Advertisement

ಮದ್ಯ ಮುಕ್ತಕ್ಕೆ ಗ್ರಾಮಸ್ಥರ ಬೆಂಬಲ

01:17 PM Dec 27, 2019 | Team Udayavani |

ಮಳವಳ್ಳಿ: ಗ್ರಾಮದಲ್ಲಿ ಉತ್ತಮ ವಾತವಾರಣ ನಿರ್ಮಾಣವಾಗಬೇಕಾದರೆ ಗ್ರಾಮಸ್ಥರು ದುಶ್ಚಟದಿಂದ ಜನರು ದೂರವಿದ್ದು, ವ್ಯಸನ ಮುಕ್ತರಾಗಬೇಕು ಎಂದು ಗ್ರಾಮದ ಹಿರಿಯ ಮುಖಂಡ ಎಂ.ಬಿ.ವೃಷಬೇಂದ್ರಪ್ಪ ಹೇಳಿದರು.

Advertisement

ತಾಲೂಕಿನ ಮಾಗನೂರು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಮಾಮರ ಚಾರಿಟಬಲ್‌ ಟ್ರಸ್ಟ್‌ ಸಹಯೋಗದಲ್ಲಿ ಮದ್ಯಪಾನ ಮುಕ್ತ ಸಮಾಲೋಚನೆ ಯಲ್ಲಿ ಅವರು ಮಾತನಾಡಿದರು. ಶ್ರೀ ಕ್ಷೇತ್ರದ ಜನಜಾಗೃತಿ ವೇದಿಕೆ ದಿಟ್ಟ ಹೆಜ್ಜೆ ಇಟ್ಟು ಮಾಗನೂರು ಗ್ರಾಮವನ್ನು ಮದ್ಯಪಾನ ಮುಕ್ತ ಗ್ರಾಮವನ್ನಾಗಿಸುವ ಯೋಜನೆಗೆ ಗ್ರಾಮಸ್ಥರೆಲ್ಲರೂ ಬೆಂಬಲ ನೀಡಬೇಕು. ಮದ್ಯಪಾನದಿಂದ ಜನರಿಗೆ ಅಗುತ್ತಿರುವ ಅನಾಹುತ, ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮ ಗಳ ಬಗ್ಗೆ ವಕೀಲ ಹಾಗೂ ಜನಜಾಗೃತಿ ವೇದಿಕೆ ನಿರ್ದೇಶಕ ಎಂ.ಎಸ್.ಶ್ರೀಕಂಠಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯ ನಂತರ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಕುಡಿತದಿಂದ ಅಗುತ್ತಿರುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಇನ್ನು ಮುಂದೆ ಯಾರೂ ಕುಡಿಯಬಾರದು ಹಾಗೂ ಗ್ರಾಮದಲ್ಲಿ ಯಾರೂ ಮದ್ಯ ಮಾರಾಟ ಮಾಡದೆ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಮನವಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾ ಯ್ತಿ ಸದಸ್ಯರಾದ ಜಗದೀಶ, ನಟರಾಜು, ಬಸವರಾಜು ಸೇರಿದಂತೆ ಗ್ರಾಮದ ಯಜಮಾನರು, ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next