ಚಿಂಚೋಳಿ: ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಮಹಿಳೆ ಯರು ಶೌಚಾಲಯದ ಸಮಸ್ಯೆ ಅಲ್ಲದೆ ರಸ್ತೆ ಸಂಪರ್ಕ ಸಂಪೂರ್ಣ ಹದಗೆಟ್ಟಿವೆ. ತಾಲೂಕಿನ ಹಳ್ಳಿ ಜನರು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ಸಂಜೀವನ್ ಯಾಕಾಪುರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಮರಪಳ್ಳಿ ತುಮಕುಂಟಾ ಸಾಲೇಬಿರನಳ್ಳಿ ಕೊಲ್ಲೂರು ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಹನುಮಾನ್ ಗುಡಿಯ ಹತ್ತಿರ ಬಹಿರಂಗ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನ ಅನೇಕ ಗ್ರಾಮಗಳಲ್ಲಿ ಮಹಿಳೆಯರಿಗೆ ಸಾಮೂಹಿಕ ಶೌಚಾಲಯಗಳಿಲ್ಲ ಶುದ್ಧ ನೀರು ಪೂರೈಕೆ ವಿದ್ಯುತ್ ಸಂಪರ್ಕ ಅಲ್ಲದೆ ಇತ್ತೀಚಿನ ಕಳೆದೆರಡು ತಿಂಗಳಿಂದ ಸುರಿದ ಭಾರಿ ಮಳೆಯಿಂದ ರೈತರು ಬಿತ್ತನೆ ಮಾಡಿದ ಹೆಸರು ಉದ್ದು ತೊಗರಿ ಸೋಯಾ ಬೆಳೆಗಳು ಮಳೆಯಲ್ಲೇ ಕೊಳೆತು ಹಾಳಾಗಿವೆ. ಆದರೆ ಕೃಷಿ ಮತ್ತು ಕಂದಾಯ ಇಲಾಖೆ ಇದುವರೆಗೆ ಜಂಟಿ ಸಮೀಕ್ಷೆ ನಡೆಸಿ ಸರಕಾರಕ್ಕೆ ಇನ್ನೂವರೆಗೆ ಯಾವುದೇ ವರದಿ ಸಲ್ಲಿಸಿಲ್ಲ. ಅಲ್ಲದೆ ಶಾಸಕರು ಮತ್ತು ಸಂಸದರು ರೈತರ ಬೆಳೆ ಹಾನಿ ಸ್ಥಳಕ್ಕೆ ಬೆಟ್ಟಿ ನೀಡಿ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ರವಿಶಂಕರ್ ಮುತ್ತಗಿ, ಹಣಮಂತ ಪೂಜಾರಿ, ರಾಹುಲ್ ಅಪ್ಪು, ಎಸ್. ಕೆ. ಮುಖಾ¤ರ್, ಮಗದುಮ್‌ಖಾನ್ ಮಕುºಲ್ ಖಾನ್ ನಿಯಾಜಾಲಿ ಇನ್ನಿತರರಿದ್ದರು