Advertisement
ಅಧಿಕಾರಿಗಳು ಕಡತ ವಿಲೇವಾರಿಗೆ ಸಾರ್ವಜನಿಕರನ್ನು ಸತಾಯಿಸಿ ಹಣಕ್ಕೆ ಪೀಡಿಸಿದರೆ ನನ್ನ ಗಮನಕ್ಕೆ ತಂದಲ್ಲಿ ಅಂತಹ ಅಧಿಕಾರಿಗಳನ್ನು ನೇರವಾಗಿ ಮನೆಗೆ ಕಳುಹಿಸುತ್ತೇನೆ ಎಂದರು.
Related Articles
ಅಧಿಕಾರಿಗಳು 94ಸಿಯಲ್ಲಿ ಹಕ್ಕುಪತ್ರ ನೀಡಲು ಸತಾಯಿಸುತ್ತಾರೆ ಎಂದು ಪದ್ಮಾವತಿ ದೂರಿದರು. ಇದಕ್ಕೆ ಉತ್ತರಿಸಿದ ಡಿ.ಸಿ., 94ಸಿಯಲ್ಲಿ ಬೋಗಸ್ ಅರ್ಜಿಯೂ ಇದೆ.
Advertisement
ಅರ್ಹರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಸಮಸ್ಯೆಗಳನ್ನು ಎಡಿಸಿಯವರಲ್ಲಿ ತಿಳಿಸಿ ಪರಿ ಹರಿಸಿಕೊಳ್ಳಬೇಕು ಎಂದು ಹೇಳಿದರು.
ಧ್ವನಿವರ್ಧಕದ ಸಮಸ್ಯೆ-ದೂರುಪಕ್ಕದ ಮಸೀದಿಯಲ್ಲಿ ನಿಯಮ ಮೀರಿ ಧ್ವನಿವರ್ಧಕ ಬಳಸಲಾಗುತ್ತಿದೆ. ಇದರಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಸ್ಥಳೀಯಾಡಳಿತಕ್ಕೆ ಲಿಖೀತ ಹಾಗೂ ಪೊಲೀಸ್ ಇಲಾಖೆಗೆ ಮೌಖೀಕ ದೂರು ನೀಡಲಾಗಿದೆ. ಮಸೀದಿಯವರು ಯಾವುದೇ ಬದಲಾವಣೆ ಮಾಡಿಲ್ಲ ಎಂದು ಕೊçಲ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ದೂರಿದರು. ನ್ಯಾಯಾಲಯದ ಆದೇಶ ಪ್ರಕಾರ 75 ಡೆಸಿಬಲ್‌ರಿಂದ ಜಾಸ್ತಿ ಶಬ್ದ ಬರುವ ಹಾಗಿಲ್ಲ, ನಿಯಮ ಮೀರಿದರೆ ಕ್ರಮ ಜರಗಿಸಿ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಅವರು ಪೊಲೀಸರಿಗೆ ಸೂಚನೆ ನೀಡಿದರು. ಸಮಸ್ಯೆಗಳ ಬಗ್ಗೆ ಚರ್ಚೆ
ದಲಿತ ಮಹಿಳೆಯೊಬ್ಬರು ನಿವೇಶನ ದೊರೆಯದ ಬಗ್ಗೆ ದೂರಿದರು. ಅಡಿಕೆಗೆ ಹಳದಿ ರೋಗ ಇನ್ನಿತರ ಸಮಸ್ಯೆಗಳ ಬಗ್ಗೆ ಶಿವಣ್ಣ ಗೌಡ ಕಕ್ವೆ ಗಮನ ಸೆಳೆದರು. ಆಲಂಕಾರು ಹಾಗೂ ಬಲ್ಯ ಗ್ರಾಮದಲ್ಲಿ ಖಾಯಂ ಗ್ರಾಮ ಕರಣಿಕರ ನೇಮಕವಾಗಬೇಕು, ಆಲಂಕಾರನ್ನು ಹೋಬಳಿ ಮಾಡಬೇಕು, 110 ಕೆವಿ ವಿದ್ಯುತ್ ಸಬ್‌ಸ್ಟೇಶನ್ ಶೀಘ್ರ ಅನುಷ್ಠಾನವಾಗಬೇಕು ಮೊದಲಾದ ಬೇಡಿಕೆಗಳನ್ನು ಗ್ರಾಮಸ್ಥರು ಸಭೆಯ ಮುಂದಿಟ್ಟರು. ಜಿಲ್ಲಾಧಿಕಾರಿಯವರು ತಡರಾತ್ರಿ ತನಕ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅರ್ಜಿಗಳ ವಿಲೇವಾರಿ ಮಾಡಿದರು. ಸಭೆಯಲ್ಲಿ ಸರಕಾರದ ವಿವಿಧ ಯೋಜನಗಳ 120 ಫಲಾನುಭವಿಗಳಿಗೆ ಹಕ್ಕುಪತ್ರ, ಪರಿಹಾರ ಧನ ವಿತರಿಸಲಾಯಿತು.