Advertisement

ಕರ್ತವ್ಯದಲಿದ್ಲಾಗಲೂ ಶುಶ್ರೂಶಕರ ಕೈಯಲ್ಲಿ ಮೊಬೈಲ್‌

04:17 PM May 21, 2023 | Team Udayavani |

ಬಳ್ಳಾರಿ: ವಿಮ್ಸ್‌ ಆಸ್ಪತ್ರೆಯಲ್ಲಿ ವೈದ್ಯರಿಗಿಂತ ಹೆಚ್ಚಾಗಿ ಶುಶ್ರೂಶಕರ ಮೊಬೈಲ್‌ ಬಳಕೆಯಿಂದಾಗಿ ರೋಗಿಗಳು,
ರಕ್ತದಾನಿಗಳು ಕಿರಿಕಿರಿ ಎದುರಿಸುವಂತಾಗಿದೆ.

Advertisement

ಬಳ್ಳಾರಿಯ ವಿಮ್ಸ್‌ ಆಸ್ಪತ್ರೆ ಬಳ್ಳಾರಿ/ವಿಜಯನಗರ ಸೇರಿ ನೆರೆಹೊರೆಯ ಹಲವಾರು ಜಿಲ್ಲೆಗಳಿಗೆ ಆರೋಗ್ಯ
ಸಂಜೀವಿನಿಯಾಗಿದೆ. ಪ್ರತಿನಿತ್ಯ ಸಾವಿರಾರು ಹೊರರೋಗಿಗಳು, ನೂರಾರು ಒಳರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಪಡೆಯುವುದೇ ಒಂದು ರೀತಿಯ ಸಾಹಸ. ಅಂತಹದ್ದರಲ್ಲಿ ವೈದ್ಯರು ತಪಾಸಣೆ ಮಾಡಿದ ಬಳಿಕ ಅವರು ನೀಡುವ ಸೂಚನೆ, ಮಾರ್ಗದರ್ಶನದಂತೆ ಶುಶ್ರೂಶಕರಿಂದ ರೋಗಿಗಳು ಚಿಕಿತ್ಸೆ ಪಡೆಯುವುದು ಸಾಹಸದ ಕೆಲಸವಾಗಿದೆ. ಕರ್ತವ್ಯನಿರತರಾಗಿದ್ದುಕೊಂಡು ಮೊಬೈಲ್‌ ಬಳಸಿ ಕರ್ತವ್ಯಲೋಪ ಎಸಗುವುದಲ್ಲದೇ, ಮೊಬೈಲ್‌ ನಲ್ಲಿ ಮಾತನಾಡುತ್ತಲೇ ರಕ್ತದಾನಿಗಳಿಗೆ ರಕ್ತಚೀಲದ ಸಿರೇಂಜ್‌ ಏರಿಸುವುದು ಸೇರಿದಂತೆ ಹಲವು ರೀತಿಯಲ್ಲಿ ನಿರ್ಲಕ್ಷ್ಯ ತೋರಿ ಕರ್ತವ್ಯಲೋಪ ಎಸಗುತ್ತಿರುವುದು ಘಟನೆಯೊಂದರಿಂದ ಬಹಿರಂಗಗೊಂಡಿದ್ದು, ಜನರಿಂದ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು ಯಶ್ವಂತಪುರ ಮೂಲದ ಗರ್ಭಿಣಿಯೊಬ್ಬರು ಹೆರಿಗೆಗಾಗಿ ಇಲ್ಲಿನ ವಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ರಕ್ತದಾನ ಮಾಡುವ ಇಬ್ಬರು ದಾನಿಗಳನ್ನು ವಿಮ್ಸ್‌ ರಕ್ತಭಂಡಾರಕ್ಕೆ
ಕರೆದೊಯ್ದಿದ್ದಾರೆ. ಅಲ್ಲಿ ನಾಲ್ವರು ಕಿರಿಯ ಮಹಿಳಾ ಶುಶ್ರೂಶಕರು, ಒಬ್ಬ ಕಿರಿಯ ಪುರುಷ ಮತ್ತೂಬ್ಬ ಹಿರಿಯ ಪುರುಷ ಶುಶ್ರೂಶಕರು ಕರ್ತವ್ಯನಿರತರಾಗಿದ್ದಾರೆ. ಇವರಲ್ಲಿ ನಾಲ್ವರು ಕಿರಿಯ ಮಹಿಳಾ ಶುಶ್ರೂಶಕರು ತಮ್ಮ ಮೊಬೈಲ್‌ ನಲ್ಲಿ ಬಿಜಿಯಾಗಿದ್ದಾರೆ. ರಕ್ತದಾನ ಮಾಡಲು ರಕ್ತ ಭಂಡಾರಕ್ಕೆ ತೆರಳಿದ್ದ ದಾನಿಯೊಬ್ಬರು, ಹೆಸರು ನೋಂದಾಯಿಸಲು ಅಲ್ಲೇ ಕುಳಿತಿದ್ದ ಕಿರಿಯ ಮಹಿಳಾ ಶುಶ್ರೂಷಕರಿಗೆ ಹೆಸರು ಹೇಳಿದ್ದಾರೆ. ಮೊಬೈಲ್‌ ನಲ್ಲಿ ಮಾತನಾಡುತ್ತಾ ಬಿಜಿಯಾಗಿದ್ದ ಅವರು, ಅವರ ಹೆಸರನ್ನು ಸರಿಯಾಗಿ ಕೇಳಿಸಿಕೊಳ್ಳದೇ ಇವರ ಹೆಸರನ್ನು
ನೀವೇ ಕೇಳಿಸಿಕೊಂಡು ಎಂಟ್ರಿ ಮಾಡು ಎಂದು ಮತ್ತೂಬ್ಬರಿಗೆ ಹೇಳಿದ್ದಾರೆ. ಮೊಬೈಲ್‌ ನಲ್ಲಿ ಬಿಜಿಯಾಗಿದ್ದ
ಇವರು ಸಹ ಹೆಸರನ್ನು ಸರಿಯಾಗಿ ಕೇಳಿಸಿಕೊಂಡಿಲ್ಲ.

