ನವಿಮುಂಬಯಿ: ಕೆರೆಕಾಡು ಮೂಲ್ಕಿ ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳದ ಮುಂಬಯಿ ಪ್ರವಾಸ ಯಕ್ಷಗಾನ ಸಪ್ತಾಹದ ಉದ್ಘಾಟನ ಕಾರ್ಯಕ್ರಮವು ಅ. 7ರಂದು ಅಪರಾಹ್ನ ಘನ್ಸೋಲಿ ಶ್ರೀ ಮೂಕಾಂಬಿಕ ಮಂದಿರದ ಸಭಾಂಗಣದಲ್ಲಿ ಜರಗಿತು.
ಉದ್ಘಾಟಕರಾಗಿ ಶ್ರೀ ಮೂಕಾಂಬಿಕ ಮಂದಿರದ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ದೀಪ ಪ್ರಜ್ವಲಿಸಿ ಯಕ್ಷಗಾನ ಸಪ್ತಾಹಕ್ಕೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ವಹಿಸಿದ್ದರು. ವಿದ್ಯಾವಿಹಾರ್ ಅಂಬಿಕಾ ಆದಿನಾಥೇಶ್ವರ ಮಂದಿರದ ಪ್ರಧಾನ ಅರ್ಚಕ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್ ಅವರು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ಭಾರತ್ ಬ್ಯಾಂಕ್‌ನ ನಿರ್ದೇಶಕ ಅಶೋಕ್ ಕೋಟ್ಯಾನ್, ಅತಿಥಿಗಳಾಗಿ ಗೌಡರ ಉನ್ನತೀಕರಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಮೋಹನ್ ಗೌಡ, ಶ್ರೀ ಶನೀಶ್ವರ ಮಂದಿರ ನೆರೂಲ್ ಉಪಾಧ್ಯಕ್ಷ ಗೋಪಾಲ್ ವೈ. ಶೆಟ್ಟಿ, ಶ್ರೀ ಮೂಕಾಂಬಿಕ ಧರ್ಮಶಾಸ್ತ ಭಕ್ತವೃಂದ ಘನ್ಸೋಲಿ ಅಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ, ತುಳು-ಕನ್ನಡ ವೆಲ್ಫೆàರ್ ಅಸೋಸಿಯೇಶನ್ ಕಾಮೋಟೆ ಅಧ್ಯಕ್ಷ ರವಿ ಪೂಜಾರಿ ಬೋಳ, ಉದ್ಯಮಿ ಜಯರಾಮ ಶೆಟ್ಟಿ, ರಂಗಭೂಮಿ ಫೈನ್‌ಆರ್ಟ್ಸ್ ನವಿಮುಂಬಯಿ ಅಧ್ಯಕ್ಷ ತಾರನಾಥ ಶೆಟ್ಟಿ ಪುತ್ತೂರು, ಶ್ರೀ ಸಂತೋಷಿ ಮಾತಾದೇವಾಲಯ ಟ್ರಸ್ಟ್ ಉಪಾಧ್ಯಕ್ಷ ಕೆ. ಎಂ. ಶೆಟ್ಟಿ, ಅಧ್ಯಕ್ಷ ಸಂತೋಷ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಆಶಾ ಶೆಟ್ಟಿ ಅವರು ಆಗಮಿಸಿ ಶುಭ ಹಾರೈಸಿದರು.
ಸುರೇಶ್ ಕೋಟ್ಯಾನ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಕೆ. ಕೆ. ಶೆಟ್ಟಿ, ಬಾಲಚಂದ್ರ ರಾವ್, ಜಗದೀಶ್ ಶೆಟ್ಟಿ ಪನ್ವೆಲ್ ಅವರ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮುಂಬಯಿ ವ್ಯವಸ್ಥಾಪಕರಾದ ವಿ. ಕೆ. ಸುವರ್ಣ, ಪ್ರಭಾಕರ ಎಸ್. ಹೆಗ್ಡೆ ಹಾಗೂ ಮೇಳದ ಪರವಾಗಿ ಜಯಂತ್ ಅಮೀನ್ ಅವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂತೋಷಿ ಮಾತಾ ದೇವಾಲಯ ಟ್ರಸ್ಟ್ ಇದರ ಪ್ರಾಯೋಜಕತ್ವದಲ್ಲಿ ಶ್ರೀ ದೇವಿ ಮಹಾತೆ¾ ಯಕ್ಷಗಾನ ಪ್ರದರ್ಶನಗೊಂಡಿತು.
ಭಾಗವತರಾಗಿ ಕಾವ್ಯಶ್ರೀ, ಚೆಂಡೆಯಲ್ಲಿ ರಾಮ್‌ಪ್ರಕಾಶ್, ಮದ್ದಳೆಯಲ್ಲಿ ಶ್ರೀಪತಿ ನಾಯಕ್, ಚಕ್ರತಾಳದಲ್ಲಿ ಉಮೇಶ್ ಜೆ. ಆಚಾರ್ಯ, ಅರ್ಚಕ ರಾಗಿ ಗಣೇಶ್ ಬಂಗೇರ, ಹಿರಣ್ಮಯಿ, ತಾರನಾಥ, ಪ್ರಸಾದನದಲ್ಲಿ ಪ್ರೇಮಲತಾ ಜಿ. ಅಮೀನ್, ರೇಷ್ಮಾ ಜಿ. ಬಂಗೇರ, ಸಂದ್ಯಾ ಯು. ಆಚಾರ್ಯ ಅವರು ಸಹಕರಿಸಿದರು. ಕಲಾವಿದರಾಗಿ ಮಕ್ಕಳಾದ ಅಭಿಜಿತ್, ಅಜಿತ್, ಅನ್ವಿತಾ, ಕು| ಪೂಜಾ, ಭವ್ಯಶ್ರೀ,ದಿವ್ಯಶ್ರೀ, ಸಮೀಕ್ಷಾ, ಶ್ರೇಯಸ್, ದುರ್ಗಾಪ್ರಸಾದ್, ಶ್ರೀಪಾದ್ ನಟ್, ಪವನ್, ನಿಲೇಶ್, ಶಶಾಂಕ್, ವರುಣ್ ಪಾಲ್ಗೊಂಡಿದ್ದರು. ಕಲಾಭಿಮಾನಿ ಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.