Advertisement

ಹಿಂಡಲಗಾ ಜೈಲಿನಿಂದ ಮಾಜಿ‌ ಸಚಿವ ವಿನಯ ಕುಲಕರ್ಣಿ ಬಿಡುಗಡೆ

11:48 AM Aug 21, 2021 | Team Udayavani |

ಬೆಳಗಾವಿ: ಜಿಪಂ ಸದಸ್ಯನ ಕೊಲೆ‌ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಶನಿವಾರ ಇಲ್ಲಿಯ ಹಿಂಡಲಗಾ ಜೈಲಿನಿಂದ ಬಿಡುಗಡೆ ಆಗಿದ್ದು, ಅಭಿಮಾನಿಗಳು, ಬೆಂಬಲಿಗರು ಸೇಬು ಹಾರ ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡರು.

Advertisement

ಜಾಮೀನು ಸಿಕ್ಕರೂ ಎರಡು ದಿನಗಳ ಬಳಿಕ ಬಿಡುಗಡೆ ಭಾಗ್ಯ ಸಿಕ್ಕ ವಿನಯ್ ಕುಲಕರ್ಣಿ ಅವರನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ವಿನಯ ಪತ ಜಯಘೋಷ‌ ಕೂಗಿದರು.

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಒಂದು ಗಂಟೆಯಿಂದ ಜೈಲಿನ ಹೊರ ಭಾಗದಲ್ಲಿ ಕಾಯುತ್ತ ನಿಂತು ವಿನಯ ಹೊರ ಬರುತ್ತಿದ್ದಂತೆ ವಿನಯ ಅವರಿಗೆ ರಾಖಿ ಕಟ್ಟಿ ಅಣ್ಣನನ್ನು ಸ್ವಾಗತಿಸಿ ರಕ್ಷಾ ಬಂಧನ ಹಬ್ಬ ಆಚರಿಸಿದರು.

ಧಾರವಾಡ ಸೇರಿದಂತೆ ವಿವಿಧ ಭಾಗಗಳಿಂದ ಅಭಿಮಾನಿಗಳು ಬಂದಿದ್ದರು. ಸೇಬು ಹಾರ, ಗುಲಾಬಿ ಹಾರ ಹಾಕಿ ಸ್ವಾಗತಿಸಿದರು.‌ ಹೆಗಲು ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸಿದರು. ಅಭಿಮನ ತಾರಕಕ್ಕೆ ಏರಿತ್ತು.‌ಜನರು ಕೋವಿಡ್ ನಿಯಮ‌ ಉಲ್ಲಂಘಿಸಿ ಜನ ಸೇರಿದ್ದರು. ಕೊರೊನಾ ಆತಂಕದ ಮಧ್ಯೆಯೂ ಜನ ಆಗಮಿಸಿದ್ದರು.

ಇದನ್ನೂ ಓದಿ :ಸರಕಾರಿ ಜಾಗ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ : ಅಧಿಕಾರಿಗಳಿಂದ ಕಾಮಗಾರಿಗೆ ತಡೆ

Advertisement

ಜಾಮೀನು ನೀಡಿದ ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದ ವಿನಯ ಕುಲಕರ್ಣಿ, ರೈತ ಕುಟುಂಬದಲ್ಲಿ ಹುಟ್ಟಿದ ನಾನು ವಿದ್ಯಾರ್ಥಿ ನಾಯಕನಾಗಿ ಬೆಳೆದು ರಾಜಕಾರಣದಲ್ಲಿ ಬೆಳೆದಿದ್ದೇನೆ. ಒಂಭತ್ತು‌ ತಿಂಗಳು ಕಾಲ ನನಗೆ ಟಾಸ್ಕ್ ನೀಡಲಾಗಿತ್ತು. ಜೈಲಿನಲ್ಲಿ ಸಾಕಷ್ಟು ಓದಲು ಕಲಿತಿದ್ದೇನೆ. ಜೀವನದ ಬಗ್ಗೆ ತಿಳಿದುಕೊಂಡಿದ್ದೇನೆ.

ಸಂಘಟನೆಗಳೇ ಬೇರೆ ನಾನೇ ಬೇರೆ. ನನ್ನ ಜೀವನವೇ ಬೇರೆ.‌ ಎಲ್ಲ ಸಮಾಜದ ವರ್ಗದ ಜನ ನನ್ನ ಜೊತೆಗೆ ಇದ್ದಾರೆ. ಶ್ರೀಮಂತರೂ ಇದ್ದಾರೆ.‌ ಸ್ಲಂ ನಲ್ಲಿರುವ ಜನರೂ ನನ್ನ ಜೊತೆಗೆ ಇದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next