Advertisement

ಬಫರ್‌ ಝೋನ್‌ಗೆ ಗ್ರಾಮಸ್ಥರ ಆಕ್ಷೇಪ

05:51 PM Oct 28, 2020 | Suhan S |

ಬಾಳೆಹೊನ್ನೂರು: ಬಿ. ಕಣಬೂರು ಗ್ರಾಮಸಭೆಯಲ್ಲಿ ತೀರ್ಮಾನಗೊಂಡ ಕಾಮಗಾರಿಗಳು ಮುಗಿಯದೇ ಇರಲು ಕಾರಣವೇನೆಂದು ಗ್ರಾಮಸ್ಥರು ಪ್ರಶ್ನಿಸಿದರು.

Advertisement

ಮಂಗಳವಾರ ಪಟ್ಟಣದ ಬಿ. ಕಣಬೂರು ಗ್ರಾಪಂ ಸಭಾಂಗಣದಲ್ಲಿ ನಡೆದ 2020-21ನೇ ಸಾಲಿನ ನಮ್ಮ ಗ್ರಾಮ ನಮ್ಮ ಯೋಜನೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಈ ಕುರಿತು ಆರೋಪಿಸಿದರು. ಕಳೆದ ಏಳು ವರ್ಷಗಳ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಡಿ ರೈತರ ಕೃಷಿ ಜಮೀನಿಗೆನೀರು ಹರಿಸಲು ಚೆಕ್‌ ಡ್ಯಾಂ ನಿರ್ಮಿಸಲು ಮನವಿ ಮಾಡಿದ್ದು ಕಾಮಗಾರಿ ಅನುಮೋದನೆಯಾಗಿದ್ದರೂ ಸಹ ಜಿಪಂ ಇಂಜಿನಿಯರಿಂಗ್‌ ವಿಭಾಗದವರು ಅಂದಾಜು ಪಟ್ಟಿ ತಯಾರಿಸಕೊಡದೆ ಕಾಮಗಾರಿ ನಡೆದಿಲ್ಲ. ಕೂಡಲೇ ರೈತರಿಗೆ ಚೆಕ್‌ ಡ್ಯಾಂ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು.

ಅಲ್ಲದೆ ಈ ಹಿಂದೆ ಗ್ರಾಮಸಭೆಗಳಲ್ಲಿ ಇಂಗು ಗುಂಡಿ ನಿರ್ಮಾಣ ಮಾಡಿಸಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತು. 5 ವರ್ಷ ಕಳೆದರೂ ಅನುಷ್ಠಾನಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ತೋಟಗಾರಿಕೆ ಇಲಾಖೆಯಲ್ಲಿ ಗಿಡಗಳನ್ನು ನೀಡುತ್ತಿದ್ದು, ಜಿಪಿಎಸ್‌ಗೆ ಅಧಿಕಾರಿಗಳು ಬರುತ್ತಿಲ್ಲ. ಪಟ್ಟಣದಲ್ಲಿ ಮುಖ್ಯ ರಸ್ತೆಯ ಪಾದಚಾರಿ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರು ಅಂಗಡಿಗಳನ್ನು ಹಾಕುತ್ತಿದ್ದು ಸಂಚಾರಕ್ಕೆ ಅಡಚಣೆಯುಂಟಾಗಿದೆ. ಬಾಕ್ಸ್‌ ಚರಂಡಿ ನಿರ್ಮಿಸಿದ್ದರೂ ಸಹ ರಸ್ತೆ ಮೇಲೆ ನೀರು ಹರಿಯಿತ್ತಿದೆ. ಭಾನುವಾರ ಪಟ್ಟಣದ ನ.ರಾ. ಪುರ ರಸ್ತೆಯಲ್ಲಿ ಸಂತೆ ನಡೆಸುತ್ತಿದ್ದು ವಾಹನ ಮತ್ತು ಪಾದಚಾರಿಗಳಿಗೆ ಸಂಚರಿಸಲು ಅಡಚಣೆಯುಂಟಾಗಿದೆ.  ಸಾರ್ವಜನಿಕರು ಕೋವಿಡ್‌-19 ನಿಯಮ ಪಾಲಿಸುತ್ತಿಲ್ಲ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಈ ಬಗ್ಗೆ ಕ್ಷೇತ್ರದ ಶಾಸಕರು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರೂ ಸಹ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಪಟ್ಟಣದ ಕೋಳಿ ಅಂಗಡಿ ತ್ಯಾಜ್ಯವನ್ನು ಭದ್ರಾನದಿಗೆ ಎಸೆಯುತ್ತಿದ್ದು ಮತ್ತು ಕಸ ವಿಲೇವಾರಿ ಪ್ರದೇಶದಲ್ಲಿ ಬಿಸಾಕುತ್ತಿದ್ದಾರೆ. ಕಸ ವಿಲೇವಾರಿ ಪ್ರದೇಶವು ಗಬ್ಬು ನಾರುತ್ತಿದ್ದು ನೊಣ ಹಾಗೂ ಸೊಳ್ಳೆಗಳ ತಾಣವಾಗಿದೆ. ಬಫರ್‌ ಝೋನ್‌ ಹುಲಿ ಯೋಜನೆಗೆ ಸಂಬ ಧಿಸಿದ್ದಂತೆ 2008ರಲ್ಲಿ 5 ಗ್ರಾಪಂನವರು ಒಪ್ಪಿಗೆ ಪತ್ರ ನೀಡಿರುವ ಬಗ್ಗೆ ಪ್ರಶ್ನಿಸಿದ್ದು, 2008ರ ಸಭಾ ನಡವಳಿ ಪರಿಶೀಲಿಸಿದಾಗ ನಿರ್ಣಯದಲ್ಲಿ ದಾಖಲಾಗಿಲ್ಲ. ಕೈ ಬರಹ ನೀಡಿದ ಪತ್ರದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಬಫರ್‌ ಝೋನ್‌ ಬಗ್ಗೆ ಸಮಗ್ರ ಮಾಹಿತಿಯನ್ನು ರೈತರಿಗೆ ಮನವರಿಕೆ ಮಾಡದೆ ಗ್ರಾಮಸಭೆ ಒಪ್ಪಿಗೆ ಪಡೆಯದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಸ್ಪಷ್ಟವಾದ ತೀರ್ಮಾನಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

