Advertisement

Vinesh Phogat ;ಬೆಳ್ಳಿ ಪದಕದ ತೀರ್ಪಿನ ಗಡುವು ವಿಸ್ತರಣೆ, ನಾಳೆ ನಿರ್ಧಾರ

09:53 PM Aug 10, 2024 | Team Udayavani |

ಪ್ಯಾರಿಸ್: ಕುಸ್ತಿಯಲ್ಲಿನ 50 ಕೆಜಿ ವಿಭಾಗದ ಫೈನಲ್‌ನಿಂದ ತನ್ನ ಅನರ್ಹತೆಯ ವಿರುದ್ಧ ವಿನೇಶ್ ಫೋಗಟ್ ಮಾಡಿದ ಮೇಲ್ಮನವಿಯ ಕುರಿತಾಗಿನ ತೀರ್ಪನ್ನು  )ಕೋರ್ಟ್ ಆಫ್ ಆರ್ಬಿಟ್ರೇಷನ್ ಆಫ್ ಸ್ಪೋರ್ಟ್ (CAS) ಆಗಸ್ಟ್ 11 ರವರೆಗೆ ವಿಸ್ತರಿಸಿದೆ.

Advertisement

ಪ್ಯಾರಿಸ್‌ನಲ್ಲಿ ಸಿಎಎಸ್ ಶುಕ್ರವಾರ(ಆಗಸ್ಟ್ 9)  ಮೂರು ಗಂಟೆಗಳ ಕಾಲ ಒಲಿಂಪಿಕ್ ಅನರ್ಹತೆಯ ವಿರುದ್ಧ ವಿನೇಶ್ ಫೋಗಟ್ ಮಾಡಿದ ಮನವಿಯನ್ನು ಆಲಿಸಿ ಇಂದು ಶನಿವಾರ (ಆಗಸ್ಟ್ 10) ತೀರ್ಪು ನೀಡುವುದಾಗಿ ಹೇಳಿತ್ತು.

ವಿಚಾರಣೆಗೆ ಹಾಜರಾದ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ತನ್ನ ಪ್ರಕರಣವನ್ನು ವಾದಿಸಿ, ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಸಿಎಎಸ್, ಸ್ವತಂತ್ರ ಸಂಸ್ಥೆ, ಮಧ್ಯಸ್ಥಿಕೆ ಅಥವಾ ಮಧ್ಯಸ್ಥಿಕೆಯ ಮೂಲಕ ಕ್ರೀಡೆಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸಲು ಅನುಕೂಲವಾಗುವಂತೆ, ಆಕೆಯ ಅನರ್ಹತೆಯ ವಿರುದ್ಧ ವಿನೇಶ್ ಅವರ ಮನವಿಯನ್ನು ದಾಖಲಿಸಿ ಶುಕ್ರವಾರ ಸಂಜೆ ವಿಚಾರಣೆಯನ್ನು ಪಟ್ಟಿಮಾಡಿತ್ತು. ಹಿರಿಯ ಅನುಭವಿ ವಕೀಲ ಹರೀಶ್ ಸಾಳ್ವೆ ಅವರು ಅನರ್ಹತೆ ಪ್ರಕರಣದ ವಿರುದ್ಧ ವಿನೇಶ್ ಪರ ವಾದ ಮಂಡಿಸುತ್ತಿದ್ದಾರೆ.

CAS ನಿಂದ ವಿನೇಶ್ ಫೋಗಟ್ ಅವರ ಬೆಳ್ಳಿ ಪದಕದ ಕುರಿತಾಗಿನ ತೀರ್ಪಿನ ಅಂತಿಮ ಗಡುವನ್ನು ಗ ಆಗಸ್ಟ್ 13 ಕ್ಕೆ ವಿಸ್ತರಿಸಲಾಗಿದೆ. ಅಚ್ಚರಿ ಎಂದರೆ ಪ್ಯಾರಿಸ್ ಒಲಿಂಪಿಕ್ಸ್ ಮುಗಿಯುವವರೆಗೆ ನಾವು ಯಾವುದೇ ದೃಢೀಕರಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಒಲಿಂಪಿಕ್ಸ್ ಸಮಾರೋಪ ಸಮಾರಂಭ ಭಾನುವಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next