Advertisement

Vinay Kulakarniಗೆ ಟಿಕೆಟ್‌ ತಂದ ಸಂಚಲನ

01:37 AM Apr 07, 2023 | Team Udayavani |

ಧಾರವಾಡ: ಧಾರವಾಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಎದುರಿಸುತ್ತಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ನಾಯಕ ವಿನಯ್‌ ಕುಲಕರ್ಣಿ ಅವರಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿರುವುದು ಭಾರಿ ಸಂಚಲನ ಮೂಡಿಸಿದೆ.

Advertisement

ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ್‌ ಅವರು ಜಿಲ್ಲೆಯ ಹೊರಗಿದ್ದು ಕೊಂಡಾದರೂ ಧಾರ ವಾಡ ಗ್ರಾಮೀಣ ಕ್ಷೇತ್ರ ದಿಂದಲೇ ಕಣಕ್ಕೆ ಇಳಿಯುತ್ತೇನೆ ಎನ್ನುವ ಹಠದೊಂದಿಗೆ ಮತ್ತೆ ಟಿಕೆಟ್‌ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾವಿಯಲ್ಲಿ ಕಣಕ್ಕಿಳಿಯುತ್ತಾರೆ ಎಂಬೆಲ್ಲ ಮಾತುಗಳಿಗೂ ವಿರಾಮ ಬಿದ್ದಿದೆ. ಕೊನೆಗೂ ಕರ್ಮಭೂಮಿ ಧಾರವಾಡಕ್ಕೆ ಮರಳಿ ರಾಜಕೀಯ ಅಖಾಡಕ್ಕೆ ಇಳಿದಿರುವ ಅವರು ಎದುರಾಳಿಗಳ ವಿರುದ್ಧ ತೊಡೆ ತಟ್ಟಿದ್ದಾರೆ.
ಸಿಬಿಐ ಕುಣಿಕೆಯಲ್ಲಿ ಸಿಲುಕಿ ನರಳಿದ್ದ ವಿನಯ್‌ ರಾಜಕೀಯ ಭವಿಷ್ಯವೇ ಮುಗಿದು ಹೋಯಿತು. ಕಾಂಗ್ರೆಸ್‌ ಕೂಡ ಅವರ ಕೈ ಬಿಡಬಹುದು ಎಂಬೆಲ್ಲ ಮಾತುಗಳು ಕ್ಷೇತ್ರದಲ್ಲಿ ಈವರೆಗೂ ಹರಿದಾಡುತ್ತಿದ್ದವು. ಆದರೆ ಮತ್ತೆ ವಿನಯ್‌ ಕಾಂಗ್ರೆಸ್‌ ಟಿಕೆಟ್‌ ಪಡೆದುಕೊಂಡು ತಮ್ಮ ಶಕ್ತಿ ತೋರ್ಪಡಿಸಿದ್ದಾರೆ. ಇದರಿಂದಾಗಿ ಇದೀಗ ಗ್ರಾಮೀಣ ಕ್ಷೇತ್ರದ ರಾಜಕೀಯ ತೀವ್ರ ರಂಗೇರಿದಂತಾಗಿದೆ.

“ಶಿವಲೀಲಾ’ ರಣಜಾಲ: ಈ ಕ್ಷೇತ್ರದಲ್ಲಿ ವಿನಯ್‌ ಅನುಪಸ್ಥಿತಿಯಲ್ಲಿ ಅತ್ಯಂತ ಅಚ್ಚು ಕಟ್ಟಾಗಿ ಕಾಂಗ್ರೆಸ್‌ ಪಡೆಯನ್ನು ಮುನ್ನಡೆಸಿ ಕೊಂಡು ಬಂದ ವಿನಯ್‌ ಪತ್ನಿ ಶಿವಲೀಲಾ ಕುಲಕರ್ಣಿ ಇದೀಗ ಬಿಜೆಪಿಗೆ ಠಕ್ಕರ್‌ ಕೊಡುವ ಮಟ್ಟಕ್ಕೆ ಅದನ್ನು ಸಜ್ಜುಗೊಳಿಸಿದ್ದಾರೆ. ಕಳೆದ 4 ವರ್ಷಗಳಿಂದ ಸತತ ಸಂಪರ್ಕ ಸಭೆ ಮತ್ತು ಸಂಘಟನಾತ್ಮಕ ಕೆಲಸಗಳೊಂದಿಗೆ ವಿನಯ್‌ ಬೆಂಬಲಿಗರನ್ನು ಸಂಘಟಿಸಿ ಚುನಾವಣೆ ಅಖಾಡದಲ್ಲಿ ರಣಕಹಳೆ ಮೊಳಗಿಸಲು ಸಿದ್ದಗೊಂಡಿದ್ದಾರೆ. ವಿನಯ್‌ ಬದಲು ಅವರ ಪತ್ನಿ ಶಿವಲೀಲಾ ಕುಲಕರ್ಣಿಗೆ ಟಿಕೆಟ್‌ ನೀಡುತ್ತಾರೆ ಅಥವಾ ವಿನಯ್‌ ಶಿಗ್ಗಾವಿಗೆ ಹೋಗುತ್ತಾರೆ ಎಂಬೆಲ್ಲ ವದಂತಿಗಳನ್ನು ಮೌನವಾಗಿಯೇ ಎದುರಿಸಿ, ಪಕ್ಷ ಸಂಘಟಿಸಿದ ಶಿವಲೀಲಾ ಆಡಳಿತಾರೂಢ ಬಿಜೆಪಿ ಪಕ್ಷ ಎದುರಿಸಲು ಅಗತ್ಯ ರಣತಂತ್ರ ಹೆಣೆದಿದ್ದು ಸತ್ಯ. ವಿನಯ್‌ಗೆ ಕಾನೂನು ಸಂಕಷ್ಟಗಳು ಎದುರಾದರೆ ಮುಂದೇನು? ಎನ್ನುವ ಯೋಚನೆಯೂ ಕೈ ಪಡೆಯನ್ನು ಬಾಧಿಸಿತ್ತು. ಇದೀಗ ಟಿಕೆಟ್‌ ವಿನಯ್‌ಗೆ ನೀಡಿದ್ದರಿಂದ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ. ಒಂದು ವೇಳೆ ವಿನಯ್‌ ಕುಲಕರ್ಣಿ ಅವರಿಗೆ ನ್ಯಾಯಾಲಯ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನಿರಾಕರಿಸಿದರೂ ಸಾಮಾಜಿಕ ಜಾಲ ತಾಣ ಮತ್ತು ವೀಡಿಯೋ ಕಾನ್ಫರೆನ್ಸ್‌ ಮೂಲಕ ವಾದರೂ ಮತ ಕೇಳಿ ಅಖಾಡಕ್ಕೆ ಧುಮುಕುವ ತಯಾರಿ ಮಾಡಿಕೊಂಡಿ ದ್ದಾರೆ ವಿನಯ್‌ ಅಭಿಮಾನಿಗಳು ಮತ್ತು ಅವರ ಪತ್ನಿ ಶಿವಲೀಲಾ.