ದಾನಿ ತಮ್ಮ ಹೆಸರಿನೊಂದಿಗೆ ಸ್ಪೆಲ್ಲಿಂಗ್‌ ಹೇಳಿದರೂ ಸಹ ಬರೆಯುವಲ್ಲೂ ಲೋಪ ಎಸಗಿದ್ದಾರೆ. ಬಳಿಕ ದಾನಿಯೇ
ಅದನ್ನು ಸರಿಪಡಿಸುವಂತೆ ಸೂಚಿಸಿದ ಬಳಿಕ ಅದನ್ನು ಸರಿಪಡಿಸಿದ ಘಟನೆ ನಡೆದಿದೆ. ಮೊಬೈಲ್‌ ಕಥೆ ಇಲ್ಲಿಗೇ ಮುಗಿದಿಲ್ಲ. ಹೆಸರು ನೋಂದಣಿಯಾದ ಬಳಿಕ ಮೊಬೈಲ್‌ನಲ್ಲಿ ಮಾತನಾಡುತ್ತಲೇ ರಕ್ತತೆಗೆಯಲು ಬಂದ ಶುಶ್ರೂಶಕಿ ಬೆಡ್‌ ಮೇಲೆ ಮಲಗಿದ್ದ ದಾನಿಯ ಕೈಗೆ ರಕ್ತಚೀಲದ ಸಿರೀಂಜ್‌ ಚುಚ್ಚಿದ್ದಾರೆ. ರಕ್ತ ಸರಿಯಾಗಿ ಇಳಿಯಲಿಲ್ಲ. ಕೈಗೆ ಚುಚ್ಚಿದ್ದ ಸಿರೀಂಜ್‌ನ್ನು ಮತ್ತೂಮ್ಮೆ ಅತ್ತಿತ್ತ ಅಲುಗಾಡಿಸಿದ್ದಾರೆ. ಆಗಲೂ ಸರಿಯಾಗಿ ಬರಲಿಲ್ಲ. ಅಲ್ಲೇ ಇದ್ದ ಕಿರಿಯ ಶುಶ್ರೂಶಕರೊಬ್ಬರು “ಅಕ್ಕ ಕೆಲಸ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡುವುದನ್ನು ಬಿಡು, ಏನಾದರೂ ಹೆಚ್ಚುಕಮ್ಮಿಯಾಗುತ್ತದೆ’ ಎಂದು ಎಚ್ಚರಿಸಿದರೂ, ಅವರು ಕೇಳಲಿಲ್ಲ. ಕೈಯಿಂದ ರಕ್ತಸರಿಯಾಗಿ ಬರಲೇ ಇಲ್ಲ. ನಂತರ ಅವರು ಹಿರಿಯ ಶುಶ್ರೂಶಕರ ಗಮನ ಸೆಳೆದರು. ಅವರು ಬಂದು, ಕೈಗೆ ಚುಚ್ಚಿದ್ದ ಸಿರೀಂಜ್‌ನ್ನು ಅಲುಗಾಡಿಸಿದರು.

