ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿಯವರು ಹಿಂಡಲಗಾ ಜೈಲಿನಿಂದ ಜಾಮೀನಾಗಿದ್ದ ದಿನವೇ ಜನ್ಮ ತಾಳಿದ ಅಭಿಮಾನಿಯೋರ್ವ ತನ್ನ ಮಗನಿಗೆ ವಿನಯ ಎಂದು ನಾಮಕರಣ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಧಾರವಾಡ ಜಿಲ್ಲೆಯ ವಿನಯ್ ಕುಲಕರ್ಣಿ ಅವರು ಪ್ರತಿನಿಧಿಸುತ್ತಿದ್ದ ಗ್ರಾಮೀಣ ಕ್ಷೇತ್ರದ ಯಾದವಾಡ ಗ್ರಾಮದ ಬಸವರಾಜ ಬೆಂಡಿಗೇರಿ ಎಂಬುವವರೇ ತಮ್ಮ ಮಗನಿಗೆ ವಿನಯ ಎಂದು ನಾಮಕರಣ ಮಾಡುವ ಮೂಲಕ ತಮ್ಮನಾಯಕನ ಬಗ್ಗೆ ಪ್ರೀತಿಯನ್ನ ತೋರಿಸಿದ್ದಾರೆ.
ವಿನಯ್ ಕುಲಕರ್ಣಿ ಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ ದಿನವೇ ಜನಿಸಿದ ನವಜಾತ ಶಿಶುವಿಗೆ ವಿನಯ ಎಂದು ನಾಮಕರಣ ಮಾಡಲಾಗಿದೆ. ಗ್ರಾಮೀಣ ಕ್ಷೇತ್ರದಲ್ಲಿ ವಿನಯ್ ಕುಲಕರ್ಣಿ ತಮ್ಮ ವರ್ಚಸ್ಸು ಹೊಂದಿದ್ದು ನಿನ್ನೆ 6 ಸಾವಿರಕ್ಕೂ ಅಧಿಕ ಜನ ಹಿಂಡಲಗಾಕ್ಕೆ ವಿನಯ್ ಸ್ವಾಗತಕ್ಕೆ ತೆರಳಿದ್ದರು.
ವಿನಯ್ ಸಚಿವರಾಗಿದ್ದಾಗ ಯಾದವಾಡ ಗ್ರಾಮದಲ್ಲಿ ಕೊಟ್ಯಂತರ ರೂಪಾಯಿ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು.
ಅದೂ ಅಲ್ಲದೇ ಅದೇ ಗ್ರಾಮದ ನೂರಾರು ಕುಟುಂಬಗಳೊಂದಿಗೆ ವಿನಯ್ ಅವರು ಸದಾ ಒಡನಾಟ ಹೊಂದಿದ್ದು, ಇದೀಗ ವಿನಯ್ ಬಿಡುಗಡೆ ಗೆ ಕುಟುಂಬಸ್ತರಿಗೆ ತೀವ್ರ ಸಂತಸವಾಗಿದ್ದು ತಮ್ಮ ಮಗುವಿಗೆ ವಿನಯ್ ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.