ಕುರುಗೋಡು: ಸಮೀಪದ ಸಿರಿಗೇರಿ ಗ್ರಾಮದ ನವ ಗ್ರಾಮದಲ್ಲಿ ಎದುರಾದ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಖಾಲಿ ಬಿಂದಿಗೆ ಬಂಡಿಯಲ್ಲಿ ಹಿಟ್ಟು ದಿಡೀರ್ ನೇ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿ ಗ್ರಾಪಂ ಪಿಡಿಓ ಶಿವುಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ನವ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಕೆಲ ತಿಂಗಳಿಂದ ಮನವಿ ನೀಡಿದರು ಹಾಗೂ ಮೌಕಿಖವಾಗಿ ತಿಳಿಸಿದರು ಪ್ರಯೋಜನೆ ಆಗಿಲ್ಲ.
ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಹೀಗಾಗಿ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಅದಕ್ಕಾಗಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಮದ ಜನತೆ ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಮನವಿ ಕೊಟ್ಟರೂ ಯಾವುದೇ ರೀತಿಯಿಂದ ಬೆಲೆ ಇಲ್ಲದಂತಾ ಗಿದೆ. ಕುಡಿಯಲು ನೀರು ಸಿಗದೇ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.
ಜನತೆಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ನೀರಿನ ಸೌಲಭ್ಯ ಕಲ್ಪಿಸದೆ ಹೋದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾ ಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನೀರಿನ ಸಮಸ್ಯೆ ಬಿಗಾಡಿಯಿಸಲು ಗ್ರಾಪಂ ಅಭಿವೃಧ್ಧಿ ಅಧಿಕಾರಿ ಹಾಗೂ ಪಂಪ್ ಆಪರೆಟರ್ ನಿರ್ಲಕ್ಷವೇ ಕಾರಣವಾಗಿದೆ. ಅದಕ್ಕಾಗಿ ಇವರ ಮೇಲೆ ಕಾನೂನು ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು. ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಲಾಗಿದೆ. ಆದರೆ ಸ್ವೀಕರಿಸಿದ್ದಾರೆ ಹೊರತು ಯಾವುದೇ ರೀತಿಯಿಂದ ಕಾರ್ಯಗತ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮೌಲಪ್ಪ, ಶಿವರಾಜ್,ರವಿ, ಇಮ್ಮು,ಹೊನ್ನೂರ,ಶ್ರೀಧರ್, ವಿರೇಶ್,ಕರಿಬಸವ,ಆಂಜಿನಿ ಸೇರಿದಂತೆ ಮತ್ತಿತರರು ಇದ್ದರು.