ಕೆಳಗೆ ಇದ್ದ ರಕ್ತದ ಚೀಲವನ್ನು ಅಲುಗಾಡಿಸಿದರು. ಈ ವೇಳೆ ಕೈಗೆ ನೋವೆನಿಸಿದ ರಕ್ತದಾನಿ, “ನಾನು 41 ಬಾರಿ
ರಕ್ತದಾನ ಮಾಡಿದ್ದೇನೆ. ಇದು 42ನೇ ಬಾರಿಗೆ. ವಿಮ್ಸ್‌ ರಕ್ತಭಂಡಾರದಲ್ಲೇ ಸುಮಾರು 20ಕ್ಕೂ ಹೆಚ್ಚು ಬಾರಿ ದಾನ
ಮಾಡಿದ್ದೇನೆ. ಒಮ್ಮೆಯೂ ಇಷ್ಟು ನೋವು ಎನಿಸಿರಲಿಲ್ಲ. ಈ ಬಾರಿ ಏಕೋ ನೀವು ತುಂಬ ನೋವು ಎನ್ನಿಸುವಷ್ಟು
ಸಮಸ್ಯೆ ಮಾಡಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆದರೂ, ಸಿಬ್ಬಂದಿ ಮಾತ್ರ ಏನೂ ಆಗಲೇ ಇಲ್ಲ ಎಂಬಂತೆ ರಕ್ತ ಪಡೆದ ಒಂದೈದು ನಿಮಿಷಕ್ಕೆ ಅವರನ್ನು ಕಳುಹಿಸಿದ್ದಾರೆ. ಈ ಘಟನೆ ಒಂದು ಉದಾಹರಣೆಯಾಗಿದೆ. ಹೀಗೆ ವಿಮ್ಸ್‌ ರಕ್ತ ಭಂಡಾರಕ್ಕೆ ರಕ್ತದಾನ ಮಾಡಲು ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಬರುವ ದಾನಿಗಳು ಶುಶ್ರೂಷಕರ ನಿರ್ಲಕ್ಷ್ಯದಿಂದ ಅದೆಷ್ಟು ಸಮಸ್ಯೆ ಎದುರಿಸಿದ್ದಾರೋ ದೇವರಿಗೆ ಪ್ರೀತಿ ಎನ್ನುವಂತಾಗಿದೆ.

