Advertisement
ಅರೆಬೊಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಗೋವಿಂದ ಪುರ ಗ್ರಾಮದಲ್ಲಿ ಚರಂಡಿ, ಕಾಂಕ್ರೀಟ್ ರಸ್ತೆ ಮಾಡಲು ಎನ್‌ಡಿಎಯಿಂದ 30 ಲಕ್ಷ ರೂ. ಹಾಗೂ ಅಲ್ಪ ಸಂಖ್ಯಾತ ಇಲಾಖೆಯಿಂದ 15ಲಕ್ಷ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೆ ಸೂಚನೆ ನೀಡಿದ್ದರು. ಆದರೆ, ಅಭಿವೃದ್ಧಿ ಕೆಲಸಕ್ಕೆ ಸ್ಥಳಾವಕಾಶವಿಲ್ಲ ಎಂದು ವರದಿ ನೀಡುವ ಮೂಲಕ ಎನ್‌ಡಿಎ ಅನುದಾನ ಅನು ದಾನ, ಅಲ್ಪಸಂಖ್ಯಾತ ಅನುದಾನ ಬೇರೆ ಗ್ರಾಮಕ್ಕೆ ವರ್ಗಾವಣೆಯಾಗಿದೆ.
Related Articles
Advertisement
ನಂತರ 2ನೇ ಪತ್ರವಾಗಿ 2018 ಜೂ.6ರಂದು ಎನ್‌ಡಿಎ ಅನುದಾನದಲ್ಲಿ ಗೋವಿಂದಪುರ ಗ್ರಾಮಕ್ಕೆ 30 ಲಕ್ಷ ರೂ.ಅನುದಾನ ನೀಡಲಾಗಿದ್ದು ಚಾಲ್ತಿಯಲ್ಲಿದೆ, ಈ ಗ್ರಾಮಕ್ಕೆ ಅಲ್ಪಸಂಖ್ಯಾತ ಇಲಾಖೆಯ 15ಲಕ್ಷ ಅನು ದಾನ ಅವಶ್ಯಕತೆ ಇಲ್ಲ. ಆದ್ದರಿಂದ ಅರೆಬೊಮ್ಮನಹಳ್ಳಿ ಅಲ್ಪಸಂಖ್ಯಾತ ಕಾಲೋನಿಗೆ ವರ್ಗಾವಣೆ ಮಾಡುವಂತೆ ಪತ್ರ ಬರೆದು 2ಕಾಮಗಾರಿ ಗ್ರಾಮಕ್ಕೆ ಸಿಗದಂತೆ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾಡಿದ್ದಾರೆ. ಶಾಸಕರಿಗೆ ಸಾಮಾನ್ಯ ಜ್ಞಾನವೂ ಇಲ್ಲದೇ ಅನುದಾನಕ್ಕೆ ಕತ್ತರಿ ಹಾಕಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
“ನೆಲಮಂಗಲ ಶಾಸಕರ 2ಪತ್ರಗಳು ಗ್ರಾಮಕ್ಕೆ ಬಂದ 45 ಲಕ್ಷ ರೂ. ಅನುದಾನವನ್ನು ಬೇರೆ ಗ್ರಾಮಕ್ಕೆ ವರ್ಗಾವಣೆ ಆಗುವಂತೆ ಮಾಡಲಾಗಿದೆ. ನಮ್ಮ ಗ್ರಾಮಕ್ಕೆ ಅನ್ಯಾಯ ಮಾಡಿದ್ದಾರೆ. ನ್ಯಾಯ ಕ್ಕಾಗಿ ಹೈಕೋರ್ಟ್‌ಗೆ ಹೋಗಿದ್ದು ನ್ಯಾಯ ಸಿಗುವ ಭರವಸೆ ಬಂದಿದೆ.” – ಸಯ್ಯದ್ ಅಬ್ದುಲ್, ಮಾಜಿ ಸದಸ್ಯರು, ಅರೆಬೊಮ್ಮನಹಳ್ಳಿ ಗ್ರಾಪಂ