Advertisement

ಅಲತಗಾ: ರಸ್ತೆ ದುರಸ್ತಿಗೆ ಗ್ರಾಮಸ್ಥರ ಒತ್ತಾಯ

02:09 PM Dec 12, 2019 | Suhan S |

ಬೆಳಗಾವಿ: ತಾಲೂಕಿನ ಕಂಗ್ರಾಳಿ ಕೆ.ಎಚ್‌. ಗ್ರಾಪಂ ವ್ಯಾಪ್ತಿಯ ಅಲತಗಾ ಗ್ರಾಮದ ಹೊಲಗಳಿಗೆ ಹೋಗಲು ರಸ್ತೆ ಹಾಗೂ ಬ್ರಿಜ್‌ ಕಂ ಬಾಂದಾರ ಪುನರ್‌ ನಿರ್ಮಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಎಪಿಎಂಸಿ ಅಧ್ಯಕ್ಷ ಆನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

Advertisement

ಅಲತಗಾ ಗ್ರಾಮದ ರೈತರು ಹೊಲಗಳಿಗೆ ಹೋಗಲು ಈ ರಸ್ತೆ ಮುಖ್ಯವಾಗಿದೆ. ಆದರೆ ಇಲ್ಲಿ ಸಂಚರಿಸುವ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ಜತೆಗೆ ಬ್ರಿಜ್‌ ಕಂ ಬಾಂದಾರ ಕೂಡ ಸಂಪೂರ್ಣ ಹಾಳಾಗಿ ಹೋಗಿದೆ. ಕಳೆದ ಸಲ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳಲ್ಲಿ ಸಂಚರಿಸುವುದು ಕಷ್ಟಕರವಾಗಿದೆ ಎಂದು ದೂರಿದರು.

ಈ ರಸ್ತೆ ಮೂಲಕವೇ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ವಾಹನಗಳಲ್ಲಿ ಮಾರುಕಟ್ಟೆಗೆ ಸ್ಥಳಾಂತರಿಸಬೇಕಾಗುತ್ತದೆ. ರಸ್ತೆ ಸರಿ ಇಲ್ಲದ್ದಕ್ಕೆಇಲ್ಲಿ ವಾಹನಗಳು ಬರುವುದು ಕಷ್ಟಕರವಾಗಿದೆ. ಬಹಳ ದೂರದವರೆಗೆ ವಸ್ತುಗಳನ್ನು ಚೀಲದಲ್ಲಿ ಹಾಕಿ ಹೊತ್ತುಕೊಂಡು ತರಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಕೂಡಲೇ ಈ ರಸ್ತೆ ಹಾಗೂ ಬ್ರಿಜ್‌ ಕಂ ಬಾಂದಾರ ನಿರ್ಮಿಸುವಂತೆ ಆಗ್ರಹಿಸಿದರು.

ಗ್ರಾಪಂ ಸದಸ್ಯ ಚೇತಕ ಕಾಂಬಳೆ ಮಾತನಾಡಿ, ರಸ್ತೆ ದುರಸ್ತಿಗಾಗಿ ಅನೇಕ ಬಾರಿ ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಿತ್ಯ ರೈತರು ಕಷ್ಟ ಅನುಭವಿಸುತ್ತಿದ್ದು, ಇದು ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಹೀಗಾಗಿ ಡಿ. 12ರಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹಾಗೂ ಜಿಪಂ ಸಿಇಒ ರಾಜೇಂದ್ರ ಕೆ.ವಿ. ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಬಸವಂತ ಮಾಯನ್ನಾಚೆ, ಮುಖಂಡರಾದ ಯಲ್ಲೋಜಿ ಪಾಟೀಲ, ಚಂದ್ರಕಾಂತ ದುಡುಮ್‌, ಶಿವಾಜಿ ರಕ್ಷೆ, ಮಲ್ಲಪ್ಪ ತಳವಾರ, ಮೋಹನ ಪಾಟೀಲ, ರಾಜು ಪಾವಸೆ, ಬಾಳು ಚೌಗುಲೆ, ಪುಂಡಲೀಕ ಪಾಟೀಲ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next