Advertisement

ಅದೊಂದಿತ್ತು ಕಾಲ ಚಿತ್ರದಲ್ಲಿ ವಿನಯ್‌

11:56 AM Feb 10, 2021 | Team Udayavani |

ವಿನಯ್‌ ರಾಜ್‌ಕುಮಾರ್‌ ಸದ್ದಿಲ್ಲದೇ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. “ಅದೊಂದಿತ್ತು ಕಾಲ’ ಎಂಬ ಚಿತ್ರದಲ್ಲಿ ವಿನಯ್‌ ರಾಜ್‌ಕುಮಾರ್‌ ನಟಿಸುತ್ತಿದ್ದು, ಕೀರ್ತಿ ಎನ್ನುವವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

Advertisement

90ರ ದಶಕದಲ್ಲಿ ನಡೆಯುವ ಕಥೆಯನ್ನು ಈ ಚಿತ್ರ ಹೊಂದಿದೆ ಎನ್ನಲಾಗಿದೆ. ವಾಸ್ತವಿಕತೆಗೆ ಹೆಚ್ಚು ಹತ್ತಿರವಿರುವ ಕಥೆ ಇದಾಗಿದ್ದು, ಎಲ್ಲಾ ವರ್ಗದ ಜನರನ್ನು ಸೆಳೆಯುವ ಸಿನಿಮಾ ಇದಾಗಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿ. ಇತ್ತೀಚೆಗೆ ಸಿನಿಮಾ ಮೇಲೆ ಸಿನಿಮಾ ಒಪ್ಪಿಕೊಳ್ಳುತ್ತಿರುವ  ಅದಿತಿಗೆ “ಅದೊಂದಿತ್ತು ಕಾಲ’ದಲ್ಲಿ ಹೊಸ ಬಗೆಯ ಪಾತ್ರ ಸಿಕ್ಕಿದೆ. ಇದಲ್ಲದೇ ಈ ಚಿತ್ರದಲ್ಲಿ ಸ್ಟಾರ್‌ ನಟರೊಬ್ಬರು ನಟಿಸಲಿದ್ದಾರಂತೆ. ಸದ್ಯ ವಿನಯ್‌ ನಟಿಸಿರುವ “ಟೆನ್‌’ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ :  ಶ್ಯಾಡೊ ರಾಂಗ್‌ ಟೈಮ್‌ ರಿಲೀಸ್‌! : ವಿನೋದ್‌ ಪ್ರಭಾಕರ್‌ ಬೇಸರ

ತೆಲುಗಿನಲ್ಲಿ ರಾಬರ್ಟ್‌ ಮೊದಲ ಹಾಡು :

ಇತ್ತೀಚೆಗಷ್ಟೇ ದರ್ಶನ್‌ ನಾಯಕರಾಗಿರುವ “ರಾಬರ್ಟ್‌’ ಚಿತ್ರದ ತೆಲುಗು ವರ್ಶನ್‌ ಟೀಸರ್‌ ಬಿಡುಗಡೆಯಾಗಿತ್ತು. ಈಗ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. “ರಾರಾ ನೇನು ರೆಡಿ’ ಎಂಬ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಚಿತ್ರ ಮಾರ್ಚ್‌ 11 ರಂದು ತೆಲುಗಿನಲ್ಲೂ ತೆರೆಕಾಣುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ತೆಲುಗು ಬಿಡುಗಡೆ ಕುರಿತಾಗಿ ಸಮಸ್ಯೆ ಎದುರಾಗಿತ್ತು. ಈಗ ಸಮಸ್ಯೆ ಬಗೆಹರಿದಿದ್ದು, ಚಿತ್ರ ದೊಡ್ಡ ಮಟ್ಟದಲ್ಲಿ ತೆಲುಗಿನಲ್ಲೂ ತೆರೆಕಾಣಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next