Advertisement
ಆರ್‌ಟಿಸಿ ವಿಳಂಬಇಲ್ಲಿನ ನಿವಾಸಿ ರಾಜು ಬೆಟ್ಟಿನ್ ಅವರು ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವಿಸಿ ತಾಲೂಕು ಕಚೇರಿಯಲ್ಲಿ ಬ್ರೋಕರ್‌ಗಳ ಹಾವಳಿ ಹೆಚ್ಚುತ್ತಿದ್ದು ದೆ„ನಂದಿನ ಕಡತಗಳ ವಿಲೇವಾರಿಗೆ ಅವರ ಮಾತಿಗೆ ಹೆಚ್ಚಿನ ಬೆಲೆ ನೀಡುತ್ತಿರುವುದು ಸಾಮಾನ್ಯ ಜನರಿಗೆ ಆರ್‌ಟಿಸಿ ದೊರಕುವುದರಲ್ಲಿ ವಿಳಂಬವಾಗುತ್ತದೆ ಎಂದರಲ್ಲದೇ ಗೋಪಾಡಿ ಗ್ರಾ.ಪಂ.ನ ಗ್ರಾಮಲೆಕ್ಕಿಗ ಡೇನಿಯಲ್ ಅವರನ್ನು ತರಾಟೆಗೆ ತೆಗೆದುಕೊಂಡಾಗ ಹಕ್ಕುಪತ್ರ ನೀಡಲಾಗಿದ್ದರೂ ಆರ್‌ಟಿಸಿ ದೊರೆಯದ ಬಗ್ಗೆ ಈಗಾಗಲೇ ಇಲಾಖೆಯ ಸಂಬಂಧಪಟ್ಟ ಅದಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ. ಈ ಭಾಗದ ಜನರ ತೊಂದರೆಯನ್ನು ಪತ್ರ ಮುಖೇನ ತಾಲೂಕು ಕಚೇರಿಯ ಗಮನಕ್ಕೆ ತರಲಾಗಿದೆ ಎಂದರು.
ಗೋಪಾಡಿ, ಮೂಡುಗೋಪಾಡಿ ಪರಿಸರದಲ್ಲಿ ಪದೇ ಪದೇ ವಿದ್ಯುತ್ ಕಣ್ಣುಮುಚ್ಚಾಲೆ ಆಗುತ್ತಿರುವ ಬಗ್ಗೆ ಮೆಸ್ಕಾಂ ಅದಿಕಾರಿಗಳ ಗಮನಕ್ಕೆ ತಂದಾಗ ಮೆಸ್ಕಾಂ ಎಸ್‌ಒ ಸುರೇಶ್ ಬಾಬು ಅವರು ಮಾತನಾಡಿ ತಾಂತ್ರಿಕ ಕಾರಣಗಳಿಂದ ಕೆಲವೊಂದು ಸಂದರ್ಭಗಳಲ್ಲಿ ವಿದ್ಯುತ್ ಬಳಕೆದಾರರಿಗೆ ಕಿರಿಕಿರಿ ಉಂಟಾಗುತ್ತಿರುವುದು ಸಹಜ. ಇದಕ್ಕೊಂದು ಪರಿಹಾರ ಕಂಡುಕೊಳ್ಳುವಲ್ಲಿ ಇಲಾಖೆ ಬದ್ಧವಾಗಿದೆ ಎಂದರು. ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾದಿಕಾರಿ ಹಾಗೂ ಗೋಪಾಡಿ ಗ್ರಾ.ಪಂ. ನ ನೊಡೆಲ್ ಅದಿಕಾರಿ ಆಗಿರುವ ತುಳಸಿ ಅವರು ಮತನಾಡಿ ಕಂಡಕಂಡಲ್ಲಿ ಅರಣ್ಯ ನಾಶವಾಗುತ್ತಿರುವುದರಿಂದ ಮಳೆಗಾಲದಲ್ಲಿ ನೀರಿನ ಕೊರತೆ ಕಂಡುಬರುತ್ತಿದೆ. ನೀರಿನ ಕೊರತೆಯನ್ನು ನಿಭಾಯಿಸುವಲ್ಲಿ ಗಿಡ ಮರಗಳನ್ನು ಬೆಳೆಸುವುದರಲ್ಲಿ ಪ್ರತಿಯೋರ್ವ ಗ್ರಾಮವಾಸಿಯು ಹೆಚ್ಚಿನ ಕಾಳಜಿ ವಹಿಸಿ ಶ್ರಮಿಸಬೇಕೆಂದರು. ಪ್ಲಾಸ್ಟಿಕ್ ಮುಕ್ತ ಗ್ರಾ.ಪಂ.
ಗೋಪಾಡಿ ಗ್ರಾಮವನ್ನು ಸಂಪೂರ್ಣ ವಾಗಿ ಪ್ಲಾಸ್ಟಿಕ್ ಮುಕ್ತಗೊಳಿಸುವ ಬಗ್ಗೆ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು ಆ ಬಗ್ಗೆ ಗ್ರಾಮಸ್ಥರು ಕೈಜೋಡಿಸಬೇಕೆಂದು ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಪುತ್ರನ್ ಮನವಿ ಮಾಡಿದರು.
Related Articles
Advertisement
ಈ ಯೋಜನೆಯಲ್ಲಿ ತರಬೇತಿ ಪಡೆದ ತಾ.ಪಂ. ಸದಸ್ಯೆ ಲೆ„ಲೆಟ್ ಬೆರೆಟ್ಟೋ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾನಿರತೆ ಸುಮಂಗಲ, ವಿಜಯಲಕ್ಷ್ಮೀ ಅವರ ನೇತƒತ್ವದಲ್ಲಿ ಗ್ರಾಮದ ಪ್ರತಿ ಮನೆಗಳಿಗೆ ಭೇಟಿ ನೀಡಿ ಸರ್ವೇ ನಡೆಸಿ ಆ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುವುದರೊಡನೆ ಅಕ್ಟೋಬರ್ ತಿಂಗಳೊಳಗಡೆ ಸ್ವತ್ಛ ಗ್ರಾಮಪಂಚಾಯತ್ ಆಗಿ ಗೋಪಾಡಿ ಗ್ರಾ.ಪಂ. ನ್ನು ರೂಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.ಸಭಾಧ್ಯಕ್ಷತೆಯನ್ನು ಗೋಪಾಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಪುತ್ರನ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ವೈಲೆಟ್ ಬೆರೆಟ್ಟೋ , ಅರಣ್ಯಾಧಿಕಾರಿ ತುಳಸಿ, ಆರೋಗ್ಯಾದಿಕಾರಿ ಡಾ| ಶೋಭಾ ಅಲ್ಲದೇ ವಿವಿಧ ಇಲಾಖೆಯ ಅದಿಕಾರಿಗಳು, ಗೋಪಾಡಿ ಗ್ರಾ.ಪಂ. ಸರ್ವ ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಸ್ವಾಗತಿಸಿ, ವಂದಿಸಿದರು.