Advertisement

ಹೊಸಪೇಟೆ: ಅಂತ್ಯಕ್ರಿಯೆಗೆ‌ ಪರದಾಡಿದ ಗ್ರಾಮಸ್ಥರು; ಮಳೆಯಿಂದ ಹಳ್ಳ ದಾಟಲು ಪರದಾಟ

10:16 AM Oct 22, 2022 | Team Udayavani |

ಹೊಸಪೇಟೆ: ನಿರಂತರ ಮಳೆಯ ಪರಿಣಾಮ ಹಳ್ಳ-ಕೊಳ್ಳಗಳಲ್ಲಿ ನೀರು ಸಂಗ್ರಹವಾಗಿ ಸ್ಮಶಾನಕ್ಕೆ ಶವ ಹೊತ್ತೊಯ್ಯಲು ಪರದಾಡಿದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಕುಂಚೂರು ಕೆರೆ ತಾಂಡದಲ್ಲಿ ಶನಿವಾರ ನಡೆದಿದೆ.

Advertisement

ಮಳೆಯಿಂದ ಹಳ್ಳ, ಕೆರೆಗಳಲ್ಲಿ ಹೆಚ್ಚು ನೀರು ಸಂಗ್ರಹವಾಗಿ ಅಂತ್ಯಸಂಸ್ಕಾರಕ್ಕೆ ಅಡ್ಡಿಯುಂಟಾಗಿದೆ. ಮೃತಪಟ್ಟ ತಾಂಡಾ‌ದ ನಿವಾಸಿ ಶಾಂತಾಬಾಯಿ ಎಂಬ ಮಹಿಳೆಯ ಶವವನ್ನು ಹೊತ್ತು ಹಳ್ಳವನ್ನು ದಾಟಿ ಸ್ಮಶಾನಕ್ಕೆ ತೆರಳಲು ಗ್ರಾಮಸ್ಥರು ಹೆಣಗಾಡಿದರು. ಗ್ರಾಮದಲ್ಲಿ ಹೆಣ ಹೂಳಲು ಪ್ರತ್ಯೇಕ ಜಾಗ ಇಲ್ಲದ್ದಕ್ಕೆ ಈ ದುಸ್ಥಿತಿ ನಿರ್ಮಾಣವಾಗಿದೆ.

ಕುಂಚೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಂದಾಜು 2 ಸಾವಿರ ಜನಸಂಖ್ಯೆ ಹೊಂದಿರುವ ತಾಂಡದಲ್ಲಿ ಜನ ಸತ್ತರೆ ಹೂಳಲು ಸೂಕ್ತ ಸ್ಥಳವಿಲ್ಲ. ಪ್ರತ್ಯೇಕ ಸ್ಮಶಾನ ಜಾಗ ಕಲ್ಪಿಸುವಂತೆ ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.

ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ ಜಾಗವನ್ನು ಹೆಣ ಹೂಳಲು ಅನುಕೂಲ ಮಾಡಿಕೊಡಬೇಕು ಎಂದು ಲಂಬಾಣಿ ಸಮುದಾಯ ಮುಖಂಡ ಟೀಕ್ಯ ನಾಯ್ಕ ಸೇರಿ ಹಲವರು ಒತ್ತಾಯ ಮಾಡಿದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಹರಪನಹಳ್ಳಿ ತಹಶೀಲ್ದಾರ್ ಶಿವಕುಮಾರ್ ಬಿರಾದರ್ ಅವರು ಸಶ್ಮಾನಕ್ಕೆ ಕೂಡಲೇ ಜಾಗ ನೀಡಬೇಕು ಎಂದು ತಲಾಟಿಗೆ ಸೂಚನೆ ನೀಡಿದರು. ಇದರಿಂದಾಗಿ ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next