Advertisement

ಕೋವಿಡ್ ಆತಂಕದಲ್ಲಿ ಗ್ರಾಮಗಳು ಅನಾಥ

06:33 PM Apr 20, 2020 | mahesh |

ನೆಲಮಂಗಲ: ಲಾಕ್‌ಡೌನ್‌ ನಡುವೆ ನೂತನ ನಗರಸಭೆಗೆ ನಾಲ್ಕು ಗ್ರಾಪಂ ಸೇರಿಸಿಕೊಳ್ಳಲಾಗಿದೆ. ಗ್ರಾಪಂನಿಂದ ವಿಭಜಿತಗೊಂಡು ನಗರಸಭೆಯಿಂದ ವಂಚಿತ ಗ್ರಾಮಗಳು ಸ್ಥಳೀಯ ಸರ್ಕಾರವಿಲ್ಲ. ಹೀಗಾಗಿ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ. ತಾಲೂಕಿನ ಪುರಸಭೆ ಅಂಟೆ, ಬಸವನಹಳ್ಳಿ, ವಿಶ್ವೇಶ್ವರಪುರ, ವಾಜರಹಳ್ಳಿ ಗ್ರಾಪಂ ಅನೇಕ
ಗ್ರಾಮಗಳು ನಗರಸಭೆ ವ್ಯಾಪ್ತಿಗೆ ಸೇರಿಸಿ, ಮೇಲ್ದರ್ಜೆಗೇರಿಸಲಾಗಿದೆ. ಆದರೆ ಗ್ರಾಪಂ 7ಕ್ಕೂ ಹೆಚ್ಚು ಗ್ರಾಮಗಳು ನಗರಸಭೆಯಿಂದ ವಂಚಿತವಾಗಿದ್ದು, ಮೂಲ ಗ್ರಾಪಂಗಳನ್ನು ಕಳೆದುಕೊಂಡಿವೆ.

Advertisement

ಅನಾಥವಾದ ಗ್ರಾಮಗಳು: ಲಾಕ್‌ಡೌನ್‌ ಆದೇಶದ ನಡುವೆಯೂ ನಗರಸಭೆ ಅಧಿಕಾರಿಗಳು ಗ್ರಾಪಂಗಳನ್ನು ವಶಕ್ಕೆ ಪಡೆದು ನಗರಸಭೆ ಕಾರ್ಯಚಟುವಟಿಕೆ ಆರಂಭಿಸಿದ್ದಾರೆ. ವಿಶ್ವೇಶ್ವರಪುರ ಗ್ರಾಪಂ ವ್ಯಾಪ್ತಿಯಲ್ಲಿದ್ದ ವೀರರಾಘವನಪಾಳ್ಯ, ಓಬನಾ ಯಕನಹಳ್ಳಿ, ಇಸ್ಲಾಂಪುರ, ಕಣ್ಣೇಗೌಡನಹಳ್ಳಿ, ಹುರುಳಿಹಳ್ಳಿ, ಗಂಡ್ರುಗೋಳಿಪುರ, ವಾಜರಹಳ್ಳಿ ಕೆ.ಜಿ.ಶ್ರೀನಿವಾಸಪುರ ಗ್ರಾಮಗಳು ನಗರಸಭೆ ವ್ಯಾಪ್ತಿಯಿಂದ ವಂಚಿತವಾಗಿ ಗ್ರಾಪಂ ಕಳೆದುಕೊಂಡು ಅನಾಥವಾಗಿವೆ. ಹೀಗಾಗಿ ಗ್ರಾಮದ ಸಮಸ್ಯೆ ಪರಿಹರಿಸಲು ಸ್ಥಳೀಯ ಸರಕಾರವಿಲ್ಲದೆ ಪರದಾಡುವಂತಾಗಿದೆ ಎಂದು
ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆತಂಕದಲ್ಲಿ ಜನರು: ನಗರಸಭೆ ಘೋಷಣೆ ಯಾದ  ನಂತರ ಗ್ರಾಪಂ ನಗರಸಭೆಗೆ ಹಸ್ತಾಂತರ ವಾಗುತ್ತದೆ, ಗ್ರಾಪಂಗಳನ್ನು ನಗರಸಭೆ ವಶಪಡಿ ಸಿ ಕೊಂಡ ಕಾರಣ, ಸಮಸ್ಯೆ ಬಗೆಹರಿಸುವಂತೆ ಜನರು ನೀಡಿದ ಅರ್ಜಿಗಳು, ಗೊಂದಲಗಳ ನಿವಾರಣೆಗೆ ಅವಕಾಶವಂಚಿತರನ್ನಾಗಿ ಮಾಡುವುದಲ್ಲದೇ, ಕೋವಿಡ್ ಹರಡದಂತೆ ಗ್ರಾಮಗಳ ನಿರ್ವಹಣೆಗೆ ಯಾರನ್ನು ಕೇಳಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ.

