Advertisement

“ಟೆನ್‌’ಹಿಂದೆ ವಿನಯ್‌

10:08 AM Sep 18, 2019 | Team Udayavani |

“ಅನಂತು ವರ್ಸಸ್‌ ನುಸ್ರತ್‌’ ಚಿತ್ರದ ನಂತರ ನಟ ವಿನಯ್‌ ರಾಜಕುಮಾರ್‌ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಈಗಾಗಲೇ ಮುಹೂರ್ತ ಕೂಡ ನಡೆಸಿರುವ ವಿನಯ್‌ ರಾಜಕುಮಾರ್‌ ಹೊಸ ಚಿತ್ರಕ್ಕೆ ಈಗ ಟೈಟಲ್‌ ಫಿಕ್ಸ್‌ ಆಗಿದೆ. ಚಿತ್ರತಂಡದ ಮೂಲಗಳ ಪ್ರಕಾರ ವಿನಯ್‌ ಹೊಸ ಚಿತ್ರಕ್ಕೆ “ಟೆನ್‌’ ಎಂದು ಹೆಸರಿಡಲಾಗಿದೆಯಂತೆ.

Advertisement

ಇದೊಂದು ಬಾಕ್ಸಿಂಗ್‌ ಕಥಾಹಂದರದ ಚಿತ್ರವಾಗಿದ್ದು, ಚಿತ್ರದಲ್ಲಿ ವಿನಯ್‌ ಬಾಕ್ಸರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಡೀ ಚಿತ್ರ ಸಂಪೂರ್ಣವಾಗಿ ಬಾಕ್ಸಿಂಗ್‌ ಸುತ್ತನೆ ಸುತ್ತಲಿದೆಯಂತೆ. ಇನ್ನು ಬಾಕ್ಸಿಂಗ್‌ನಲ್ಲಿ ಎದುರಾಳಿ ನೆಲಕ್ಕೆ ಬಿದ್ದಾಗ ರೆಫ್ರಿ “ಟೆನ್‌’ವರೆಗೂ ಕೌಂಟ್‌ ಮಾಡುತ್ತಾರೆ. ಅಷ್ಟರೊಳಗೆ ಬಿದ್ದ ಬಾಕ್ಸರ್‌ ಮೇಲೆದ್ದು ಕಾದಾಡಲು ಸಜ್ಜಾಗದಿದ್ದರೆ ಅವರು ಸೋತಂತೆ.

ಇನ್ನು ಈ ಚಿತ್ರದ ಕಥೆ ಮತ್ತು ಪಾತ್ರಕ್ಕೆ ಹೊಂದಾಣಿಕೆಯಾಗುವುದರಿಂದ ಚಿತ್ರಕ್ಕೆ “ಟೆನ್‌’ ಎಂದು ಹೆಸರಿಡಲಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ಈ ಚಿತ್ರದಲ್ಲಿ ವಿನಯ್‌ ರಾಜಕುಮಾರ್‌ ಅವರ ಗೆಟಪ್‌ ಹೊರಬಿದ್ದಿದ್ದು, ಒಂದಷ್ಟು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರಕ್ಕಾಗಿ ವಿನಯ್‌ ಸುಮಾರು ಐದಾರು ತಿಂಗಳಿಂದ ಬಾಕ್ಸಿಂಗ್‌ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ಇಲ್ಲಿಯವರೆಗೆ ಛಾಯಾಗ್ರಹಕರಾಗಿ ಗುರುತಿಸಿಕೊಂಡಿದ್ದ ಕರಮ್‌ ಚಾವ್ಲ “ಟೆನ್‌’ ಚಿತ್ರಕ್ಕೆ ಆಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಚಿತ್ರದಲ್ಲಿ ವಿನಯ್‌ಗೆ ನಾಯಕಿಯಾಗಿ ಅನುಷಾ ರಂಗನಾಥ್‌ ಜೋಡಿಯಾಗಿದ್ದು, ಪುಷ್ಕರ್‌ ಮಲ್ಲಿಕಾರ್ಜುನಯ್ಯ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಂದಹಾಗೆ, “ಟೆನ್‌’ ಮುಂದಿನ ವರ್ಷ ಮಧ್ಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next