Advertisement

ಗ್ರಾಪಂ ಆಡಳಿತಾಧಿಕಾರಿ ಕೆ.ಎಸ್‌. ಸತೀಶ್‌ ಮಾತನಾಡಿ, ತಾವು ಗ್ರಾಪಂಗೆ ಹೊಸದಾಗಿ ನೇಮಕಗೊಂಡಿದ್ದು ಇದರ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕೋವಿಡ್‌-19 ರ ನಿಯಮ ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದಲ್ಲಿ ಮಂಗಗಳ ಉಪಟಳಗವಾಗುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು ಕೂಡಲೇ ಮಂಗ ಹಿಡಿಯುವವರನ್ನು ಕರೆಸಿ ಸಮಸ್ಯೆ ಬಗೆಹರಿಸಲಾಗುವುದು ಹಾಗೂ ಕೋವಿಡ್‌-19ರ ನಿಯಮ ಪಾಲಿಸದಿರುವದರ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದೆಂದು ತಿಳಿಸಿದರು.

ಗ್ರಾಪಂ ಪ್ರಭಾರಿ ಅಭಿವೃದ್ಧಿ ಅಧಿ ಕಾರಿ ಲೋಕೇಶ್‌, ಜಿಪಂ ಸದಸ್ಯೆ ಚಂದ್ರಮ್ಮ, ಗ್ರಾಪಂ ಮಾಜಿ ಅಧ್ಯಕ್ಷರಾದ ಮಹಮ್ಮದ್‌ ಹನೀಫ್‌, ಜುಹೇಬ್‌, ಮಧುಸೂಧನ್‌, ಹೂವಮ್ಮ, ಜಾನ್‌ ಡಿಸೋಜಾ, ಗ್ರಾಪಂ ಮಾಜಿ ಸದಸ್ಯರಾದ ಇಬ್ರಾಹಿಂ ಶಾಪಿ, ವಿಶ್ವಕರ್ಮ ಸಂಘದ ಜಿಲ್ಲಾಧ್ಯಕ್ಷ ಮಹೇಶಾಚಾರ್‌, ಹಿರಿಯಣ್ಣ, ಕಾರ್ಯದರ್ಶಿ ಸುಪ್ರೀತ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next