ಬೆಂಗಳೂರು/ ಹೆಬ್ರಿ/ ವಿಟ್ಲ: ರಾಜ್ಯಾದ್ಯಂತ ವಿವಿಧ ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಶನಿವಾರ ಗ್ರಾಮ ವಾಸ್ತವ್ಯ ನಡೆಸಿದರು. ಜಡ ಸ್ಥಿತಿಯಲ್ಲಿದ್ದ ಕಂದಾಯ ಇಲಾಖೆಯಲ್ಲಿ ಬದಲಾವಣೆ ಪರ್ವ ಆರಂಭಿಸಿ ದ್ದೇನೆ. ಹೊಸತನದ ಚಿಂತನೆಗಳೊಂದಿಗೆ ಬದಲಾವಣೆ ತರುವುದು, ಆಡಳಿತವನ್ನು ಜನಸ್ನೇಹಿಗೊಳಿ ಸುವುದು ನನ್ನ ಉದ್ದೇಶ ಎಂದು ಧಾರವಾಡ ಜಿಲ್ಲೆಯ ಛಬ್ಬಿಯಲ್ಲಿ ಗ್ರಾಮ ವಾಸ್ತವ್ಯ ನಡೆಸಿದ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಉಡುಪಿ ಡಿಸಿ ಹೆಬ್ರಿಯ ಮುದ್ರಾಡಿಯಲ್ಲಿ ಮತ್ತು ದಕ್ಷಿಣ ಕನ್ನಡ ಡಿಸಿ ವಿಟ್ಲಪಟ್ನೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸಿದರು.
ಉದಯವಾಣಿ ವರದಿಗೆ ಸ್ಪಂದನೆ 8 ಮಂದಿಗೆ ಹಕ್ಕುಪತ್ರ :
ಅರಣ್ಯ ಇಲಾಖೆ ವ್ಯಾಪ್ತಿಯ 9 ಮಂದಿ ಗ್ರಾಮಸ್ಥರಿಗೆ 94ಸಿ ಹಕ್ಕುಪತ್ರ ವಿತರಣೆಯಾಗಿಲ್ಲ ಎಂದು “ಉದಯವಾಣಿ’ ಶುಕ್ರವಾರ ವರದಿ ಮಾಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಡಿಸಿಗೆ ವರದಿ ಸಲ್ಲಿಸಿ, 9ರಲ್ಲಿ 8 ಮಂದಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಒಬ್ಬರ ಜಾಗವನ್ನು ಕಂದಾಯ ಮತ್ತು ಅರಣ್ಯ ಇಲಾಖೆಗಳ ಜಂಟಿ ಕಾರ್ಯಾಚರಣೆಯಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಅವರು ತಿಳಿಸಿದರು.