ಸ್ಥಳೀಯ ಸರಕಾರವಿಲ್ಲ: ನಗರಸಭೆಯಿಂದ ವಂಚಿತ ಗ್ರಾಮಗಳಿಗೆ ಸ್ಥಳೀಯ ನಗರಸಭೆ, ಗ್ರಾಪಂ ಅಧ್ಯಕ್ಷರು, ಸದಸ್ಯರಿಲ್ಲದ ಕಾರಣ, ಕೆಲವು ಗ್ರಾಮಗಳಲ್ಲಿ ಹಿಂದಿನ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇನ್ನೂ ಸಹಕಾರ ನೀಡುವುದು ಕನಸಿನ ಮಾತಾಗಿದೆ. ನಗರಸಭೆ, ನಮಗೆ ಸಂಬಂಧವಿಲ್ಲ ಎಂದರೆ ಕೆಲವು ಅಧಿಕಾರಿಗಳು ಹಳೆ ಗ್ರಾಪಂ ಇಲ್ಲ. ಅನುದಾನಗಳಿಲ್ಲ
ಎಂಬ ಮಾತುಗಳಿಂದ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಜತೆಗೆ ಅಧಿಕಾರಿಗಳು ಜನರ ಸಮಸ್ಯೆ ಕೇಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಈ ಸಂಬಂಧ ಸಭೆ ನಡೆಸಲಾಗಿದ್ದು, ನಗರಸಭೆಯಿಂದ ವಂಚಿತ ಗ್ರಾಮಗಳ ಬಗ್ಗೆ ಮಾಹಿತಿ ಪಡೆದು ಗ್ರಾಪಂ ಅಧಿಕಾರಿಗಳ ಜೊತೆ ಸಭೆ ನಡೆಸಿ, ಸೌಲಭ್ಯ ನೀಡುವಂತೆ
ತಿಳಿಸಲಾಗುತ್ತದೆ.
●ಡಾ.ಕೆ ಶ್ರೀನಿವಾಸಮೂರ್ತಿ, ಶಾಸಕ

Advertisement

ಹೊಸ ಗ್ರಾಪಂಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವೇ ದಿನಗಳಲ್ಲಿ ಹೊಸ ಗ್ರಾಪಂ ವ್ಯಾಪ್ತಿಗೆ ಉಳಿಕೆ ಗ್ರಾಮಗಳು ಸೇರ್ಪಡೆಯಾಗಲಿವೆ. ಅಲ್ಲಿಯವೆಗೂ ನಮ್ಮ ಸಿಬ್ಬಂದಿ ಸೌಲಭ್ಯ ನೀಡಲಿದ್ದಾರೆ.
●ಲಕ್ಷ್ಮೀನಾರಾಯಣ್‌, ತಾಪಂ ಇಒ

●ಕೊಟ್ರೇಶ್‌ ಆರ್‌.

Advertisement

Udayavani is now on Telegram. Click here to join our channel and stay updated with the latest news.

Next