ಬಿಜೆಪಿ ಹೊಸಮುಖ: ಇಡೀ ಧಾರವಾಡ ಜಿಲ್ಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹಿತ ಎಲ್ಲ ಬಿಜೆಪಿ ಮುಖಂಡರನ್ನು ರಾಜಕೀಯವಾಗಿ ಧೈರ್ಯದಿಂದ ಎದುರಿಸಿದ್ದ ವಿನಯ್‌ ವಿರುದ್ಧ ಶಾಸಕ ಅಮೃತ ದೇಸಾಯಿ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದ ಬಿಜೆಪಿಗೆ ಈ ಬಾರಿ ವಿನಯ್‌ ವಿರುದ್ಧ ಗೆಲುವು ಅಷ್ಟು ಸಲೀಸಾಗಿಲ್ಲ. ಕಳೆದ ಬಾರಿ ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ವಿನಯ್‌ ಹೆಸರು ಥಳಕು ಹಾಕಿದ್ದನ್ನೇ ಬಂಡವಾಳ ಮಾಡಿಕೊಂಡ ಬಿಜೆಪಿ ವಿನಯ್‌ ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಬಾರಿ ಅಮೃತ ದೇಸಾಯಿ ಕ್ಷೇತ್ರದಲ್ಲಿ ತಮ್ಮತನ ಉಳಿಸಿಕೊಂಡಿಲ್ಲ. ಅವರಿಗೆ ಟಿಕೆಟ್‌ ನೀಡಿದರೂ ಗೆಲುವು ಅಸಾಧ್ಯ ಎನ್ನುವ ಮಾತು ಬಿಜೆಪಿ ವಲಯದ ಲ್ಲಿಯೇ ಕೇಳಿ ಬರುತ್ತಿದೆ. ಹೀಗಾಗಿ ಬಿಜೆಪಿ ಹೊಸಮುಖವೊಂದನ್ನು ವಿನಯ್‌ ವಿರುದ್ಧ ಕಣಕ್ಕಿಳಿಸಲು ಚಿಂತಿಸುತ್ತಿದೆ.

ಆನ್‌ಲೈನ್‌ ನಾಮಪತ್ರ ವರ
ವಿನಯ್‌ಗೆ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡಿದ್ದರೂ ಕಾನೂನು ತೊಡಕುಗಳು ಮಾತ್ರ ಸಾಕಷ್ಟಿವೆ. ಒಂದು ವೇಳೆ ಜಿಲ್ಲಾ ಪ್ರವೇಶಕ್ಕೆ ಕೋರ್ಟ್‌ ಅನುಮತಿ ನೀಡದೇ ಹೋದರೆ, ಆನ್‌ಲೈನ್‌ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅವರೇ ತಮ್ಮ ನಾಮಪತ್ರವನ್ನು ಸಲ್ಲಿಸಬಹುದಾಗಿದೆ. ಪ್ರಜಾಪ್ರತಿನಿಧಿ ಕಾಯಿದೆ ಅನ್ವಯ ಅಭ್ಯರ್ಥಿ ಸೂಚಿತ ವ್ಯಕ್ತಿಯೊಬ್ಬ ಅಭ್ಯರ್ಥಿಯ ಚುನಾವಣ ಚಟುವಟಿಕೆಗಳನ್ನು ಮಾಡಲು ಅವಕಾಶವಿದೆ. ಮೊಟ್ಟ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ನಾಮಪತ್ರ ಸಲ್ಲಿಕೆಗೆ ಚುನಾವಣ ಆಯೋಗ ಅವಕಾಶ ನೀಡಿದ್ದು ಸದ್ಯಕ್ಕೆ ವಿನಯ್‌ಗೆ ವರದಾನವಾದರೂ, ಇತರ ಚುನಾವಣೆ ಕಾರ್ಯಗಳೆಲ್ಲವನ್ನು ಅವರ ಪತ್ನಿ ಶಿವಲೀಲಾ ಕುಲಕರ್ಣಿ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

Advertisement

– ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next