Advertisement

ತೆರೆದೇ ಇರುತ್ತೆ ಬಾಗಿಲು; ವಿಮ್ಸ್‌ ರಕ್ತಭಂಡಾರದಲ್ಲಿ ಈ ಮೊದಲು ಯಾರು ಬೇಕಾದರೂ ಪ್ರವೇಶಿಸುವಂತಿ
ರಲಿಲ್ಲ. ಒಂದು ಕೊಠಡಿಯಲ್ಲಿ ಹೆಸರು ನೋಂದಾಯಿಸಿ ಕೊಂಡರೆ, ಮೊತ್ತೂಂದು ಕೊಠಡಿಯಲ್ಲಿ ದಾನಿಗಳಿಂದ ರಕ್ತ ತೆಗೆಯಲಾಗುತ್ತಿತ್ತು. ರಕ್ತ ತೆಗೆಯುವ ಕೊಠಡಿಯೊಳಗೆ ಎಲ್ಲರಿಗೂ ಅವಕಾಶ ಇರಲಿಲ್ಲ. ಯಾವಾಗಲೂ ಬಾಗಿಲು ಮುಚ್ಚೇ ಇರುತ್ತಿತ್ತು. ಸಿಬ್ಬಂದಿ ರಕ್ತದಾನಿಗಳನ್ನು ಮಾತ್ರ ಕರೆದೊಯ್ದು, ರಕ್ತ ಪಡೆದು, ಸುಮಾರು 10-15 ನಿಮಿಷ ಅವರನ್ನು ಅಲ್ಲೇ ಮಲಗಿಸಿ, ಅವರ ಆರೋಗ್ಯ ಸ್ಥಿರವಾಗಿರುವುದು ಖಚಿತವಾದ ಬಳಿಕ ಕಳುಹಿಸಿಕೊಡುತ್ತಿದ್ದರು. ಆದರೆ, ಈಗ ಹಾಗಲ್ಲ. ಯಾವಾಗಲೂ ಬಾಗಿಲು ಓಪನ್‌ ಇರುತ್ತದೆ. ದಾನಿಗಳನ್ನು ಕರೆತರುವ ರೋಗಿಗಳ ಸಂಬಂ ಧಿಕರು ನೇರವಾಗಿ ರಕ್ತ ತೆಗೆಯುವ ಕೊಠಡಿಯೊಳಗೇ ಬರುತ್ತಾರೆ. ಒಳಗೆ ಬರಬೇಡಿ, ಒಳಗೆ ಇರಬೇಡಿ ಹೊರಗೆ ಬನ್ನಿ
ಎಂದು ಹೇಳುವವರೂ ಸಹ ಅಲ್ಲಿ ಕಾಣುತ್ತಿಲ್ಲ. ಹೀಗೆ ಬಡವರಿಗೆ ಆರೋಗ್ಯ ಸಂಜೀವಿನಿಯಾಗಿದ್ದ ವಿಮ್ಸ್‌ ಆಸ್ಪತ್ರೆ
ಮೇಲೆ ಜನರು ಇಟ್ಟಿರುವ ವಿಶ್ವಾಸ ಸಿಬ್ಬಂದಿಗಳ ನಿರ್ಲಕ್ಷ್ಯ ಕರ್ತವ್ಯಲೋಪದಿಂದಾಗಿ ದಿನೇದಿನೆ ಕ್ಷೀಣಿಸುತ್ತಿದ್ದು,
ಸಂಬಂಧಪಟ್ಟ ಅ ಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂಬುದು ಸಾರ್ವಜನಿಕರ ಆಗ್ರಹ.

ವಿಮ್ಸ್‌ ರಕ್ತಭಂಡಾರದಲ್ಲಿ ಶುಶ್ರೂಶಕರು ಮೊಬೈಲ್‌ನಲ್ಲಿ ಮಾತನಾಡುತ್ತಲೇ ದಾನಿಗಳಿಗೆ ಸಿರೀಂಜ್‌ಗಳನ್ನು ಚುಚ್ಚುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸುತ್ತೇನೆ.
-ಡಾ| ಗಂಗಾಧರಗೌಡ,
ನಿರ್ದೇಶಕರು, ವಿಮ್ಸ್‌, ಬಳ್ಳಾರಿ.

– ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next