Advertisement

ವಾಂತಿ ಭೇದಿಯಿಂದ ಗ್ರಾಮಸ್ಥರು ಭಯ ಭೀತ; ಬಚನಾಳಕ್ಕೆ ವೈದ್ಯರ ತಂಡ, ಅಧಿಕಾರಿಗಳು

06:43 PM Nov 30, 2022 | Team Udayavani |

ದೋಟಿಹಾಳ: ಕಳೆದ ಒಂದು ವಾರದಿಂದ ಬಚನಾಳ ಗ್ರಾಮದಲ್ಲಿ ವಾಂತಿ ಭೇದಿ ಕಾಣಿಸಿಕೊಂಡು ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಸದ್ಯ ಈ ಗ್ರಾಮದ ಸುಮಾರು 20ಕ್ಕೂ ಹೆಚ್ಚು ರೋಗಿಗಳು ತಾವರೇಗರಾ ಮತ್ತು ಗಂಗಾವತಿ ಆಸ್ಪತ್ರೆಗಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಬುಧವಾರ ಪತ್ರಿಕೆಯನ್ನು ಗಮನಿಸಿದ ತಾಲೂಕು ಅಧಿಕಾರಿಗಳ ತಂಡ ಬಚನಾಳ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿ ಅರೋಗ್ಯ ಇಲಾಖೆಯಿಂದ ಸದ್ಯ ಒಂದು ತಾತ್ಕಾಲಿಕ ಕ್ಷಿನಿಕ್ ಆರಂಭಿಸಿದ್ದಾರೆ. ವಾಂತಿ ಭೇದಿಯ ಬಗ್ಗೆ ಗ್ರಾಮಸ್ಥರಿಂದ ಮಾಹಿತಿಯನ್ನು ಪಡೆದುಕೊಂಡರು. ಸದ್ಯ ಕೊಳವೆಬಾವಿಯ ನೀರನ್ನು ಸ್ಥಗಿತ ಮಾಡಿ ಗ್ರಾಮಕ್ಕೆ ಜಲಜೀವನ ಮಿಷನ್ ಯೋಜನೆ ನದಿ ನೀರನ್ನು ಗ್ರಾಮಸ್ಥರಿಗೆ ಪೂರೈಸಲಾಗುತ್ತಿದೆ. ತಾತ್ಕಾಲಿಕ ಕ್ಲಿನಿಕ್ ಆರಂಭಿಸಲಾಗಿದ್ದು, ಸಾರ್ವಜನಿಕರು ಚಿಕಿತ್ಸೆ ಪಡೆದುಕೊಳ್ಳಿ, ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಪ್ರದೇಶದಲ್ಲಿ ಪ್ರತಿ ನಿತ್ಯ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು, ಗ್ರಾಮ ಪಂಚಾಯತಿಯ ಪಿಡಿಒ ಅವರಿಗೆ ಗ್ರಾಮದ ಚರಂಡಿಗಳನ್ನು ಸ್ವಚ್ಚತೆ ಮಾಡಿ ಬ್ಲೀಚಿಂಗ್ ಪೌಡರ್ ಹಾಕಿಸಬೇಕು ಎಂದು ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಸೂಚನೆ ನೀಡಿದರು.

ಇದೇ ವೇಳೆ ಕ್ಲಿನಿಕ್ ನಲ್ಲಿ ಯಾವುದೇ ಔಷಧದ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲಿಯ ಪರಿಸ್ಥೀತಿ ಅವಲೋಕಿಸಿ ಚಿಕಿತ್ಸೆ ನೀಡಿ ಒಂದು ವೇಳೆ ರೋಗ ಲಕ್ಷಣ ಗಂಭೀರ ಪರಿಸ್ಥೀತಿ ಇದ್ದರೆ ಅಂತಹವರನ್ನು ತಾಲೂಕು ಆಸ್ಪತ್ರೆಗೆ ಶಿಫಾರಸ್ಸು ಮಾಡಿ. ಸಾರ್ವಜನಿಕರು 15ದಿನಗಳ ಕಾಲ ಬಿಸಿನೀರನ್ನು ಕುಡಿಯಬೇಕು ಹಾಗೂ ಗ್ರಾಮದ ಹೋಟೆಲ್‌ಗಳಲ್ಲಿ 15ದಿನಗಳ ಕಾಲ ಕರಿದ ಪದಾರ್ಥಗಳನ್ನು ಮಾಡಬಾರದು ಮತ್ತು ಹೋಟೆಲ್‌ಗೆ ಬರುವವರಿಗೆ ಕುಡಿಯಲು ಬಿಸಿನೀರು ನೀಡಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ.ಆನಂದ ಗೋಟೂರು ಅವರು ಸಲಹೆ ನೀಡಿದರು.

ಈ ವೇಳೆ ತಾವರಗೇರಾ, ಹಿರೇಮನ್ನಾಪೂರ ಆರೋಗ್ಯ ಕೇಂದ್ರದ ವೈದ್ಯರು, ತಾಪಂ ಇಲಾಖೆಯ ಸಿಬಂದಿಗಳು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಮಲೇರಿಯಾ ತಾಂತ್ರಿಕ ಮೇಲ್ವಿಚಾರಕ ಪ್ರಕಾಶ್ ಗುತ್ತೇದಾರ್, ಹಿರಿಯ ಅರೋಗ್ಯ ನಿರೀಕ್ಷಣಾ ಅಧಿಕಾರಿ ಸೋಮಶೇಖರ್ ಮೇಟಿ, ಆರೋಗ್ಯ ಇಲಾಖೆಯ ಸಿಬಂದಿಗಳು, ಗ್ರಾಪಂ ಪಿಡಿಒ ಹನುಮಂತರಾಯ, ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next