Advertisement

Vinesh Phogat: ಹೆಮ್ಮೆಯ ಭಾರತೀಯ ನಾರಿಗೊಂದು ಪತ್ರ

03:42 PM Aug 25, 2024 | Team Udayavani |

ಪ್ರೀತಿಯ ವಿನೇಶ್‌ ಫೋಗಟ್‌,

Advertisement

ವಿಶಾಲ ಆಕಾಶದಷ್ಟು ಕನಸುಗಳು, ಉಕ್ಕಿ ಹರಿಯುವ ಅಲೆಯಂತೆ ಛಲ, ದಿಟ್ಟತನದಿಂದ ನಿಂತಿರುವಪರ್ವತದಂತಹ ದೃಢತೆ ಎಲ್ಲವೂ ನಿಮ್ಮ ಪಾಲಾಗಿತ್ತು. ಅದೆಷ್ಟೋ ಜನತೆಗೆ ಸ್ಫೂರ್ತಿ ನೀವು. ಕಾಮನ್‌ವೆಲ್ತ್‌ ನಲ್ಲಿ 2014, 2018, ಮತ್ತು 2022ರ ಗೇಮ್ಸ…ನಲ್ಲಿ ಚಿನ್ನದ ಪದಕ ನಿಮ್ಮ ಪಾಲಾಗಿರುವ ಹೆಮ್ಮೆ ಬಹಳಷ್ಟು ಇದ್ದರೂ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ನಿಮ್ಮ ಪ್ರದರ್ಶನವನ್ನು ನೆನೆಯುವಾಗ ಈಗಲೂ ಮೈರೋಮಾಂಚನವಾಗುತ್ತದೆ.ಸಾಧಿಸಬೇಕೆಂಬ ಛಲ, ಕನಸಿನ ಹಾದಿಯನ್ನು ನನಸು ಮಾಡಲು ಸುರಿಸಿದ ಬೆವರಿನ ಹನಿ, ನಿಮ್ಮ ಪ್ರತೀ ಹೆಜ್ಜೆ ಪ್ರತೀ ಭಾರತೀಯರ ಮನದಲ್ಲಿ ಗಾಢವಾಗಿ ಉಳಿದಿದೆ. 100 ಗ್ರಾಂ ತೂಕ ನಿಮಗೆ ಹೆಚ್ಚಾಗಿರಬಹುದು, ಅದರಿಂದ ಪದಕ ಕಳೆದುಕೊಂಡೆ ಎಂಬ ದುಃಖ ನಿಮಗಿರಬಹುದು, ಆದರೆ ಎಲ್ಲ ಭಾರತೀಯರಿಗೆ ನಿಮ್ಮ ಮೇಲೆ ಇದ್ದ ಭರವಸೆ ಮತ್ತು ಹೆಮ್ಮೆ ಅದೆಷ್ಟು ದುಪ್ಪಟ್ಟವಾಯಿತು ಎನ್ನುವುದನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ.

ಸೋಲುಗಳೇ ತಿರುವುಗಳಿಗೆ ದಾರಿ ಎನ್ನುವ ಮಾತಿದೆ, ಅದೆಷ್ಟೋ ಸೋಲು, ದುಃಖವನ್ನು ನೀವು ಅನುಭವಿಸಿದ್ದೀರಿ ಎನ್ನುವುದು ನಮಗೆ ತಿಳಿದಿದೆ ಮತ್ತು ಅದನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದೀರಿ. ಆದರೆ ಈ ಒಲಿಂಪಿಕ್ಸ್‌ನ ಸೋಲಿಗೆ ದುಃಖದ ನಿರ್ಧಾರ ಬೇಡ. ಕುಸ್ತಿಯೂ ಗೆದ್ದಿದೆ, ನೀವು ಗೆದ್ದಿದ್ದೀರಿ ಎನ್ನುವ ವಿಚಾರ ಪ್ರತಿಯೊಬ್ಬರಿಗೂ ತಿಳಿದಿದೆ. ನಿಮ್ಮ ಉತ್ಸಾಹ, ಛಲ ಕುಗ್ಗದಿರಲಿ. ಅಖಾಡ ನಿಮಗಾಗಿ ಕಾಯುತ್ತಿದೆ. ಮೊದಲಿದ್ದ ಆತ್ಮವಿಶ್ವಾಸ ಮತ್ತು ಹುಮ್ಮಸ್ಸಿನಿಂದ ಆಟವಾಡಿ. ನೀವು ಎಂದೆಂದಿಗೂ ನಮಗೆ ಸ್ಫೂರ್ತಿ ಎನ್ನುವ ವಿಚಾರವನ್ನು ಮತ್ತೂಮ್ಮೆ ತಿಳಿಸುತ್ತಾ, ಛಲಗಾರ್ತಿ ವಿನೇಶ್‌ ಫೋಗಟ್‌ನ ಆಟದ ನಿರೀಕ್ಷೆಯಲ್ಲಿ.

ಸಿಂಚನಾ ಕಲ್ಲೂರಾಯ, ಪುತ್ತೂರು

ಎಸ್‌ಡಿಎಂ ಕಾಲೇಜು, ಉಜಿರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next