Advertisement

ಗ್ರಾಮವಾಸ್ತವ್ಯ ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಿ

05:01 PM Jul 17, 2022 | Team Udayavani |

ಗುಡಿಬಂಡೆ: ತಾಲೂಕಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿಸ್ಥಳದಲ್ಲಿ ಬಗೆಹರಿಸಲು ಸಾಧ್ಯವಾಗುವುದಾದರೆಸಾರ್ವಜನಿಕರ ಸಮ್ಮುಖದಲ್ಲೆ ಬಗೆಹರಿಸಿ ಕೊಡುವ ವಿನೂತನ ಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆಕಾರ್ಯಕ್ರಮ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಹಶಿಲ್ದಾರ್‌ ಸಿಗ್ಬತ್ತುಲ್ಲಾ ತಿಳಿಸಿದರು.

Advertisement

ತಾಲೂಕಿನ ಕಮ್ಮಡಿಕೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯ ಕ್ರಮವಾದ ಇದರಲ್ಲಿ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಸಿಗುವುದರಿಂದ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದುಹೇಳಿದರು.

ರೇಷ್ಮೆ ಇಲಾಖೆ ಮುನಿಸ್ವಾಮಿ ಮಾತನಾಡಿ ಈಗ ಮಳೆಗಾಲ ಪ್ರಾರಂಭವಾಗಿದ್ದು ರೇಷ್ಮೆ ಕಡ್ಡಿ ನಾಟಿ ಮಾಡಿಕೊಳ್ಳಲು ಅವಕಾಶವಿದ್ದು, ತಾಲೂಕಿನ ಕೃಷಿಮತ್ತು ತೋಟಗಾರಿಕ ಬೆಳೆಗಳ ಜೊತೆಗೆ ರೇಷ್ಮೆ ಬೆಳೆಯನ್ನು ಬೆಳೆದು ತಮ್ಮ ಕುಟುಂಬವನ್ನುಆರ್ಥಿಕವಾಗಿ ಸಧೃಡಗೊಳ್ಳುವಂತೆ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮನವಿ ಮಾಡಿದರು.

ತೋಟಗಾರಿಕೆ ಇಲಾಖೆ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ ಮಾವು, ಸೀಬೆ,ದಾಳಿಂಬೆ, ಗುಲಾಬಿ ಸೇರಿದಂತೆ ಬಹುವಾರ್ಷಿಕ ಬೆಳೆಗಳಿಗೆ ನರೇಗಾ ಯೋಜನೆಯ ಮೂಲಕಅನುದಾನ ಬಳಸಿಕೊಂಡು ರೈತರು ಅಭಿವೃದ್ಧಿಹೊಂದಬೇಕು ಎಂದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಚಲಪತಿ ಮಾತನಾಡಿ, ನರೇಗಾ ಯೋಜನೆಯ ಮೂಲಕ ಗ್ರಾಮಗಳಲ್ಲಿ ಮೂಲ ಸೌಲಭ್ಯಗಳಾದ ಸ್ಮಶಾನಗಳ ಅಭಿವೃದ್ಧಿ, ಶಾಲಾ ಮೈದಾನ, ಅಂಗನವಾಡಿ ಕಟ್ಟಡ, ಚರಂಡಿ ವ್ಯವಸ್ಥೆ,ಬದುಗಳ ನಿರ್ಮಾಣ, ಒಕ್ಕಣೆ ಕಣಗಳು, ಸಿಸಿ ರಸ್ತೆಗಳು, ಮನೆಗಳ ನಿರ್ಮಾಣ, ವೈಯಕ್ತಿಕ ಶೌಚಾಲಯಗಳನ್ನು ಮಾಡಿಸಿಕೊಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next