Advertisement

ಇಂಡಿಯಲ್ಲಿ ಕುಡಿಯುವ ನೀರಿಗೆ ಗ್ರಾಮಸ್ಥರ ಪರದಾಟ

01:03 PM May 25, 2018 | |

ಇಂಡಿ: ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಜನರಿಗೆ ನೀರು ತರುವುದೇ ದೊಡ್ಡ
ಕೆಲಸವಾಗಿದೆ. ಸರ್ಕಾರ ಬೇಸಿಗೆಯ ಸಮಯದಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಕೋಟ್ಯಂತರ ರೂಪಾಯಿ
ವೆಚ್ಚ ಮಾಡಿದರೂ ಸಾರ್ವಜನಿಕರಿಗೆ ಅವಶ್ಯಕತೆ ಇರುವಷ್ಟು ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಪ್ರಸಕ್ತ ವರ್ಷ ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ಬಿಸಿಲು ಹೆಚ್ಚಾಗಿದ್ದರಿಂದ ಬಿಸಿಲಿಗೆ ಹೆದರಿ ಜನ ಮನೆಯಿಂದ ಹೊರಗಡೆ ತಿರುಗಾಡದ ಪರಿಸ್ಥಿತಿ ಎದುರಾಗಿದೆ.

Advertisement

ಕುಡಿಯುವ ನೀರಿನ ತೊಂದರೆ: ಜನ-ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಜಾನುವಾರುಗಳಿಗೆ ನೀರು ಮತ್ತು ಮೇವಿನ ಸಮಸ್ಯೆ ಎದುರಾಗಿದೆ. ಇಂಡಿ ಪಟ್ಟಣ ಸೇರಿದಂತೆ ಮಾವಿನಹಳ್ಳಿ,
ತಡವಲಗಾ, ರೂಗಿ, ಬೋಳೆಗಾಂವ, ಗಣವಲಗಾ, ನಿಂಬಾಳ(ಬಿ. ಕೆ), ನಿಂಬಾಳ(ಕೆ.ಡಿ), ಲಿಂಗದಳ್ಳಿ,
ಹಳಗುಣಕಿ, ರಾಜನಾಳ, ಹೋರ್ತಿ, ಬಬಲಾದ, ಚವಡಿಹಾಳ, ಚೋರಗಿ, ಗ್ರಾಮಗಳು ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
 
ಟ್ಯಾಂಕರ್‌ ಮೂಲಕ ನೀರು: ಪ್ರಸಕ್ತ ವರ್ಷ ತಾಲೂಕಿನ 14 ಗ್ರಾಮಗಳು, 43 ಟ್ಯಾಂಕರ್‌ಗಳ ಮೂಲಕ 129 ಟ್ರಿಪ್‌ ನೀರು ಪೂರೈಕೆ ಮಾಡಲಾಗುತ್ತಿದೆ ಆದರೂ ಜನರಿಗೆ ನೀರು ಸಾಲದಂತಾಗಿದೆ.

ಕಳೆದ ಬಾರಿ ಎರಡು ತಿಂಗಳುಗಳವರೆಗೆ ಪ್ರತೀ ದಿನ 73 ಗ್ರಾಮಳಿಗೆಗ 353 ಟ್ರಿಪ್‌ ನೀರು ಸರಬರಾಜು ಮಾಡಲಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಅದರ ಅರ್ಧದಷ್ಟು ಟ್ಯಾಂಕರ್‌ ಆರಂಭವಾಗಿಲ್ಲ. ಕಾರಣ ತಾಲೂಕಿನಲ್ಲಿನ 13 ಕೆರೆಗಳು ತುಂಬಿದ್ದರಿಂದ ಈ ಬಾರಿ ನೀರಿನ ಹಾಹಾಕಾರ ಕಡಿಮೆಯಾಗಿದೆ. ಇನ್ನುಳಿದ ಕೆರೆ ಭರ್ತಿಯಾದರೆ ಮುಂದಿನ ವರ್ಷ ಟ್ಯಾಂಕರ್‌ ಆರಂಭಿಸುವ ಅವಶ್ಯಕತೆ ಬರುವುದಿಲ್ಲ

ನಮ್ಮ ಗ್ರಾಮದಲ್ಲಿ ವಿಪರೀತ ನೀರಿನ ತೊಂದರೆಯಿದೆ ಗ್ರಾಪಂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಇನ್ನಷ್ಟು ಟ್ಯಾಂಕರ್‌ಗಳನ್ನು ಹೆಚ್ಚಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು .  
 ಪ್ರಕಾಶ ಕೋರಳ್ಳಿ ಮಾವಿನಹಳ್ಳಿ ಗ್ರಾಮ

ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ನೀರಿನ ತೊಂದರೆ ಇದ್ದ ಗ್ರಾಮಗಳಿಗೆ
ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್‌ ಸಂಖ್ಯೆ ಹೆಚ್ಚಿಸಲು ಪ್ರತಿ ದಿನ ಬೇಡಿಕೆ ಬರುತ್ತಿದೆ. ಸಮಸ್ಯೆ ಇದ್ದಲ್ಲಿ
ಟ್ಯಾಂಕರ್‌ಗಳ ಸಂಖ್ಯೆ ಹೆಚ್ಚಿಸಲು ಗ್ರಾಪಂ ಅಭಿವೃದ್ಧಿ ಅಧಿ ಕಾರಿಗಳಿಗೆ ತಿಳಿಸಲಾಗಿದೆ. 
 ಡಿ.ಎಂ. ಪಾಣಿ, ತಹಶೀಲ್ದಾರ್‌

Advertisement

ತಾಲೂಕಿನಲ್ಲಿ ಎಲ್ಲಿ ನೀರಿನ ಸಮಸ್ಯೆ ಇದೆಯೋ ಎಲ್ಲ ಕಡೆಗೂ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸುವಂತೆ ತಾಲೂಕು ಆಡಳಿತಕ್ಕೆ ಕಟ್ಟುನಿಟ್ಟಿನಿಂದ ಸೂಚಿಸಲಾಗಿದೆ. ನೀರಿನ ಸಮಸ್ಯೆಗೆ ತಕ್ಷಣವೇ ಅಧಿಕಾರಿಗಳು ಸ್ಪಂದಿಸದಿದ್ದರೆ ನನ್ನ ಗಮನಕ್ಕೆ ತರಬೇಕ. 
 ಯಶವಂತರಾಯಗೌಡ ಪಾಟೀಲ, ಶಾಸಕರು.

„ಉಮೇಶ ಬಳಬಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next