Advertisement

ಹೀಗೂ ಉಂಟೆ; ಕೋವಿಡ್ ಲಸಿಕೆಯಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ಪರಾರಿಯಾದ ಗ್ರಾಮಸ್ಥರು!

12:26 PM May 24, 2021 | Team Udayavani |

ಲಕ್ನೋ: ಕೋವಿಡ್ 19 ಲಸಿಕೆ ನೀಡಲು ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳು ಆಗಮಿಸಿರುವುದನ್ನು ಗಮನಿಸಿದ ಗ್ರಾಮಸ್ಥರು ಲಸಿಕೆ ತೆಗೆದುಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಸರಯೂ ನದಿಗೆ ಹಾರಿ ಪರಾರಿಯಾದ ವಿಲಕ್ಷಣ ಘಟನೆ ಉತ್ತಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಕುಸ್ತಿಪಟು ಸುಶೀಲ್ ಕುಮಾರ್ ನನ್ನು ಗಲ್ಲಿಗೇರಿಸಿ: ಸಾಗರ್ ರಾಣಾ ಪೋಷಕರ ಆಕ್ರೋಶ

ಶನಿವಾರ (ಮೇ 22) ಈ ಘಟನೆ ನಡೆದಿರುವುದಾಗಿ ರಾಮನಗರ್ ತಹಸಿಲ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೀವ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ.

ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಶುಕ್ಲಾ ಅವರು ಕೋವಿಡ್ ಲಸಿಕೆಯ ಮಹತ್ವ ಮತ್ತು ಅದರ ಪ್ರಯೋಜನದ ಬಗ್ಗೆ ವಿವರಿಸಿ, ಕೋವಿಡ್ ಲಸಿಕೆ ಕುರಿತ ಭಯವನ್ನು ಹೋಗಲಾಡಿಸುವ ಪ್ರಯತ್ನ ನಡೆಸಿದ ನಂತರವೂ ಸ್ಥಳೀಯರು ಸರಯೂ ನದಿಗೆ ಹಾರಿ ಪರಾರಿಯಾಗಿದ್ದು, ಕೇವಲ 14 ಮಂದಿ ಮಾತ್ರ ಲಸಿಕೆ ತೆಗೆದುಕೊಂಡಿರುವುದಾಗಿ ವರದಿ ವಿವರಿಸಿದೆ.

“ಇದು ಕೋವಿಡ್ ಲಸಿಕೆ ಅಲ್ಲ, ಇದೊಂದು ವಿಷದ ಇಂಜೆಕ್ಷನ್ ಎಂದು ಕೆಲವು ಜನರು ಮಾಹಿತಿ ನೀಡಿರುವುದನ್ನು ನಂಬಿ ಗ್ರಾಮಸ್ಥರು ನದಿಗೆ ಹಾರಿ ಪರಾರಿಯಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮುಖ್ಯವಾಗಿ 18ರಿಂದ 44 ವರ್ಷದೊಳಗಿನವರಿಗೆ ಲಸಿಕೆ ವಿತರಣೆಯ ಕೊರತೆಯನ್ನು ಎದುರಿಸುತ್ತಿದ್ದು, ಈ
ಸಂದರ್ಭದಲ್ಲಿ ಕೋವಿಡ್ 19 ಸೋಂಕು ಹರಡುವುದನ್ನು ತಡೆಯಲು ಎಲ್ಲರಿಗೂ ಲಸಿಕೆ ನೀಡುವುದು ಅಗತ್ಯವಾಗಿದೆ ಎಂದು ತಜ್ಞರು ವರದಿ ನೀಡಿದ್ದರು.

Advertisement

ಭಾರತದಲ್ಲಿ ಕೋವಿಡ್ 19 ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದರೂ ಕೂಡಾ ದಿನನಿತ್ಯದ ಸಾವಿನ ಪ್ರಕರಣಗಳು ಹೆಚ್ಚಳವಾಗುತ್ತಿದೆ ಎಂದು ವರದಿ ಹೇಳಿದೆ. ಅಷ್ಟೇ ಅಲ್ಲ ಕೋವಿಡ್ ಸೋಂಕು ಗ್ರಾಮೀಣ ಪ್ರದೇಶಗಳಲ್ಲಿಯೂ ಹೆಚ್ಚಳವಾಗುತ್ತಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next