೋಸ್ ಬರ್ಕೆರ್ಟ್, ನಾರ್ವೆಯ ಗ್ರೇಸ್ ಬುಲೆನ್, ಕೆನಡಾದ ವಿಶ್ವ ಚಾಂಪಿಯನ್ ಲಿಂಡಾ ಮೊರೈಸ್ ವಿರುದ್ಧ ಜಯ ಸಾಧಿಸಿದ್ದರು.50 ಕೆಜಿ ಸೆಮಿಫೈನಲ್‌ನಲ್ಲಿ ಪರಾಭವ ಗೊಂಡ ಭಾರತದ ಮತ್ತೋರ್ವ ಕುಸ್ತಿಪಟು ನಿರ್ಮಲಾದೇವಿ ಕಂಚಿನ ಪದಕಕ್ಕೆ ಸೆಣಸಲಿದ್ದಾರೆ. ಪುರುಷರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಸತ್ಯವರ್ತ್ ಕದಿಯನ್ (97 ಕೆಜಿ), ಸುಮಿತ್ ಮಲಿಕ್ (125 ಕೆಜಿ) ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಂಡರು.