Advertisement

ಗ್ರಾಮ ವಾಸ್ತವ್ಯ ವಿಭಿನ್ನವಾಗಿರುತ್ತೆ: ಎಚ್‌ಡಿಕೆ

07:29 AM Jun 08, 2019 | Lakshmi GovindaRaj |

ಬೆಂಗಳೂರು: “ಈ ಬಾರಿಯ ನನ್ನ ಗ್ರಾಮ ವಾಸ್ತವ್ಯ ವಿಭಿನ್ನವಾಗಿರುತ್ತದೆ. ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕೊಡಿಸಲಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರನ್ನು ಮೆಚ್ಚಿಸೋಕೆ ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ. ಮಧ್ಯರಾತ್ರಿ ವಿಸಿಟ್‌ ಮಾಡುವುದಿಲ್ಲ. ಬೆಳಗ್ಗೆ 10 ಗಂಟೆಗೆ ಪಂಚಾಯಿತಿ ಕಚೇರಿಯಲ್ಲಿ ಹಾಜರಿರುತ್ತೇನೆ. ಇಡೀ ಜಿಲ್ಲೆಯ ಅಧಿಕಾರಿಗಳು ಅಲ್ಲಿ ಇರುತ್ತಾರೆ ಎಂದರು.

ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಸ್ವೀಕರಿಸುವ ಅರ್ಜಿಗಳ ವಿಲೇವಾರಿ ತಕ್ಷಣ ಆಗುವಂತೆ ನೋಡಿಕೊಳ್ಳುತ್ತೇನೆ. ಗ್ರಾಮ ವಾಸ್ತವ್ಯಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಂಡೇ ಹೋಗುತ್ತಿದ್ದೇನೆ. ಟೀಕಾಕಾರರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

“ಮಾಧ್ಯಮದವರ ಧಾರಾವಾಹಿಯಿಂದ ಸರ್ಕಾರ ಹೋಗುತ್ತಾ?. ಎಷ್ಟು ಚಿತ್ರಹಿಂಸೆ ಅನುಭವಿಸಿದ್ದೇನೆ ನಾನು. ಮಾಧ್ಯಮದವರನ್ನು ತೃಪ್ತಿಪಡಿಸಲು ನಾನು ಕೆಲಸ ಮಾಡಿಲ್ಲ. ನಾಡಿನ ಜನರ ತೃಪ್ತಿಗಾಗಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

“ನಮ್ಮ ಕುಟುಂಬ ಕಣ್ಣೀರು ಹಾಕಿದರೆ ಮೊಸಳೆ ಕಣ್ಣೀರು ಅಂತ ಕರೀತಾರೆ. ಅಂಗವಿಕಲರನ್ನು, ಬಡವರನ್ನು ನೋಡಿದರೆ ನಮಗೆ ಸಹಜವಾಗಿ ಕಣ್ಣೀರು ಬರುತ್ತದೆ. ಎರಡು ತಿಂಗಳಲ್ಲಿ ನಲವತ್ತು ಲಕ್ಷ ರೈತ ಕುಟುಂಬಗಳ ಸಾಲಮನ್ನಾ ಆಗಲಿದೆ. ರೈತರ ಸಾಲಮನ್ನಾ ಬಗ್ಗೆ ಕಿರು ಹೊತ್ತಿಗೆ ಬಿಡುಗಡೆ ಮಾಡುತ್ತೇನೆ’ ಎಂದು ತಿಳಿಸಿದರು.

Advertisement

“ತುರ್ತು ಪರಿಸ್ಥಿತಿ ವಿರೋಧಿಸಿ ಜೈಲಿಗೆ ಹೋದ ತಂದೆಯ ಹೊಟ್ಟೆಯಲ್ಲಿ ಹುಟ್ಟಿದ ಮಗ ಈ ಕುಮಾರಸ್ವಾಮಿ. ನಾನು ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡುವವನಲ್ಲ’ ಎಂದರು.

ಅಪಪ್ರಚಾರ ಮಾಡಿದ್ದಕ್ಕೆ 37 ಸ್ಥಾನ: ದೇವೇಗೌಡರ ಹೋರಾಟದಿಂದ ಜೆಡಿಎಸ್‌ ಪಕ್ಷ ಉಳಿದಿದೆ. ವಿಧಾನಸಭೆ ಚುನಾವಣೆಯಲ್ಲಿ ಕೇವಲ 37 ಸ್ಥಾನಗಳಲ್ಲಿ ಗೆಲ್ಲೋ ವಾತಾವರಣ ಬಂದಿದ್ದರಿಂದ ಇಷ್ಟೆಲ್ಲಾ ಸಮಸ್ಯೆಯಾಗಿದೆ. ಕನಿಷ್ಠ 65 ರಿಂದ 70 ಸ್ಥಾನ ಗೆಲ್ಲುವ ಭರವಸೆ ಇತ್ತು. ಆದರೆ, ಅಲ್ಪಸಂಖ್ಯಾತರನ್ನು ತಪ್ಪು ದಾರಿಗೆ ಎಳೆದರು.

ಜೆಡಿಎಸ್‌ ಗೆದ್ದರೆ ಬಿಜೆಪಿ ಜತೆ ಹೋಗ್ತಾರೆ ಅಂತ ಅಪಪ್ರಚಾರ ಮಾಡಿದರು. ಮುಸ್ಲಿಂ ಸಮುದಾಯ ಸರಿಯಾದ ನಿರ್ಧಾರ ಮಾಡಿದ್ದರೆ ಬಿಜೆಪಿಗೆ 104 ಸ್ಥಾನ ಬರುತ್ತಿರಲಿಲ್ಲ. ಅವರು “ಆಪರೇಷನ್‌ ಕಮಲ’ಕ್ಕೂ ಹೋಗುತ್ತಿರಲಿಲ್ಲ ಎಂದು ಆಗ ಜೆಡಿಎಸ್‌ ವಿರುದ್ಧ ವಾಗಾœಳಿ ನಡೆಸಿದ್ದ ಕಾಂಗ್ರೆಸ್‌ ನಾಯಕರ ವಿರುದ್ಧ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next