-ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಜಿಂದಾಲ್‌ಗೆ ಜಮೀನು ಪರಭಾರೆ ಮಾಡುವ ತೀರ್ಮಾನ ಸಮರ್ಥಿಸಿಕೊಂಡ ಪರಿಯಿದು.
Advertisement
ಜಿಂದಾಲ್‌ಗೆ ಭೂಮಿ ಪರಭಾರೆ ಕುರಿತು ಪ್ರತಿಪಕ್ಷ ಬಿಜೆಪಿಯಿಂದ ಪ್ರತಿಭಟನೆ ಹಾಗೂ ವಿರೋಧ ವ್ಯಕ್ತವಾಗಿರುವ ಬಗ್ಗೆ ರಾಜಭವನದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, “ತೆರಿಗೆ ಕಟ್ಟುವವರು ಉದ್ಯಮಿಗಳು. ಅವರಿಗೆ ನಾವು ಅನುಕೂಲ ಮಾಡಿಕೊಡದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.
Related Articles
Advertisement
ನಾವು ಕೈಗಾರಿಕೆ ಬೆಳೆಸದಿದ್ದರೆ ಸರ್ಕಾರ ಎಲ್ಲ ಜನರಿಗೆ ಉದ್ಯೋಗ ಕೊಡಲು ಆಗುತ್ತದೆಯೇ? ಜಿಂದಾಲ್ ಗುಡ್ ಬಿಸಿನೆಸ್ ಮನ್, ಲಾಭ ಇಲ್ಲದೆ ಯಾರೂ ಬಿಜಿನೆಸ್ ಮಾಡಲ್ಲ ಎಂದು ತಿಳಿಸಿದರು. ಈ ಹಿಂದೆ ಬಳ್ಳಾರಿಯಲ್ಲಿ ಗಣಿ ಲೂಟಿಯಿಂದಾಗಿ ನಿರುದ್ಯೋಗ ಸಮಸ್ಯೆ ಯಾವ ಸ್ವರೂಪದಲ್ಲಿದೆ ಎಂಬುದು ನನಗೆ ಗೊತ್ತಿದೆ. ಅಲ್ಲಿನ ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದು ನಮ್ಮ ಗುರಿ ಎಂದರು.
ಕೋಳಿವಾಡ ಹೇಳಿಕೆಗೆ ವ್ಯಂಗ್ಯ: “ಕೋಳಿವಾಡ ಅವರು ಮಾರ್ಚ್ ಅಂತ್ಯಕ್ಕೆ ಸಮ್ಮಿಶ್ರ ಸರ್ಕಾರ ಪತನವಾಗುವುದಾಗಿ ಹೇಳಿದ್ದಾರೆ. ನಾನು ಬಹಳ ಜನರ ಭವಿಷ್ಯ ನೋಡಿದ್ದೀನಿ, ಕೇಳಿದ್ದೀನಿ’ ಎಂದು ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಸಮ್ಮಿಶ್ರ ಸರ್ಕಾರದ ಬಗ್ಗೆ ಬಿಜೆಪಿಯವರ ಭವಿಷ್ಯವನ್ನೂ ಕೇಳಿದ್ದೀನಿ, ಯಡಿಯೂರಪ್ಪ ಅವರು ಹೇಳಿದ್ರು 20 ಶಾಸಕರು ಹೊರ ಬರ್ತಾರೆ, ಅವರೇ ಕಚ್ಚಾಡಿಕೊಳ್ತಾರೆ ಅಂತ. ಅದೆಲ್ಲವೂ ಆಯಿತೆ? ಅವರ ಖುಷಿಗೆ ಏನಾದ್ರೂ ಹೇಳಿಕೊಳ್ಳಲಿ’ ಎಂದು ಹೇಳಿದರು.