Advertisement
ಏನಿದು ಬಯೋಮೆಟ್ರಿಕ್ ಸಮಸ್ಯೆ?ಸರಕಾರ ಆಹಾರ ಇಲಾಖೆ ಮೂಲಕ ಪ್ರತಿಯೊಂದು ಕುಟುಂಬಗಳಿಗೂ ಪಡಿತರ ಚೀಟಿಗಳನ್ನು ನೀಡುತ್ತಿದೆ.ಆಯಾಯ ವಿಭಾಗಕ್ಕೆ ವರ್ಗೀಕರಿಸಿ ಬಡತನ ರೇಖೆಗಿಂತ ಕೆಳಗಿರುವವವರಿಗೆ ಹಾಗೂ ಇತರರಿಗೆ ಪ್ರತ್ಯೇಕ ಹಂತದಲ್ಲಿ ಪಡಿತರ ಸೌಲಭ್ಯವನ್ನು ಅಲ್ಲಿನ ವ್ಯಾಪ್ತಿಯ ಸಹಕಾರಿ ಸಂಘಗಳ ಮೂಲಕ ಪ್ರತಿ ತಿಂಗಳು ಅಕ್ಕಿ, ಗೋಧಿ, ಸೀಮೆಎಣ್ಣೆ, ಸಕ್ಕರೆ, ರಸಗೊಬ್ಬರಗಳನ್ನು ಪೂರೈಸುತ್ತದೆ.ಕಳೆದ ಹಲವಾರು ವರ್ಷಗಳಿಂದ ಈ ವ್ಯವಸ್ಥೆ ನಡೆದುಕೊಂಡು ಬರುತ್ತಿದೆ.ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಪಡಿತರ ಚೀಟಿ ಪರಿಷ್ಕರಣೆ ವಿಚಾರದಲ್ಲಿ ಒಂದಿಷ್ಟು ಗೊಂದಲಗಳಾದರು ಸಹ ಬಳಿಕ ಗ್ರಾ.ಪಂ.ಗಳ ಮುತುವರ್ಜಿಯಿಂದ ಒಂದಿಷ್ಟು ಸಮಾಧಾನ ದೊರೆತಿದೆ. ಆದರೆ ಈಗ ಆಹಾರ ಇಲಾಖೆ ಪಡಿತರ ಚೀಟಿಯಿಂದ ಸಾಮಗ್ರಿ ಪಡೆಯುತ್ತಿರುವವರು ಕಡ್ಡಾಯವಾಗಿ ಬಯೋಮೆಟ್ರಿಕ್ ಸಿಸ್ಟಮ್ ವ್ಯಾಪ್ತಿಗೆ ಒಳಪಟ್ಟು ಬೆರಳಚ್ಚು ನೀಡಿ ಪಡಿತರ ಪಡೆಯಬೇಕು ಎನ್ನುವ ನಿಯಮ ಸಹಕಾರಿ ಸಂಘಗಳಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಕಾರಣವೆಂದರೆ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಗಂಗನಾಡು,ತೂದಳ್ಳಿ ಮುಂತಾದ ಹಳ್ಳಿಯ ಜನರು ಸಮೀಪದ ಸೊಸೈಟಿಗಳಲ್ಲಿ ಪಡೆಯುತ್ತಿದ್ದರು. ಪ್ರಸ್ತುತ ಬಯೋಮೆಟ್ರಿಕ್ ಸಿಸ್ಟಮ್ ಅಳವಡಿಸಲು ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆಯ ಜತೆಗೆ ತಾಂತ್ರಿಕ ಸಮಸ್ಯೆಗಳಿಂದ ಆಹಾರ ಸಾಮಗ್ರಿ ದೊರೆಯುತ್ತಿಲ್ಲ. ಇದರಿಂದಾಗಿ ಕೃಷಿಕರಿಗೆ ಹಾಗೂ ಹಳ್ಳಿಗಾಡು ಜನರಿಗೆ ಸಮಸ್ಯೆಯಾಗಿ ಕಾಡಿದೆ.
ಕಳೆದ ಎರಡು ವರ್ಷದ ಹಿಂದೆ ಹೊಸ ವ್ಯವಸ್ಥೆ ಕಲ್ಪಿಸುವ ಇಲಾಖೆ ಈ ನಿಯಮ ಅಳವಡಿಸಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇದನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಬೈಂದೂರಿನ ಗಂಗನಾಡು ಹಾಗೂ ತೂದಳ್ಳಿ ಶಾಖೆಗಳಲ್ಲಿ ಬೂಸ್ಟರ್ ಅಳವಡಿಸಿದರು ಕೂಡ ನೆಟ್‌ವರ್ಕ್ ದೊರೆಯುತ್ತಿಲ್ಲ.ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಈ ತಿಂಗಳು ಹಿಂದಿನಂತೆ ಪಡಿತರ ಸಾಮಗ್ರಿ ವಿತರಿಸಲಾಗುವುದು.ಸಧ್ಯದಲ್ಲೆ ಈ ಸಮಸ್ಯೆ ಪರಿಹರಿಸಲು ಇಲಾಖೆಯ ನಿರ್ದೇಶನದಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.
-ಪ್ರಕಾಶ , ಆಹಾರ ನಿರೀಕ್ಷಕರು ಕುಂದಾಪುರ
Related Articles
ಗ್ರಾಮೀಣ ಭಾಗದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಮೂಲಕ ಪಡಿತರ ಸಾಮಗ್ರಿ ನೀಡಬೇಕೆಂದು ಆಹಾರ ಇಲಾಖೆ ನಿರ್ದೇಶನ ನೀಡಿದೆ. ಈಗಾಗಲೇ ಅವಶ್ಯವಿರುವ ತಾಂತ್ರಿಕ ವ್ಯವಸ್ಥೆ ಕಲ್ಪಿಸಲು ಸಂಸ್ಥೆಯ ವತಿಯಿಂದ ವೆಚ್ಚ ಮಾಡಿದರೂ ಪ್ರಯೋಜನವಾಗಿಲ್ಲ. ಈ ಕುರಿತು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೆ ಬದಲಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಹೀಗಾಗಿ ನಮಗೆ ನೀಡುತ್ತಿರುವ ಪಡಿತರ ಸಾಮಗ್ರಿ ಇಲಾಖೆ ವಾಪಾಸ್ಸು ಪಡೆದರೆ ಉತ್ತಮ ಇಲ್ಲವಾದಲ್ಲಿ ಕಚೇರಿ ನಿರ್ವಹಣೆಯ ಜತೆಗೆ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುವುದು ಸಿಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಇಲಾಖೆ ಈ ಬಗ್ಗೆ ಸ್ಪಷ್ಟತೆ ನೀಡಿ ಗ್ರಾಮೀಣ ಜನರಿಗಾಗುವ ಸಮಸ್ಯೆ ಇತ್ಯರ್ಥಪಡಿಸಬೇಕಾಗಿದೆ ಮತ್ತು ತಾತ್ಕಾಲಿಕವಾಗಿ ಈಗಿರುವ ವ್ಯವಸ್ಥೆ ಮುಂದುವರಿಸಬೇಕು.
– ಶಾಂತಾನಂದ ಶೆಟ್ಟಿ, ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ
Advertisement
ಅರುಣ ಕುಮಾರ್, ಶಿರೂರು