Advertisement
ಆತ್ಮನಿರ್ಭರ ಭಾರತದತ್ತ ಹೆಜ್ಜೆ ದೇಶಿಯ ನೌಕಾ ತಯಾರಿಕ ಸಂಸ್ಥೆಗಳಾದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಹಾಗೂ ಇಂಜಿನಿಯರ್ (ಜಿಆರ್‌ಎಸ್‌ಇ) ಮತ್ತು ಮಡಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಸಂಸ್ಥೆಗಳು ಅಭಿವೃದ್ಧಿಪಡಿಸುತ್ತಿರುವ ಪ್ರಾಜೆಕ್ಟ್ 17ಎ ಸಮರನೌಕೆಗಳ ಪೈಕಿ ವಿಂಧ್ಯಗಿರಿ 6ನೇ ಯುದ್ಧನೌಕೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನೌಕೆಯಲ್ಲಿ ಶೇ.75ರಷ್ಟು ದೇಶೀಯ ವಸ್ತುಗಳನ್ನೇ ಅಳವಡಿಸಲಾಗುತ್ತಿದೆ. ಈ ನೌಕೆಗಳು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಆತ್ಮನಿರ್ಭರ ಸಾಧನೆಗೆ ಹಿಡಿದ ಕೈಗನ್ನಡಿ.
1981ರ ಜುಲೈನಿಂದ 2012ರ ಜೂನ್‌ವರೆಗೆ ಸುದೀರ್ಘ 31 ವರ್ಷಗಳ ಸೇವೆ ಸಲ್ಲಿಸಿದ್ದ ಸಮರ ನೌಕೆ, ಐಎನ್‌ಎಸ್ ವಿಂಧ್ಯಗಿರಿ! ತನ್ನ ಸಂಪೂರ್ಣ ಸೇವಾ ಅವಧಿಯಲ್ಲಿ ಹಲವಾರು ಸವಾಲುಗಳನ್ನು ಮೆಟ್ಟಿ, ದಿಗ್ವಿಜಯದ ಪತಾಕೆಗಳನ್ನು ಹಾರಿಸಿದ ನೌಕಾಪಡೆಯ ಈ ಹೆಮ್ಮೆಯ ನೌಕೆಯ ಗೌರವಾರ್ಥವಾಗಿ ಇದೀಗ ಪ್ರಾಜೆಕ್ಟ್ 17ಎ ಅನ್ವಯ ಅಭಿವೃದ್ಧಿಗೊಂಡಿರುವ ಸಮರನೌಕೆಗೆ ವಿಂಧ್ಯಗಿರಿ ಎಂದು ಹೆಸರಿಡಲಾಗಿದೆ. ವಿಂಧ್ಯಗಿರಿ ವೈಶಿಷ್ಟ್ಯವೇನು ?
* ಸುಧಾರಿತ ರಹಸ್ಯ ತಂತ್ರಜ್ಞಾನ
* ಶಸ್ತ್ರಾಸ್ತ್ರ ಸಂವೇದಕ ವ್ಯವಸ್ಥೆ
* ಅತ್ಯುತ್ತಮ ನಿರ್ವಹಣಾ ವ್ಯವಸ್ಥೆ
* ಪ್ರಬಲ ಯುದ್ಧಸಾಮರ್ಥ್ಯ
* ಶಿವಾಲಿಕ್ ಕ್ಲಾಸ್ ನೌಕೆ