Advertisement

ವಿಮ್ಸ್‌: ಎಂಬಿಬಿಎಸ್‌ ಸೀಟು 200ಕ್ಕೆ ಏರಿಕೆ: ಸಚಿವ ಡಾ|ಕೆ. ಸುಧಾಕರ್‌

08:40 PM Sep 02, 2022 | Team Udayavani |

ಬೆಂಗಳೂರು: ಬಳ್ಳಾರಿ ವಿಮ್ಸ್‌ನಲ್ಲಿ ಎಂಬಿಬಿಎಸ್‌ ಸೀಟುಗಳನ್ನು ಹೆಚ್ಚಿಸಲು ರಾಜ್ಯ ಸರಕಾರ ಸಲ್ಲಿಸಿದ್ದ ಮನವಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅನುಮತಿ ನೀಡಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 50 ಹೆಚ್ಚುವರಿ ಸೀಟುಗಳು ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ತಿಳಿಸಿದ್ದಾರೆ.

Advertisement

ರಾಜೀವ್‌ ಗಾಂಧಿ ಹೆಲ್ತ್‌ ಸೈನ್ಸ್‌ ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಿಜಯನಗರ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್‌ ಸೀಟುಗಳನ್ನು 15ರಿಂದ 200ಕ್ಕೆ ಏರಿಸಲು ಅನುಮತಿ ದೊರಕಿದೆ.

ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್‌ ಬೋರ್ಡ್‌ ಈಗಾಗಲೇ ವೈದ್ಯಕೀಯ ಕಾಲೇಜಿಗೆ ವ್ಯವಸ್ಥೆ, ಗ್ರಂಥಾಲಯ, ಆಸ್ಪತ್ರೆಯ ಸೌಕರ್ಯ, ಬೋಧಕ ವರ್ಗ ಹಾಗೂ ಅವರ ಅನುಭವ, ಪಬ್ಲಿಕೇಶನ್‌, ಅರೆ ವೈದ್ಯಕೀಯ ಸಿಬಂದಿ ಹಾಗೂ ವಿದ್ಯಾರ್ಥಿ ನಿಲಯದ ಮೌಲ್ಯಮಾಪನ ಪೂರ್ಣಗೊಳಿಸಿ ವರದಿ ನೀಡಿದೆ.

ಇದರಲ್ಲಿ ಶೇ.17.70 ಬೋಧಕ ವರ್ಗ ಹಾಗೂ ಶೇ.28 ಪ್ರಾದೇಶಿಕ ವೈದ್ಯರ ಕೊರತೆಯಿದೆ. ಉಳಿದಂತೆ ಇತರ ವ್ಯವಸ್ಥೆಗಳೂ 200 ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಅಗತ್ಯವಿರುವಷ್ಟಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next