Advertisement
ಮತಗಟ್ಟೆ ಸಂಖ್ಯೆ 113ರಲ್ಲಿ ಸುಮಾರು 1050 ಮತದಾರರಿದ್ದು ಇವರಲ್ಲಿ ಸುಮಾರು 800ಕ್ಕೂ ಹೆಚ್ಚು ಮತದಾರರು ಮತದಾನದಿಂದ ದೂರ ಉಳಿದು ಹಳೆ ಅಚ್ಚುಕಟ್ಟುದಾರರ ಹೋರಾಟ ಸಮಿತಿ ಆಶ್ರಯದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ತೋಟ, ಅಡಿಕೆಮರ, ಮಾವು, ಹಲಸು ಬಹು ವಾರ್ಷಿಕ ಬೆಳೆಗಳು ಒಣಗುತ್ತಿವೆ. ರೈತರು ಸಂಕಷ್ಟ ದಲ್ಲಿದ್ದಾರೆ. ಈ ಭಾಗಕ್ಕೆ ನೀರು ಹರಿಸುವಂತೆ ಜಿಲ್ಲಾಧಿಕಾರಿ, ಸುವರ್ಣಾವತಿ ನೀರಾವರಿ ಅಧಿಕಾರಿ ಗಳಿಗೆ ಅನೇಕ ಸಲ ಮನವಿ ಮಾಡಲಾಗಿದೆ, ಅಲ್ಲದೆ ಸುವರ್ಣಾವತಿ ಅಧಿಕಾರಿಗಳು ಅಚ್ಚುಕಟ್ಟುದಾರರ ಸಭೆಯಲ್ಲಿ ಭಾಗವಹಿಸಿ ನೀರು ಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ ಹೊರತು ಯಾವುದೋ
ಪ್ರಯೋಜನವಾಗಿಲ್ಲ ಸಮಿತಿ ಸದಸ್ಯರು ದೂರಿದರು. ನೀರಿಗಾಗಿ ಹೋರಾಟ ಮಾಡತ್ತಿದ್ದೇವೆ. ಇದೊಂದು ಬದುಕಿನ ಹೋರಾಟವಾಗಿದೆ. ಕೂಡಲೇ ನೀರು ಹರಿಸದೇ ಹೋದರೆ ಈ ಭಾಗದ ರೈತರು ಗುಳೆ ಹೋಗಬೇಕಾಗುತ್ತದೆ.. ಕಳೆದ ದಿನಗಳಿಂದೆ ನೀರು ಹರಿಸುವುದಾಗಿ ನೀರಾವರಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಮೊನ್ನೆ ನಡೆದ ಸಭೆಯಲ್ಲಿ ನೀರು ಬಿಡುವಂತೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ನೀರು ಹರಿಸುವ ತನಕ ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.
Related Articles
Advertisement
ಮತದಾರರ ಬಿಗಿ ಪಟ್ಟು: ಅಲ್ಲದೇ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ, ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇವೆ. ನಿಮ್ಮ ಹಕ್ಕಾದ ಮತದಾನ ಮಾಡುವಂತೆ ಮನವಿ ಮಾಡಿದರೂ ಪ್ರತಿಭಟನಾಕಾರರು ತಮ್ಮ ಪಟ್ಟು ಸಡಿಲಿಸಲಿಲ್ಲ. ಮತದಾನದಿಂದ ದೂರ ಉಳಿದರು.