ಚಿಕ್ಕೋಡಿ: ಎಲ್ಲಿ ನೋಡಿದರಲ್ಲಿ ಹಳ್ಳಿಯಲ್ಲಿ ಎಲೆಕ್ಷನ್ ಭರಾಟೆ ಜೋರಾಗಿದೆ. ಕಾಕಾ, ಮಾಮಾ, ಚಿಗವ್ವ,ದೊಡ್ಡವ್ವ ಬಂಧು ಎನ್ನುತ್ತಾ ಮತಬೇಟೆಯಾಡುತ್ತಿರುವ ದೃಶ್ಯ ಕಾಣಸಿಗುತ್ತದೆ. ಆದರೆ ಚಿಕ್ಕೋಡಿ ತಾಲೂಕಿನ ನಾಲ್ಕು ಗ್ರಾಮಗಳು ಕಳೆದ ಹತ್ತು ವರ್ಷಗಳಿಂದ ಚುನಾವಣೆಯಿಂದ ದೂರ ಉಳಿದುಕೊಂಡಿವೆ.
ಚಿಕ್ಕೋಡಿ ತಾಲೂಕಿನ ಕಬ್ಬೂರ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ನಮ್ಮನ್ನು ಸೇರಿಸುವುದು ಬೇಡ, ನಮಗೆ ಸ್ವತಂತ್ರ ಗ್ರಾಮ ಪಂಚಾಯತಿ ಬೇಕೆಂದು ಜೋಡಟ್ಟಿ, ಮೀರಾಪೂರಹಟ್ಟಿ, ಚಿಕ್ಕೋಡಿ ರೋಡ ಹಾಗೂ ಕೆಂಚನಟ್ಟಿ ಗ್ರಾಮಗಳು ಕಳೆದ ಎರಡುಅವಧಿಯಿಂದ ಚುನಾವಣೆಯಿಂದ ದೂರ ಉಳಿದಿವೆ. ರಾಜ್ಯ ಸರಕಾರ ದೊಡ್ಡ ಗ್ರಾಮ ಪಂಚಾಯತಿಗಳನ್ನುಪಟ್ಟಣ ಪಂಚಾಯತಿ ಮತ್ತು ಪುರಸಭೆಗಳನ್ನಾಗಿ ಮೆಲ್ದರ್ಜೆಗೇರಿಸಿದ್ದು, ಕಬ್ಬೂರ ಗ್ರಾಮ ಪಂಚಾಯತಿ ಪಟ್ಟಣ ಪಂಚಾಯತಿಯಾಗಿ ಮೆಲ್ದರ್ಜೆಗೇರಿದೆ.
ಈ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಜೋಡಟ್ಟಿ, ಮೀರಾಪೂರಹಟ್ಟಿ, ಚಿಕ್ಕೋಡಿ ರೋಡ ಹಾಗೂ ಕೆಂಚನಟ್ಟಿ ಗ್ರಾಮಗಳು ಸೇರಿಕೊಂಡಿವೆ. ಕಬ್ಬೂರ ಪಟ್ಟಣದಿಂದ ಐದು ಮತ್ತು ಏಳು ಕಿ.ಮೀ ದೂರ ಇರುವ ನಮ್ಮ ಹಳ್ಳಿಗಳಿಗೆ ಕಬ್ಬೂರ ಪಟ್ಟಣ ಪಂಚಾಯತಿಬೇಡ ನಮಗೆ ಸ್ವತಂತ್ರ ಗ್ರಾಮ ಪಂಚಾಯತಿರಚಿಸಬೇಕೆಂದು ನಾಲ್ಕು ಗ್ರಾಮಗಳು ಒತ್ತಾಯಿಸಿವೆ. ಕಬ್ಬೂರ ಪಟ್ಟಣದಿಂದ ನಾಲ್ಕೈದು ಕಿ.ಮೀ ದೂರ ಇರುವ ಜೋಡಟ್ಟಿ, ಮೀರಾಪೂರಹಟ್ಟಿ, ಚಿಕ್ಕೋಡಿ ರೋಡ, ಕೆಂಚನಟ್ಟಿ ನಾಲ್ಕು ಗ್ರಾಮಗಳು ಸೇರಿ ಒಟ್ಟು ನಾಲ್ಕು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿವೆ. ನಾಲ್ಕು ಗ್ರಾಮಗಳನ್ನು ಸೇರಿಸಿ ನೂತನ ಗ್ರಾಮ ಪಂಚಾಯತಿ ರಚಿಸಬೇಕೆಂದು ನಾಲ್ಕು ಗ್ರಾಮಗಳ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಕಬ್ಬೂರಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಪ್ಪಿಗೆ ಇಲ್ಲವೆಂದು ನಾಲ್ಕು ಗ್ರಾಮಗಳ ಗ್ರಾಮಸ್ಥರು ನ್ಯಾಯಾಲಯದಮೋರೆ ಹೋಗಿದ್ದರು. ಈ ವ್ಯಾಜ್ಯದಿಂದ ಕಬ್ಬೂರ ಪಟ್ಟಣ ಪಂಚಾಯತಿಗೂ ಚುನಾವಣೆ ನಡೆದಿರಲಿಲ್ಲ, ಈಗ ಆಡಳಿತಾ ಧಿಕಾರಿಯೇ ಆಡಳಿತ ನೋಡಿಕೊಳ್ಳುತ್ತಿದ್ದಾರೆ.
