Advertisement

ವಿಲನ್‌ ಆದ “ವಿಸಾರಣೈ’ನಟ

08:00 AM Sep 29, 2017 | Team Udayavani |

“ಕರಿಯ 2′ ಚಿತ್ರ ಸೆನ್ಸಾರ್‌ ಆಗಿ ಅಕ್ಟೋಬರ್‌ 13ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಒಂದು ವಿಶೇಷತೆ ಎಂದರೆ, ಬಂಗಾಲಿ ನಟ ಅಜಯ್‌ ಘೋಷ್‌ ನಟಿಸಿರುವುದು. ಅಜಯ್‌ ಇದಕ್ಕೂ ಮುನ್ನ ತಮಿಳಿನ “ವಿಸಾರಣೈ’ನಲ್ಲಿ ಒಂದು ಪ್ರಮುಖ ಪಾತ್ರವನ್ನು ಮಾಡಿದ್ದರು. ಅದಾದ ನಂತರ ತೆಲುಗಿನಲ್ಲಿ “ಬಾಹುಬಲಿ – ದಿ ಕಂಕ್ಲೂಶನ್‌’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದರು.

Advertisement

ಈಗ ಇದೇ ಮೊದಲ ಬಾರಿಗೆ ಅವರು ಕನ್ನಡ ಚಿತ್ರವೊಂದರಲ್ಲಿ ನಟಿಸಿರುವುದು ವಿಶೇಷ. “ಕರಿಯ 2’ನಲ್ಲಿ ಅಜಯ್‌ ಘೋಷ್‌ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. “ಕರಿಯ 2′ ಚಿತ್ರವನ್ನು ನಿರ್ಮಿಸಿರುವುದು ಆನೇಕಲ್‌ ಬಾಲರಾಜ್‌ ಆದರೂ, ಅವರ ಹಿಂದೆ “ಗಣಪ’  ನಿರ್ಮಾಪಕರಾದ ಪರಮೇಶ್‌ ಮತ್ತು ಪ್ರೇಮ್‌ ಇದ್ದಾರೆ. “ಗಣಪ’ ಚಿತ್ರವನ್ನು ನಿರ್ದೇಶಿಸಿದ್ದ ಪ್ರಭು ಶ್ರೀನಿವಾಸ್‌ ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ.

ಸಂತೋಷ್‌ ನಾಯಕನಾದರೆ, ಅವರಿಗೆ ನಾಯಕಿಯಾಗಿ “ಅಶ್ವಿ‌ನಿ ನಕ್ಷತ್ರ’ ಧಾರಾವಾಹಿ ಖ್ಯಾತಿಯ ಮಯೂರಿ ಇದ್ದಾರೆ. ಇನ್ನು ಅಜಯ್‌ ಘೋಷ್‌, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಕರಣ್‌ ಬಿ. ಕೃಪ ಸಂಗೀತ ಸಂಯೋಜಿಸಿದರೆ, ಶ್ರೀನಿವಾಸ್‌ ದೇವಾಸಂ ಛಾಯಾಗ್ರಹಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next