Advertisement

ಕಳಪೆ ರಸ್ತೆ ಕಾಮಗಾರಿಗೆ ಗ್ರಾಮಸ್ಥರ ಆಕ್ರೋಶ

04:09 PM Feb 01, 2022 | Shwetha M |

ಚಡಚಣ: ಚಡಚಣದಿಂದ ಉಮರಜ ಗ್ರಾಮದವರೆಗಿನ ಸುಮಾರು 17 ಕಿ.ಮೀ. ರಸ್ತೆ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ನಿವರಿ ಗ್ರಾಮದ ಮುಖಂಡ ಹಾಗೂ ನ್ಯಾಯವಾದಿ ಜಗದೀಶ ಕಾಂಬಳೆ ಆರೋಪಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಚಡಚಣದಿಂದ ನಿವರಗಿ, ಗೋವಿಂದಪುರ ಉಮರಜ ಗ್ರಾಮಕ್ಕೆ ಹೋಗುವ ಸುಮರು 17 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟು ವರ್ಷಗಳೆ ಕಳೆಯುತ್ತ ಬಂದಿದೆ. ಅದರಲ್ಲಿ 2021-22ನೇ ಸಾಲಿನ ಲೆಕ್ಕ ಶಿರ್ಷಿಕೆ ಅಡಿ ಜಿಲ್ಲಾ ಮುಖ್ಯ ರಸ್ತೆಗಳ ನಿರ್ವಹಣೆ ನೆಪದಲ್ಲಿ ರಸ್ತೆ ಪ್ಯಾಚ್‌ ವರ್ಕ್‌ ಎಂಬ ಹೆಸರಿನಲ್ಲಿ ಕಳಪೆ ಕಾಮಗಾರಿ ಮಾಡಿದ್ದಾರೆ. ಇದನ್ನು ಕಂಡು ಕಾಣದಂತೆ ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವರ್ತನೆ ನೋಡಿದಾಗ ಇದರಲ್ಲಿ ಅವರದೂ ಪಾಲವಿದೆ ಎಂಭ ಭಾವನೆ ವ್ಯಕ್ತವಾಗುತ್ತಿದೆ.

ಜಿಲ್ಲಾ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಕಾಮಗಾರಿ ಅವಲೋಕಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಂಡು ರಸ್ತೆ ಮರು ಡಾಂಬರೀಕರಣವಾಗಬೇಕು ಎಂದ ಅವರು, ಇಲ್ಲದೇ ಹೋದಲ್ಲಿ ಹೋರಾಟ ಅನಿವಾರ್ಯ ಎಂದರು.

ಗ್ರಾಪಂ ಮಾಜಿ ಸದಸ್ಯ ಆರ್‌.ಎಸ್‌. ಕಾಂಬಳೆ, ಬಿ.ಎಂ. ಕಾಂಬಳೆ, ಪ್ರಶಾಂತ ಸರ್ಜಾ, ಎ.ವಿ. ಕಾಂಬಳೆ, ಸರ್ವೇಶ ಕಾಂಬಳೆ, ವಿ.ಡಿ. ಕಾಂಬಳೆ, ರಮೇಶ ಕಾಂಬಳೆ, ಆರ್‌.ಆರ್‌. ಕಾಂಬಳೆ, ಸಚಿನ ವಾಘೊ¾àರೆ, ಶ್ರೀಕಾಂತ ಬೋರ್ಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next