ಕಂದಾಯ ಗ್ರಾಮಗಳೆಂದು ಘೋಷಣೆ: ಪಟ್ಟಣ ಪಂಚಾಯತಿ ಬೇಡವೆಂದು ಪಟ್ಟು ಹಿಡಿದು ನ್ಯಾಯಾಲಯದ ಮೋರೆ ಹೋದ ಪ್ರಕರಣದ ಕುರಿತು ಜನರ ಅಭಿಪ್ರಾಯ ತಿಳಿಸಿ ಯೋಗ್ಯ ಕ್ರಮ ಕೈಗೊಳ್ಳಬೆಂದು ನ್ಯಾಯಾಲಯವು ಜಿಲ್ಲಾಧಿಕಾರಿ,ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ಗೆಸೂಚನೆ ನೀಡಿದ ಬಳಿಕ ಜಿಲ್ಲಾ ಧಿಕಾರಿಗಳ ತಂಡ ನಾಲ್ಕು ಗ್ರಾಮಗಳ ಜನರ ಅಭಿಪ್ರಾಯ ಪಡೆದುಕೊಂಡು, ಕಬ್ಬೂರ ಮಜರೆ ಹೊರತು ಪಡಿಸಿ ಕಂದಾಯ ಗ್ರಾಮವೆಂದು ಘೋಷಣೆ ಮಾಡಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ಸರ್ವೇ ನಡೆಸಿ-ಗ್ರಾಪಂ ಘೋಷಿಸಿ: ನಾಲ್ಕು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆಮಾಡಿರುವ ಜಿಲ್ಲಾ ಧಿಕಾರಿಗಳು ಶೀಘ್ರ ಸರ್ವೇ ಮಾಡಿಹೊಸ ಗ್ರಾಮ ಪಂಚಾಯತಿ ರಚಿಸಿ, ಚುನಾವಣೆನಡೆಸಬೇಕು. ಗ್ರಾಮಗಳ ಅಭಿವೃದ್ಧಿಗೆ ಸರಕಾರ ಒತ್ತು ನೀಡಬೇಕೆಂದು ಜೋಡಟ್ಟಿ ಗ್ರಾಮಸ್ಥ ಗೋಪಾಲ ಖೋತ ಒತ್ತಾಯಿಸಿದ್ದಾರೆ.
ಕಬ್ಬೂರ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಸೇರುವುದಕ್ಕೆ ನಾವು ನಾಲ್ಕು ಗ್ರಾಮಸ್ಥರ ಒಪ್ಪಿಗೆ ಇಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳುಕಂದಾಯ ಗ್ರಾಮಗಳನ್ನಾಗಿ ಘೋಷಣೆಮಾಡಿದ್ದಾರೆ. ನಾಲ್ಕು ಗ್ರಾಮಸ್ಥರು ಕಳೆದ ಹತ್ತು ವರ್ಷಗಳಿಂದ ಸ್ಥಳೀಯಚುನಾವಣೆಯಿಂದ ದೂರ ಉಳಿದುಕೊಂಡಿದ್ದಾರೆ. –
ಕಲ್ಲಪ್ಪ ಕರಗಾಂವೆ, ಸ್ಥಳೀಯರು.
–ಮಹಾದೇವ ಪೂಜೇರಿ